ಟ್ರಾಫಿಕ್​ ಜಂಟಿ ಪೊಲೀಸ್​ ಆಯುಕ್ತರ ಮನೆಯಲ್ಲೇ ಕಳ್ಳತನ: ಆರೋಪಿ ಮನೆಕೆಲಸದಾಕೆ ಹೇಳಿದ್ದು ಹೀಗೆ...

Ravikanthe Gowda
Published on

ಬೆಂಗಳೂರು: ನಗರದ ಜಂಟಿ ಪೊಲೀಸ್​ ಆಯುಕ್ತ (ಸಂಚಾರ) ಡಾ. ಬಿ.ಆರ್​. ರವಿಕಾಂತೇಗೌಡರ ಮನೆಯಲ್ಲಿ ಕಳ್ಳತನ ನಡೆದಿರುವ ಬಗ್ಗೆ ಮನೆಕೆಲಸದಾಕೆಯ ವಿರುದ್ಧ ದೂರು ದಾಖಲಾಗಿದ್ದು, ಆರೋಪಿ ಅಂಕಿತಾ ಎಂಬಾಕೆಯನ್ನು ಸಂಜಯ್​ ನಗರ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಅಂಕಿತಾ ಕಳೆದ ಮೂರು ವರ್ಷದಿಂದ ರವಿಕಾಂತೇಗೌಡರ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ಇತ್ತೀಚೆಗೆ ಮನೆಯಲ್ಲಿ ಕೆಲವು ವಸ್ತುಗಳು ಕಾಣಿಸುತ್ತಿರಲಿಲ್ಲ. ಅಲ್ಲದೆ, ಅದರ ಬೆನ್ನಲ್ಲೇ ಅಂಕಿತಾ ಕೂಡ ನಾಪತ್ತೆಯಾಗಿದ್ದಳು. ಈ ಸಂಬಂಧ ಆಯುಕ್ತರ ಮನೆಯಲ್ಲೇ ಕೆಲಸ ಮಾಡುತ್ತಿದ್ದ ಇನ್ನೊಬ್ಬ ವ್ಯಕ್ತಿ ದೂರು ನೀಡಿದ್ದರು.

ಇದೀಗ ಆರೋಪಿ ಅಂಕಿತಾಳನ್ನು ಸಂಜಯ್​ ನಗರ ಪೊಲೀಸರು ಹಾವೇರಿಯಲ್ಲಿ ಬಂಧಿಸಿದ್ದಾರೆ. ಆದರೆ, ನಾನು ಕಳ್ಳತನ ಮಾಡಿಲ್ಲ, ಊರಿಗೆ ಹೋಗಿದ್ದೆ ಎಂದು ಅಂಕಿತಾ ಹೇಳುತ್ತಿದ್ದಾಳೆ. ಸದ್ಯ ಆಕೆಯನ್ನು ಬಂಧಿಸಿ ಕರೆತಂದಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net