ಸಚಿವರ ಮುಂದೆಯೇ ಪಿಕ್​ಪ್ಯಾಕೆಟ್​: ಖದೀಮನ ಕೈಚಳಕದ ಫೋಟೋ ಸಿಕ್ಕಾಪಟ್ಟೆ ವೈರಲ್​!

Theft
Published on

ಹೈದರಾಬಾದ್​: ಜನಜಂಗುಳಿಯನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ಕೈಚಳಕ ತೋರುತ್ತಾರೆಂಬುದು ಗೊತ್ತಿದೆ. ಆದರೆ, ಅವರ ಕೈಚಳಕ ಯಾವ ರೀತಿ ಇರುತ್ತದೆ ಎಂಬುದನ್ನು ಬಹುಶಃ ಯಾರು ನೋಡಿರುವುದಿಲ್ಲ. ಆದರೆ, ಇಲ್ಲೊಂದು ಸ್ಥಳದಲ್ಲಿ ಖದೀಮನ ಕೈಚಳಕ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿಬಿಟ್ಟಿದೆ.

ತೆಲಂಗಾಣದ ಭುವನಗಿರಿ ಜಿಲ್ಲೆಯ ಮೊಟ್ಕುರು ಕೃಷಿ ಮಾರುಕಟ್ಟೆಯ ನೂತನ ಚೇರ್​ಮನ್​ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸಚಿವರಾದ ಜಗದೀಶ್​ ರೆಡ್ಡಿ ಮತ್ತು ನಿರಂಜನ್​ ರೆಡ್ಡಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಸಚಿವರು ಅಂದ ಮೇಲೆ ಈ ವೇಳೆ ಸಾಮಾನ್ಯವಾಗಿಯೇ ಜನ ಸೇರಿದ್ದರು.

ಕಾರ್ಯಕ್ರಮಕ್ಕೆ ಆಗಮಿಸಿದ ಸಚಿವರಿಗೆ ಹೂಗುಚ್ಛ ನೀಡಿ ಸ್ವಾಗತಿಸಬೇಕಾದರೆ ತೆಲಂಗಾಣ ರಾಷ್ಟ್ರೀಯ ಪಕ್ಷದ (ಟಿಆರ್​ಎಸ್​) ನಾಯಕರ ಜೇಬಿಗೆ ಕಳ್ಳನೊಬ್ಬ ಕೈ ಹಾಕಿರುವ ದೃಶ್ಯ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದೆ. ಕಾರ್ಯಕರ್ತರು, ಸ್ಥಳೀಯ ನಾಯಕರು ಒಂದೇ ಕಡೆ ಒಟ್ಟಿಗೆ ಸೇರಿದ್ದು, ಖದೀಮರಿಗೆ ತಮ್ಮ ಕೈಚಳಕ ತೋರಲು ನೆರವಾಗಿದೆ. ಖದೀಮ ಕೈಚಳಕದ ಫೋಟೋ ಸದ್ಯ ಸಾಮಾಜಿಕ ಜಾಲತಾನದಲ್ಲಿ ವೈರಲ್​ ಆಗಿದೆ.

ಇನ್ನು ಸ್ಥಳದಲ್ಲಿ ಸಾಕಷ್ಟು ಪೊಲೀಸರಿದ್ದರೂ ಕೂಡ ಕಳ್ಳರು ತಮ್ಮ ಕೈಚಳಕವನ್ನು ತೋರಿ ಮೂರು ಪ್ಯಾಕೆಟ್​ ಅನ್ನು ಎಗಿಸಿದ್ದಾರೆ. ಕಾರ್ಯಕ್ರಮ ಮುಗಿದ ಬಳಿಕ ಪ್ಯಾಕೆಟ್​ ಕಳ್ಳತನವಾಗಿರುವುದು ರಾಜಕೀಯ ನಾಯಕರಿಗೆ ಗೊತ್ತಾಗಿದೆ. ಬಳಿಕ ಠಾಣೆಗೆ ತೆರಳಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿರುವ ಪೊಲೀಸರು ಕಳ್ಳರ ಪತ್ತೆಗೆ ಮುಂದಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net