More

    ದೇಶದ ವ್ಯವಸ್ಥೆ ಸಂವಿಧಾನದ ಪ್ರಕಾರ ನಡೆಯುತ್ತದೆಯೇ ಹೊರತು ಷರಿಯಾ ಕಾನೂನಿನಿಂದಲ್ಲ: ಸಿಎಂ ಯೋಗಿ

    ಲಖನೌ: ಕರ್ನಾಟಕದಲ್ಲಿ ಉಂಟಾಗಿರುವ ಹಿಜಾಬ್​ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​, ದೇಶದಲ್ಲಿರುವ ಇಡೀ ವ್ಯವಸ್ಥೆಯು ಸಂವಿಧಾನದ ಪ್ರಕಾರ ನಡೆಯುತ್ತದೆಯೇ ಹೊರತು ಷರಿಯಾ ಅಥವಾ ಇಸ್ಲಾಮಿಕ್​ ಕಾನೂನಿನಿಂದಲ್ಲ ಎಂದು ಗುಡುಗಿದ್ದಾರೆ.

    ಪ್ರಧಾನಿ ಮೋದಿ ಅವರು ತ್ರಿವಳಿ ತಲಾಖ್​ ರದ್ದುಗೊಳಿಸುವ ಮೂಲಕ ನಮ್ಮ ಮುಸ್ಲಿಂ ಹೆಣ್ಣುಮಕ್ಕಳ ಹಕ್ಕುಗಳನ್ನು ಕಾಪಾಡುವ ಮೂಲಕ ಕಟ್ಟುಪಾಡುಗಳಿಂದ ಮುಕ್ತರಾಗಿಸಿದ್ದಾರೆ. ನಮ್ಮ ವ್ಯವಸ್ಥೆಯು ಸಂವಿಧಾನದ ಮೂಲಕ ನಡೆಯುತ್ತದೆಯೇ ಹೊರತು ಷರಿಯತ್​ ಕಾನೂನಿನಿಂದಲ್ಲ ಎಂದು ಹೇಳುವ ಮೂಲಕ ಭವಿಷ್ಯದಲ್ಲಿ ಹಿಜಾಬ್​ ಧರಿಸುವ ಮಹಿಳೆ ದೇಶದ ಪ್ರಧಾನಿ ಆಗಲಿದ್ದಾಳೆ ಎಂಬ ಎಐಎಂಐಎಂ ಮುಖ್ಯಸ್ಥ ಒವೈಸಿಯ ಹೇಳಿಕೆಗೆ ತಿರುಗೇಟು ನೀಡಿದರು.

    ಮುಂದುವರಿದು ಮಾತನಾಡಿದ ಯೋಗಿ ಆದಿತ್ಯನಾಥ್, ನಾವು ನಮ್ಮ ವೈಯಕ್ತಿಕ ಧಾರ್ಮಿಕ ನಂಬಿಕೆಗಳು ಮತ್ತು ಆಯ್ಕೆಗಳನ್ನು ದೇಶ ಮತ್ತು ಅದರ ಸಂಸ್ಥೆಗಳ ಮೇಲೆ ಹೇರಲು ಸಾಧ್ಯವಿಲ್ಲ. ನಾನು ಯುಪಿಯಲ್ಲಿರುವ ಎಲ್ಲಾ ಉದ್ಯೋಗಿಗಳಿಗೆ ಕೇಸರಿ ಧರಿಸಲು ಹೇಳಬಹುದೇ? ದೇಶವು ಸಂವಿಧಾನದ ಪ್ರಕಾರ ನಡೆದಾಗ, ಮಹಿಳೆಯರಿಗೆ ಅವರ ಗೌರವ, ಭದ್ರತೆ ಮತ್ತು ಸ್ವಾತಂತ್ರ್ಯ ಸಿಗುತ್ತದೆ ಎಂದು ಹೇಳಿದರು.

    ಕರ್ನಾಟಕ ಹೈಕೋರ್ಟ್ ಇಂದು ಮಧ್ಯಾಹ್ನ 2:30 ಕ್ಕೆ ಹಿಜಾಬ್ ಪ್ರಕರಣದ ವಿಚಾರಣೆಯನ್ನು ಪುನರಾರಂಭಿಸಲು ಸಿದ್ಧವಾಗಿದೆ. ಪ್ರಕರಣದ ತುರ್ತು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಈ ಹಿಂದೆ ನಿರಾಕರಿಸಿತ್ತು. ಹೈಕೋರ್ಟ್ ಮೊದಲು ಪ್ರಕರಣವನ್ನು ಆಲಿಸಬೇಕು ಎಂದು ಹೇಳಿದೆ. (ಏಜೆನ್ಸೀಸ್​)

    ಬಿಜೆಪಿ ಶಾಸಕ ಅನಿಲ್​ ಬೆನಕೆ ಕಚೇರಿ ಮೇಲೆ ಪಾನಮತ್ತ ಯುವಕನಿಂದ ಕಲ್ಲು ತೂರಾಟ

    ಭೂ ವೀಕ್ಷಣಾ ಉಪಗ್ರಹ EOS-04 ಸೇರಿ ಮೂರು ಉಪಗ್ರಹಗನ್ನು ಯಶ್ವಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ

    ಮುಖ್ಯ ಸ್ವಿಚ್​ ಬಿಟ್ಟು ರಿಮೋಟ್​ನಿಂದ TV ಆಫ್​ ಮಾಡಿದ್ರೂ​ ನಷ್ಟ​: ವರ್ಷದ ವಿದ್ಯುತ್​ ಬಿಲ್​ ಕೇಳಿದ್ರೆ ದಂಗಾಗ್ತೀರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts