More

    ಭೂ ವೀಕ್ಷಣಾ ಉಪಗ್ರಹ EOS-04 ಸೇರಿ ಮೂರು ಉಪಗ್ರಹಗನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ

    ಶ್ರೀಹರಿಕೋಟ: ಮಹತ್ವಾಕಾಂಕ್ಷೆಯ ಭೂ ಸರ್ವೇಕ್ಷಣಾ ಉಪಗ್ರಹ ಇಒಎಸ್​-04 ಸ್ಯಾಟಲೈಟ್​ ಸೇರಿ ಒಟ್ಟು ಮೂರು ಉಪಗ್ರಹಗಳನ್ನು ಇಂದು(ಸೋಮವಾರ) ಮುಂಜಾನೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಇಸ್ರೋ(ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಯಶಸ್ವಿಯಾಗಿ ಉಡಾವಣೆ ಮಾಡಿದೆ.

    ಇಒಎಸ್​-04, ಇನ್​ಸ್ಪೈರ್​ಸ್ಯಾಟ್​-1 ಹಾಗೂ ಐಎನ್​ಎಸ್​-2ಬಿ ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ ಸಿ-52 ರಾಕೆಟ್‌ ಇಂದು ಬೆಳಗ್ಗೆ 5.59ಕ್ಕೆ ಶ್ರೀಹರಿಕೋಟದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ನಭಕ್ಕೆ ಚಿಮ್ಮಿತು.

    ಈ ವರ್ಷದ ಮೊದಲ ಉಡಾವಾಣೆಯಾಗಿ ಇಒಎಸ್​-04 ಉಪಗ್ರಹವನ್ನು ಅಂತರಿಕ್ಷಕ್ಕೆ ರವಾನಿಸಿದ ಇಸ್ರೋ, ಇದೊಂದು ಅವಿಸ್ಮರಣೀಯ ಕ್ಷಣ ಎಂದು ಬಣ್ಣಿಸಿದೆ. ಭೂಮಿ ಮೇಲೆ ನಿಗಾ ಇರಿಸುವ ಸರಣಿಯಲ್ಲಿ ನಾಲ್ಕನೇಯದ್ದಾದ ಇಒಎಸ್​-04 ಸ್ಯಾಟಲೈಟ್​ನ ಬಾಳ್ವಿಕೆ ಅವಧಿ ಸುಮಾರು 10 ವರ್ಷ. ಈ ಭೂಮಿ ವೀಕ್ಷಣಾ ಉಪಗ್ರಹ ಕೃಷಿ, ಅರಣ್ಯ ಮತ್ತು ತೋಟಗಳು, ಎಂಥಹದ್ದೇ ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲೂ ಕೂಡ ಉತ್ತಮ ಗುಣಮಟ್ಟದ ಚಿತ್ರಗಳನ್ನು ಭೂಮಿಗೆ ರವಾನಿಸುವಂತೆ ವಿನ್ಯಾಸ ಮಾಡಲಾಗಿದೆ.

    ಇಸ್ರೋ ಈ ವರ್ಷ ಚಂದ್ರಯಾನ-3 ಸೇರಿ 19 ಯೋಜನೆಗಳನ್ನು ಹಮ್ಮಿಕೊಂಡಿದೆ. ಕಳೆದ ಎರಡು ವರ್ಷದಲ್ಲಿ ಇಸ್ರೋದ ಮೂರು ಬಾಹ್ಯಾಕಾಶ ಯೋಜನೆಗಳು ಮಾತ್ರ ಸಫಲವಾಗಿವೆ. ಕಾರ್ಟೊಸ್ಯಾಟ್​ ಮಾಲಿಕೆಯ ಈ ಉಪಗ್ರಹಗಳು ಭೂ ಮೇಲ್ಮೈನ ಮಾಹಿತಿ ಒದಗಿಸುವ ಮೂಲಕ ನೆ ತಯಾರಿಗೆ ಅನುಕೂಲ ಮಾಡಿಕೊಡುತ್ತದೆ.

    ಸಾಗರ, ಅರಣ್ಯ, ಪರ್ವತಗಳನ್ನು ಕರಾರುವಕ್ಕಾಗಿ ಗುರುತಿಸುವಿಕೆ. ಖನಿಜ ಸಂಪತ್ತ ಪತ್ತೆ, ಹವಾಮಾನ ಬದಲಾವಣೆಯ ಮಾಹಿತಿ, ಮಣ್ಣಿನ ಗುಣಮಟ್ಟ ಸೇರಿ ಭೂಗೋಳದ ಬಾಹ್ಯರೇಖೆಯ ಸಂಪೂರ್ಣ ಮಾಹಿತಿಯನ್ನು EOS-04 ಸ್ಯಾಟಲೈಟ್​ ಒದಗಿಸುತ್ತದೆ. ಇಒಎಸ್​-01 ಸ್ಯಾಟಲೈಟ್​ ಅನ್ನು 2020ರ ನವೆಂಬರ್​ನಲ್ಲಿ ಉಡಾವಣೆ ಮಾಡಲಾಯಿತು. ಇಒಎಸ್​-02 ಸಣ್ಣ ಸ್ಯಾಟಲೈಟ್​ ಆಗಿದ್ದು, ಇದು ಎಸ್​ಎಸ್​ಎಲ್​ವಿ ರಾಕೆಟ್​ನಲ್ಲಿ ಉಡಾವಣೆ ಆಗಬೇಕಿದೆ. ಇಒಎಸ್​-03 ಕಳೆದ ವರ್ಷ ಆಗಸ್ಟ್​ನಲ್ಲಿ ಉಡಾವಣೆ ಆಯಿತಾದರೂ ವಿಫಲವಾಯಿತು.

    2012ರಲ್ಲಿ ಉಡಾವಣೆಯಾದ ಈಗ ಕಾರ್ಯ ಸ್ಥಗಿತಗೊಳಿಸಿರುವ ರಿಸ್ಯಾಟ್​-1 ಉಪಗ್ರಹದ ಬದಲಿಯಾಗಿ 1,710 ಕೆ.ಜಿ. ತೂಕದ ಇಒಎಸ್​-04 ಸ್ಯಾಟಲೈಟ್​ ಅನ್ನು ಕಳುಹಿಸಲಾಗಿದೆ. ಉತ್ತಮ ಗುಣಮಟ್ಟದ ಚಿತ್ರಗಳನ್ನು ಇದು ರವಾನಿಸುತ್ತದೆ. ಇನ್​ಸ್ಪೈರ್​ಸ್ಯಾಟ್​-1 ಅನ್ನು ತಿರುವನಂತಪುರದ ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ವಿದ್ಯಾರ್ಥಿ ಸಿದ್ಧಪಡಿಸಿದ್ದಾನೆ. ಅಮೆರಿಕದ ಕೊಲೊರಾಡೊ ವಿವಿ ಆತನಿಗೆ ನೆರವು ನೀಡಿದೆ. ಐಎನ್​ಎಸ್​-2ಟಿಡಿ ಉಪಗ್ರಹವು ಭೂತಾನ್​ ಜತೆಗೂಡಿ ಭಾರತ ಕೈಗೊಂಡಿರುವ ಮೊದಲ ಬಾಹ್ಯಾಕಾಶ ಅನ್ವೇಷಣೆಯದ್ದಾಗಿದೆ.

    ಭೂ ವೀಕ್ಷಣಾ ಉಪಗ್ರಹ EOS-04 ಸೇರಿ ಮೂರು ಉಪಗ್ರಹಗನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ

    ಆಸ್ಪತ್ರೆಯಲ್ಲೇ ಕುಸಿದುಬಿದ್ದ ನರ್ಸ್ ಮೇಲಕ್ಕೆ ಏಳಲೇ ಇಲ್ಲ… ಸಾವಲ್ಲೂ ಸಾರ್ಥಕತೆ ಮೆರೆದ ಗಾನವಿ, ಈ ಸ್ಟೋರಿ ಓದಿದ್ರೆ ಮನಸ್ಸು ಭಾರ

    ಸಾವಲ್ಲೂ ಸಾರ್ಥಕತೆ ಮೆರೆದ ಚೈತ್ರಾಗಿತ್ತು ಮಹತ್ತರ ಆಸೆ, ಆಕೆ ಬದುಕಿದ್ದರೆ ಸಂಚಲನ ಸೃಷ್ಟಿಸುತ್ತಿದ್ದಳು…

    ಪ್ರೇಮ ವಿವಾಹವಾದ್ರೂ ಮತ್ತೊಬ್ಬನ ಮೇಲೆ ಮೋಹ: ಪುರುಷನ ಚಪ್ಪಲಿ, ಪ್ರಸಾದದ ಬ್ಯಾಗು ಬಿಚ್ಚಿಟ್ಟ ಭಯಾನಕ ರಹಸ್ಯವಿದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts