ಭೂ ವೀಕ್ಷಣಾ ಉಪಗ್ರಹ EOS-04 ಸೇರಿ ಮೂರು ಉಪಗ್ರಹಗನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ

ಶ್ರೀಹರಿಕೋಟ: ಮಹತ್ವಾಕಾಂಕ್ಷೆಯ ಭೂ ಸರ್ವೇಕ್ಷಣಾ ಉಪಗ್ರಹ ಇಒಎಸ್​-04 ಸ್ಯಾಟಲೈಟ್​ ಸೇರಿ ಒಟ್ಟು ಮೂರು ಉಪಗ್ರಹಗಳನ್ನು ಇಂದು(ಸೋಮವಾರ) ಮುಂಜಾನೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಇಸ್ರೋ(ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಯಶಸ್ವಿಯಾಗಿ ಉಡಾವಣೆ ಮಾಡಿದೆ. ಇಒಎಸ್​-04, ಇನ್​ಸ್ಪೈರ್​ಸ್ಯಾಟ್​-1 ಹಾಗೂ ಐಎನ್​ಎಸ್​-2ಬಿ ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ ಸಿ-52 ರಾಕೆಟ್‌ ಇಂದು ಬೆಳಗ್ಗೆ 5.59ಕ್ಕೆ ಶ್ರೀಹರಿಕೋಟದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ನಭಕ್ಕೆ ಚಿಮ್ಮಿತು. ಈ ವರ್ಷದ ಮೊದಲ ಉಡಾವಾಣೆಯಾಗಿ ಇಒಎಸ್​-04 ಉಪಗ್ರಹವನ್ನು ಅಂತರಿಕ್ಷಕ್ಕೆ ರವಾನಿಸಿದ ಇಸ್ರೋ, ಇದೊಂದು ಅವಿಸ್ಮರಣೀಯ ಕ್ಷಣ ಎಂದು … Continue reading ಭೂ ವೀಕ್ಷಣಾ ಉಪಗ್ರಹ EOS-04 ಸೇರಿ ಮೂರು ಉಪಗ್ರಹಗನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ