ಮಾಜಿ ಪತಿ ನಾಗಚೈತನ್ಯ ಬರ್ತಡೇಯ ಮಾರನೇ ದಿನ ಸಮಂತಾ ಮಾಡಿದ್ದು ಸರಿನಾ? ಅಭಿಮಾನಿಗಳ ಆಕ್ರೋಶ!

Samantha
Published on

ಹೈದರಾಬಾದ್​: ನಟಿ ಸಮಂತಾ ಡಿವೋರ್ಸ್​ ಪಡೆದಾಗಿನಿಂದ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ಅದರಲ್ಲೂ ನೆಗಿಟಿವ್​ ಸುದ್ದಿಗಳಿಗೆ ಹೆಚ್ಚು ಗುರಿಯಾಗುತ್ತಿದ್ದಾರೆ. ಇದೀಗ ಸಮಂತಾ ತಮ್ಮ ಚಿತ್ತವನ್ನು ಸಂಪೂರ್ಣ ಸಿನಿಮಾ ಕಡೆ ಹಾಯಿಸಿದ್ದು, ಅವರ ಪ್ರತಿಯೊಂದು ನಡವಳಿಕೆಯನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲೂ ಸಮಂತಾ ಮಾಮೂಲಿಯಂತೆ ಸಕ್ರಿಯರಾಗಿದ್ದಾರೆ. ಪ್ರತಿದಿನ ಏನಾದರೊಂದು ಪೋಸ್ಟ್​ ಮಾಡುತ್ತಲೇ ಇರುತ್ತಾರೆ. ಇದೀಗ ಸಮಂತಾ ಕುರಿತಾದ ತಾಜಾ ಸುದ್ದಿಯೇನೆಂದರೆ, ಅವರ ಮಾಜಿ ಪತಿ ಹಾಗೂ ನಟ ನಾಗಚೈತನ್ಯ ಅಭಿಮಾನಿಗಳು ಸಮಂತಾ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಅದಕ್ಕೆ ಕಾರಣ ನಾಗಚೈತನ್ಯ ಅವರ ಹುಟ್ಟುಹಬ್ಬ.

ನ. 23ರಂದು ನಾಗಚೈತನ್ಯ 35ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ಇಡೀ ಚಿತ್ರರಂಗದ ಗಣ್ಯರು ಶುಭಕೋರಿದ್ದಾರೆ. ಆದರೆ, ಸಮಂತಾ, ಮಾಜಿ ಪತಿಯ ಬಗ್ಗೆ ಒಂದು ಮಾತನ್ನು ಆಡಿಲ್ಲ. ಇಷ್ಟೇ ಇದ್ದರೆ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗುತ್ತಿರಲಿಲ್ಲ. ಆದರೆ, ಸಮಂತಾ ಅದರ ನಾಳೆಗೆ ತಮ್ಮ ಸಾಕುನಾಯಿಗೆ ಬರ್ತಡೇ ಶುಭಕೋರಿದ್ದಾರೆ. ಇದೇ ವಿಚಾರ ಅಭಿಮಾನಿಗಳ ಮನದಲ್ಲಿ ನೋವುಂಟು ಮಾಡಿದೆ.

ಇನ್​ಸ್ಟಾಗ್ರಾಂನಲ್ಲಿ ನಾಯಿಯ ಫೋಟೋಗಳನ್ನು ಶೇರ್​ ಮಾಡಿಕೊಂಡು ಅದರ ಜತೆಗಿನ ತಮ್ಮ ಒಡನಾಟವನ್ನು ಸಮಂತಾ ಬರೆದುಕೊಂಡಿದ್ದಾರೆ. ಇದರಿಂದ ಬೇಸರಗೊಂಡಿರುವ ಅಭಿಮಾನಿಗಳು ನಾಯಿಗೆ ಕೊಡುವ ಆದ್ಯತೆಯನ್ನು ನಾಗಚೈತನ್ಯರಿಗೆ ಕೊಡಲಿಲ್ಲವಲ್ಲ. ಮಾಜಿ ಪತಿ ಬೇಡ ಕೊನೆಯ ಪಕ್ಷ ಒಬ್ಬ ಸ್ನೇಹಿತ ಅಂತನಾದ್ರೂ ಶುಭಕೋರಬಹುದಿತ್ತು ಎಂದು ಸಮಂತಾ ನಡೆಯನ್ನು ಟೀಕಿಸಿದ್ದಾರೆ. ಆದರೆ, ಇದ್ಯಾವುದಕ್ಕೂ ಕಿವಿಗೊಡದ ಸಮಂತಾ ತಮ್ಮ ಸಿನಿಮಾ ಕೆಲಸಲ್ಲಿ ತಲ್ಲೀನರಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net