ಜ್ವರ ಎಂದು ಆಸ್ಪತ್ರೆಗೆ ಹೋದ ಮಹಿಳೆಯ ಶ್ವಾಸಕೋಶದಲ್ಲಿ ಕಾಂಡೋಮ್ ಪತ್ತೆ: 6 ತಿಂಗಳಿಂದ ಮುಚ್ಚಿಟ್ಟಿದ್ದ ರಹಸ್ಯ ಬಯಲು!

Condom
Published on

ನವದೆಹಲಿ: ಆರು ತಿಂಗಳಿಂದ ದಪ್ಪ ಸಿಂಬಳ, ಕೆಮ್ಮು ಮತ್ತು ಜ್ವರದಂತಹ ಲಕ್ಷಣಗಳನ್ನು ಹೊಂದಿದ ಮಹಿಳೆಯೊಬ್ಬಳು ಕ್ಷಯ ರೋಗ ಇರಬಹುದು ಎಂಬ ಭಯದಿಂದ ತಪಾಸಣೆಗೆಂದು ಆಸ್ಪತ್ರೆಗೆ ಹೋದಾಗ ಆಕೆ ಆರು ತಿಂಗಳಿಂದ ಬಚ್ಚಿಟ್ಟಿದ್ದ ರಹಸ್ಯ ಬಯಲಾಗಿದೆ.

ಶಾಲಾ ಶಿಕ್ಷಕಿಯಾಗಿರುವ ಮಹಿಳೆ, ತಾನು ಕ್ಷಯ ರೋಗದಿಂದ ಬಳಲುತ್ತಿರುವುದಾಗಿ ಭಾವಿಸಿದ್ದಳು. ಆಸ್ಪತ್ರೆಗೆ ಭೇಟಿ ನೀಡಿದಾಗ ತಪಾಸಣೆ ನಡೆಸಿದ ವೈದ್ಯರು ಕ್ಷಯ ರೋಗ ಕುರಿತು ಅನೇಕ ಪರೀಕ್ಷೆಗಳನ್ನು ಮಾಡಿಸಿದಾಗ ಯಾವುದರಲ್ಲೂ ಪಾಸಿಟಿವ್​ ಬರದಿರುವುದನ್ನು ಗಮನಿಸಿದ್ದಾರೆ. ಬಳಿಕ ಸಮಸ್ಯೆ ಏನಿರಬಹುದು ಎಂದು ತಿಳಿಯಲು ಎಕ್ಷ್​ರೇ ಮಾಡಿಸಿದಾಗ ನಿಜ ಸಂಗತಿ ಬೆಳಕಿಗೆ ಬಂದಿದೆ.

ಆರಂಭದಲ್ಲಿ ಅದು ಕಾಂಡೋಮ್​ ಎಂದು ಗೊತ್ತಾಗಿಲ್ಲ. ಯಾವುದೋ ಸಣ್ಣ ಪ್ಯಾಕೆಟ್​ ರೀತಿಯಲ್ಲಿ ಶ್ವಾಸಕೋಶದಲ್ಲಿ ಸಿಲುಕಿರುವುದನ್ನು ನೋಡಿದ್ದಾರೆ. ಬಳಿಕ ವೈದ್ಯರು ಆಪರೇಷನ್​ ಮೂಲಕ ಪ್ಯಾಕೆಟ್​ ರೀತಿಯ ವಸ್ತುವನ್ನು ತೆಗೆದಾಗಲೇ ಗೊತ್ತಾಗಿದ್ದು, ಅದು ಕಾಂಡೋಮ್​ ಎಂದು. ಇದನ್ನು ತಿಳಿದ ಮಹಿಳೆಗೂ ಸಹ ಒಮ್ಮೆ ಆಘಾತವಾಗಿದೆ.

ಕಾಂಡೋಮ್​ ಹೇಗೆ ಶ್ವಾಸಕೋಶದೊಳಗೆ ಹೋಯಿತು ಎಂಬುದನ್ನು ತಿಳಿಯಲು ಮಹಿಳೆ ಮತ್ತು ಆಕೆಯ ಪತಿಯನ್ನು ವಿಚಾರಿಸಿದಾಗ, ಮೌಖಿಕ ಲೈಂಗಿಕತೆ (ಒರಲ್​ ಸೆಕ್ಸ್​) ವೇಳೆ ಕಾಂಡೋಮ್​ ಮಹಿಳೆಯ ಬಾಯಿಯೊಳಗೆ ಸೇರಿದೆ. ಲೈಂಗಿಕ ಕ್ರಿಯೆ ನಡೆಸುವ ಸಮಯದಲ್ಲಿ ಕಾಂಡೋಮ್​ ಸಡಿಲವಾಗಿತ್ತು ಎಂದು ತಿಳಿಸಿದ್ದಾರೆ. ಇದರಿಂದಲೇ ಅನೇಕ ದಿನಗಳವರೆಗೆ ಕೆಮ್ಮು ಮತ್ತು ಸೀನು ಆಗಾಗ ಬರುತ್ತಿತ್ತು ಎಂದು ದಂಪತಿ ವೈದ್ಯರ ಮುಂದೆ ಬಿಚ್ಚಿಟ್ಟಿದ್ದಾರೆ.

ವೈದ್ಯರಿಗೆ ಹೇಗೆ ಹೇಳುವುದು ಎಂಬ ಮುಜುಗರದಿಂದ ದಂಪತಿ ಈವರೆಗೂ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಯಾವಾಗ ಆರೋಗ್ಯದಲ್ಲಿ ತೀವ್ರ ಪರಿಣಾಮ ಬೀರಿತೋ ಆವಾಗ ತಪಾಸಣೆ ನಡೆಸಿದ್ದಾರೆ. ಶ್ವಾಸಕೋಶದಲ್ಲಿರುವುದು ಕಾಂಡೋಮ್​ ಎಂದು ತಿಳಿದಾಗ ಇನ್ನು ಮುಚ್ಚಿಟ್ಟರೆ ಪ್ರಯೋಜನವಿಲ್ಲ ಎಂದು ಕೊನೆಗೂ ಸತ್ಯವನ್ನು ದಂಪತಿ ಒಪ್ಪಿಕೊಂಡಿದ್ದಾರೆ.

ಸದ್ಯ ಮಹಿಳೆಗೆ ಶಸ್ತ್ರ ಚಿಕಿತ್ಸೆ ನಡೆದಿದ್ದು ಯಾವುದೇ ಪ್ರಾಣಾಪಾಯ ಇಲ್ಲ. ಆದರೆ, ಇನ್ನುಳಿದ ಕಾಂಡೋಮ್​ ತುಂಡುಗಳನ್ನು ತೆಗೆಯಲು ಮಹಿಳೆ ಮತ್ತೆ ಆಪರೇಷನ್​ಗೆ ಒಳಗಾಗಬೇಕಾದ ಸನ್ನಿವೇಶ ಎದುರಾಗಿದ್ದು, ವೈದ್ಯರ ತಪಾಸಣೆ ಮುಂದುವರಿದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net