More

    ವಿದ್ಯಾರ್ಥಿನಿಯರ ಬಟ್ಟೆಯೊಳಗೆ ಬೇಕಂತಲೇ ಸೀಮೆಸುಣ್ಣ ಬೀಳಿಸ್ತಿದ್ದ: ನಿವೃತ್ತ ಶಿಕ್ಷಕನ ವಿಕೃತಿ ಬಯಲು, ಜಾಮೀನಿಗೆ ಆಕ್ರೋಶ

    ಕೊಚ್ಚಿ: ಪೊಕ್ಸೊ ಪ್ರಕರಣದಲ್ಲಿ ಮಾಜಿ ಶಿಕ್ಷಕ ಹಾಗೂ ಮಲಪ್ಪುರಂ ಕಾರ್ಪೊರೇಷನ್​ ಸದಸ್ಯ ಕೆ.ವಿ. ಸಸಿ ಕುಮಾರ್​ಗೆ ಜಾಮೀನು ನೀಡಿರುವುದನ್ನು ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಪ್ರತಿಭಟನೆ ನಡೆಸಲಾಗುತ್ತಿದೆ.

    ಕಳೆದ 30 ವರ್ಷಗಳ ಕಾಲ ನಡೆದಿದ್ದ ಲೈಂಗಿಕ ದೌರ್ಜನ್ಯವು ಶಿಕ್ಷಕ ವೃತ್ತಿಯಿಂದ ನಿವೃತ್ತಿ ಪಡೆದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಸಿ ಕುಮಾರ್​ ಶೇರ್​ ಮಾಡಿದ್ದ ಪೋಸ್ಟ್​ಗೆ ಮಾಜಿ ವಿದ್ಯಾರ್ಥಿನಿಯೋರ್ವಳು ಕಾಮೆಂಟ್ ಮಾಡಿದ ಬಳಿಕ ಬೆಳಕಿಗೆ ಬಂದಿತು. ಅಲ್ಲದೆ, ಇದರ ಬೆನ್ನಲ್ಲೇ ಅನೇಕ ವಿದ್ಯಾರ್ಥಿನಿಯರು ಕೂಡ ಸಸಿ ಕುಮಾರ್​ ವಿರುದ್ಧ ದೂರುಗಳನ್ನು ದಾಖಲಿಸಿದರು. ಇದಾದ ಬೆನ್ನಲ್ಲೇ ಪೊಲೀಸರು ಮಾಜಿ ಶಿಕ್ಷಕನ ವಿರುದ್ಧ ಎಫ್​ಐಆರ್​ ದಾಖಲಿಸಿದರು.

    ಸ್ವತಂತ್ರ ಪತ್ರಕರ್ತ ಸರಣ್ಯ ಎಂ ಚಾರು ತಮ್ಮ ಫೇಸ್​ಬುಕ್​ನಲ್ಲಿ ಸಸಿ ಕುಮಾರ್​ಗೆ ಜಾಮೀನು ನೀಡಿರುವುದನ್ನು ವಿರೋಧಿಸಿ ಬರೆದುಕೊಂಡಿದ್ದಾರೆ. ಕೇರಳದ ಇತಿಹಾದಲ್ಲೇ ಮೊದಲ ಬಾರಿಗೆ ಇಂಥದ್ದೊಂದು ನೀಚ ಕೃತ್ಯ ಜರುಗಿದೆ. ಹೀಗಿರುವಾಗ ಆರೋಪಿಗೆ ನ್ಯಾಯಾಲಯ ಜಾಮೀನು ನೀಡುವ ಮೂಲಕ ಸಂತ್ರಸ್ತ ಹೆಣ್ಣು ಮಕ್ಕಳಿಗೆ ನ್ಯಾಯವನ್ನು ನಿರಾಕರಿಸಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಮತ್ತಷ್ಟು ಬರೆದಿರುವ ಸರಣ್ಯ, ಈತ ಹೆಣ್ಣು ಮಕ್ಕಳ ಬಟ್ಟೆಯೊಳಗೆ ಬೇಕಂತಲೇ ಸೀಮೆಸುಣ್ಣ ಬೀಳಿಸಿ, ಅದನ್ನು ಬರಿಗೈನಿಂದ ತೆಗೆದುಕೊಳ್ಳುವ ಮೂಲಕ ಅವರೊಂದಿಗೆ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದ. ಅಲ್ಲದೆ, ಬಟ್ಟೆಯ ಮೇಲೆ ನೀರು ಸುರಿದು ವಿದ್ಯಾರ್ಥಿನಿಯರ ಒದ್ದೆಯಾದ ದೇಹವನ್ನು ನೋಡಿ ವಿಕೃತ ಆನಂದ ಪಡುತ್ತಿದ್ದ ಮತ್ತು ಸ್ವಚ್ಛತೆ ಪರಿಶೀಲನೆ ಹೆಸರಲ್ಲಿ ವಿದ್ಯಾರ್ಥಿನಿಯರ ಶೌಚಗೃಹಕ್ಕೆ ತೆರಳಿ ವಿಕೃತವಾಗಿ ನಡೆದುಕೊಳ್ಳುತ್ತಿದ್ದ ಎಂಬ ದೊಡ್ಡ ಆರೋಪಗಳು ಸಸಿ ಕುಮಾರ್​ ಮೇಲಿದೆ.

    ಈತನ ವಿರುದ್ಧ ಈ ಮೊದಲೇ ಹತ್ತು ಮಕ್ಕಳು ನೀಡಿದ ದೂರು ಇನ್ನೂ ಬಹಿರಂಗವಾಗಿಲ್ಲ. ಆರೋಪಿಯನ್ನು ಸಾರ್ವಜನಿಕವಾಗಿ ಮತ್ತು ರಹಸ್ಯವಾಗಿ ರಕ್ಷಿಸಲಾಗುತ್ತಿದೆ ಎಂದು ಹೇಳಲಾಗಿದೆ. (ಏಜೆನ್ಸೀಸ್​)

    ಪ್ರೀತಿಯ ಪತಿಗೆ ನಯನಾತಾರಾ ಕೊಟ್ಟ ದುಬಾರಿ ಉಡುಗೊರೆ ಬೆಲೆ ಕೇಳಿದ್ರೆ ಬೆರಗಾಗ್ತೀರಾ!

    ಪಬ್​ ಮೇಲೆ ನಡೆದ ಪೊಲೀಸರ ದಾಳಿಯೇ ಯುವತಿಗೆ ವರವಾಯ್ತು! ಕೆಟ್ಟ ಪ್ರಚಾರದಿಂದ ಒಲಿದುಬಂದ ಅದೃಷ್ಟ

    ಅಬ್ಬಾ! ಇಂಥ ಸುಂದ್ರಿ ನನಗೆ ಸಿಕ್ಕಳಾ ಎಂದುಕೊಳ್ಳುವ ಹುಡುಗರೇ ಹುಷಾರ್​: ಈ ಏಳನೇ ಗಂಡನ ಕಥೆ ಕೇಳಿ….

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts