

ಬೆಂಗಳೂರು: ಬಿಬಿಎಂಪಿ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣ ಸಂಬಂಧ ಬಂಧಿತ ಆರೋಪಿಗಳು ತನಿಖಾ ವೇಳೆ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಆರೋಪಿ ಪೀಟರ್ ಬೆನ್ನ ಹಿಂದೆ ಇದ್ದಿದ್ದು ಕದಿರೇಶ್ ಅಕ್ಕ ಮಾಲಾ ಎಂಬ ಮಾತುಗಳು ಕೇಳಿಬರುತ್ತಿವೆ. ಪೀಟರ್ ಸ್ಕೆಚ್ ಹಾಕಿದ್ರೆ ಆತನ ಬೆನ್ನಿಗೆ ನಿಂತಿದ್ದು ಇದೇ ಮಾಲಾ ಎನ್ನಲಾಗುತ್ತಿದೆ. ಅಸಲಿಗೆ ಮಾಲಾ, ಪೀಟರ್ ಹಾಗೂ ರೇಖಾ ನಡುವೆ ಇದ್ದ ಮನಸ್ತಾಪವೇನು? ಎಂಬ ಪ್ರಶ್ನೆಗೆ ಉತ್ತರವನ್ನು ಕೆದಕಿದಾಗ, ಮುಂದಿನ ಕಾರ್ಪೋರೇಟರ್ ಎಲೆಕ್ಷನ್ ಮೇಲೆ ಮಾಲಾಳ ಕಣ್ಣು ಬಿದ್ದಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ.
ಚುನಾವಣೆ ಹಿನ್ನಲೆ ಹತ್ಯೆ ನಡೆದಿರುವ ಕುರಿತು ಪೊಲೀಸರು ಮಾಹಿತಿ ಸಿಕ್ಕಿದ್ದು, ಪ್ರಕರಣ ಸಂಬಂಧ ಕದಿರೇಶ್ ಅಕ್ಕ ಮಾಲಾ ವಿಚಾರಣೆ ನಡೆಯುತ್ತಿದೆ. ಕಾಟನ್ ಪೇಟೆ ಪೊಲೀಸರು ಮಾಲಾಗೆ ಫುಲ್ ಡ್ರಿಲ್ ಮಾಡುತ್ತಿದ್ದು, ಠಾಣೆಗೆ ಕರೆಸಿ ವಿಚಾರಣೆ ತೀವ್ರಗೊಳಿಸಿದ್ದಾರೆ.
ನಿನ್ನೆ ಬೆಳಗ್ಗೆ ರೇಖಾರ ಸಹಚರರಾದ ಪೀಟರ್ ಮತ್ತು ಸೂರ್ಯನ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದರು. ಇದೀಗ ಸ್ಟೆಪನ್, ಅಜಯ್, ಪುರುಷೋತ್ತಮ್ ಎಂಬುವವರನ್ನು ಬಂಧಿಸಲಾಗಿದೆ. (ದಿಗ್ವಿಜಯ ನ್ಯೂಸ್)
Rekha