

ಹೈದರಾಬಾದ್: ಡಿವೋರ್ಸ್ ಆದ ಬಳಿಕ ನಾಗಚೈತನ್ಯ ಮತ್ತು ಸಮಂತಾ ತಮ್ಮ ತಮ್ಮ ವೃತ್ತಿ ಜೀವನದ ಕಡೆ ಗಮನ ಹರಿಸಿದ್ದಾರೆ. ಸಾಕಷ್ಟು ಚಿತ್ರಗಳಿಗೆ ಸಮಂತಾ ಹಸಿರು ನಿಶಾನೆ ತೋರಿದ್ದಾರೆ. ತಮ್ಮ ವಿರುದ್ಧ ಏನೇ ಆರೋಪಗಳು ಕೇಳಿಬಂದರೂ ಅದ್ಯಾವುದಕ್ಕೂ ಕಿವಿಗೊಡದ ಸಮಂತಾ ಸಂಪೂರ್ಣ ಚಿತ್ರರಂಗದ ಕಡೆ ಗಮನ ಹರಿಸಿದ್ದಾರೆ.
ಇತ್ತೀಚೆಗೆ ಗೋವಾದಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಮಂತಾ ತಮ್ಮ ಉಡುಗೆಯಿಂದಲೇ ಭಾರೀ ಸುದ್ದಿಯಾಗಿದ್ದರು. ಕೆಂಪು ಬಣ್ಣದ ಧಿರಿಸಿನಲ್ಲಿ ಸಖನ್ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಅಲ್ಲದೇ, ಇತ್ತೀಚೆಗೆ ಸಮಂತಾ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಳ್ಳಲು ಆರಂಭಿಸಿದ್ದಾರೆ. ಇದುವರೆಗೂ ಐಟಂ ಸಾಂಗ್ಗಳಲ್ಲಿ ನಟಿಸದ ಸಮಂತಾ, ಇದೀಗ ಅಲ್ಲು ಅರ್ಜುನ್ ನಟನೆಯ ಪುಷ್ಪಾ ಚಿತ್ರದಲ್ಲಿ ತಮ್ಮ ಮೈಮಾಟ ಪ್ರದರ್ಶಿಸಲು ಮುಂದಾಗಿದ್ದಾರೆ. ಡಿವೋರ್ಸ್ ಬಳಿಕ ಸಮಂತಾ ತಮ್ಮ ನಿಲುವು ಬದಲಿಸಿಕೊಂಡಿದ್ದು, ಇದರ ಹಿಂದೆ ಬಲವಾದ ಕಾರಣ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.
ವಿಭಿನ್ನ ಉಡುಗೆಗಳು ಹಾಗೂ ಹಾಟ್ ಆ್ಯಂಡ್ ಬೋಲ್ಡ್ ಫೋಟೋಗಳನ್ನು ಹರಿಬಿಡುವ ಮೂಲಕ ಸಮಂತಾ ಸೇಡು ತೀರಿಸಿಕೊಳ್ಳಲು ಆರಂಭಿಸಿದ್ದಾರೆ ಎಂಬ ಮಾತುಗಳು ಟಾಲಿವುಡ್ ಗಲ್ಲಿಯಲ್ಲಿ ಕೇಳಿಬರುತ್ತಿದೆ. ಮಾಜಿ ಪತಿ ನಾಗಚೈತನ್ಯ ಹೊಟ್ಟೆ ಉರಿಯಲಿ ಎಂದು ಸಾರ್ವಜನಿಕವಾಗಿ ಸಮಂತಾ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಅದರ ಮುಂದುವರಿದ ಭಾಗವೇ ಪುಷ್ಪಾ ಚಿತ್ರದ ಐಟಂ ಸಾಂಗ್. ಚಿತ್ರ ಬಿಡುಗಡೆಯಾಗಿ ಸಮಂತಾ ಐಟಂ ಸಾಂಗ್ ತೆರೆಯ ಮೇಲೆ ಬಂದರೆ, ಮತ್ಯಾವ ಬೆಳವಣಿಗೆ ಸಂಭವಿಸಲಿದೆಯೋ ಎಂದು ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ಸಮಂತಾ, ಇನ್ನೂ ಹೆಸರಿಡ ದ್ವಿಭಾಷ ಚಿತ್ರವೊಂದರಲ್ಲಿ ನಟಿಸಲಿದ್ದಾರೆ. ತಮಿಳು ಸಿನಿಮಾ ನಿರ್ಮಾಣ ಸಂಸ್ಥೆ ಡ್ರೀಮ್ ವಾರಿಯರ್ ಪಿಕ್ಚರ್ ಸಮಂತಾರ ಹೊಸ ಚಿತ್ರಕ್ಕೆ ಬಂಡವಾಳ ಹೂಡಲಿದೆ. ಅಲ್ಲದೆ, ಅಲ್ಲು ಅರ್ಜುನ್ ಅವರ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪಾದಲ್ಲಿ ಐಟಂ ಸಾಂಗ್ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಷ್ಟೇ ಅಲ್ಲದೆ, ಶಾಕುಂತಲಂ ಚಿತ್ರದ ಶೂಟಿಂಗ್ ಮುಕ್ತಾಯಗೊಂಡಿದ್ದು ಬಿಡುಗಡೆಗೆ ಸಿದ್ಧವಾಗಿದೆ. ಇದರೊಂದಿಗೆ ವಿಜಯ್ ಸೇತುಪತಿ ನಟನೆಯ ಕಾಥುವಾಕಲ ರೆಂಡು ಕಾದಲಂ ಚಿತ್ರದಲ್ಲಿಯೂ ನಟಿಸಿದ್ದಾರೆ. ಈ ಚಿತ್ರದಲ್ಲಿ ನಯನತಾರಾ ಕೂಡ ನಾಯಕಿ. ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಸಮಂತಾ ಬಿಜಿಯಾಗಿದ್ದಾರೆ. (ಏಜೆನ್ಸೀಸ್)