ಮುಂಬೈ: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಾಲ್ಕು ಚಿತ್ರರಂಗಗಳಲ್ಲಿ ಸಖತ್ ಬ್ಯೂಸಿಯಾಗಿದ್ದಾರೆ. ಸದ್ಯ, ಬಾಲಿವುಡ್ನಲ್ಲಿ ಬೀಡುಬಿಟ್ಟಿರುವ ರಶ್ಮಿಕಾ ಸಿಕ್ಕಾಪಟ್ಟೆ ಹವಾ ಸೃಷ್ಟಿಸಿದ್ದಾರೆ. ಕಡಿಮೆ ಅವಧಿಯಲ್ಲಿಯೇ ಸ್ಟಾರ್ ನಾಯಕಿ ಪಟ್ಟ ಗಿಟ್ಟಿಸಿಕೊಂಡ ಖ್ಯಾತಿ ರಶ್ಮಿಕಾಗೆ ಸಲ್ಲುತ್ತದೆ. ಅದು ಅವರ ಅದೃಷ್ಟವೂ ಹೌದು.
ತಮಿಳು, ತೆಲುಗು ಮಾತ್ರವಲ್ಲದೆ, ಹಿಂದಿ ಚಿತ್ರರಂಗದಲ್ಲು ಸಾಲು ಸಾಲು ಸಿನಿಮಾಗಳಲ್ಲಿ ರಶ್ಮಿಕಾ ಅಭಿನಯಿಸುತ್ತಿದ್ದಾರೆ. ಈಗಾಗಲೇ ಮಿಷನ್ ಮುಂಜು ಹಾಗೂ ಅಮಿತಾಭ್ ಬಚ್ಚನ್ ಜೊತೆಗಿನ ಗುಡ್ ಬೈ ಚಿತ್ರವನ್ನು ಪೂರ್ಣಗೊಳಿಸಿದ್ದು, ಅದರ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಸಿನಿಮಾದಿಂದಾಚೆಗೆ ರಶ್ಮಿಕಾ, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುತ್ತಾರೆ. ಅಲ್ಲದೆ, ಆಗಾಗ ವಿವಿಧ ಕಾರಣಗಳಿಂದ ಟ್ರೋಲ್ಗಳಿಗೆ ಗುರಿಯಾಗುತ್ತಿರುತ್ತಾರೆ. ಈ ಬಾರಿಯು ತಮ್ಮ ಬಟ್ಟೆ ವಿಚಾರಕ್ಕೆ ರಶ್ಮಿಕಾ ನೆಟ್ಟಿಗರ ಟ್ರೋಲ್ ದಾಳಕ್ಕೆ ಸಿಲುಕಿದ್ದಾರೆ.
ಬುಸಿನೆಸ್ ದೃಷ್ಟಿಯಿಂದ ಸಿನಿಮಾದಲ್ಲಿ ಹಾಗೂ ಸಿನಿಮಾ ಪ್ರಚಾರದಲ್ಲಿ ನಟಿಯರು ಗ್ಲಾಮರಸ್ ಉಡುಗೆ ತೊಡುವುದು ಸಾಮಾನ್ಯ. ಅದರಲ್ಲೂ ರಶ್ಮಿಕಾ ಮಂದಣ್ಣ ಯಾವುದೇ ಸಿನಿಮಾ ಈವೆಂಟ್ನಲ್ಲಿ ಭಾಗವಹಿಸಿದರೂ ತುಂಬಾ ಫಿಟ್ ಆದ, ಹೆಚ್ಚು ಗ್ಲಾಮರಸ್ ಆಗಿ ಕಾಣುವ ಉಡುಗೆ ಧರಿಸುತ್ತಾರೆ. ಇದೇ ವಿಚಾರಕ್ಕೆ ಅನೇಕ ಬಾರಿ ಟ್ರೋಲ್ ಸಹ ಆಗಿದ್ದಾರೆ.
ರಶ್ಮಿಕಾ ಅವರ ಬಾಲಿವುಡ್ನ ಮೊದಲ ಸಿನಿಮಾ ಗುಡ್ಬೈ ಟೀಸರ್ ಲಾಂಚ್ ಕಾರ್ಯಕ್ರಮ ಇತ್ತೀಚೆಗಷ್ಟೇ ನಡೆಯಿತು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಶ್ಮಿಕಾ, ಬಿಕಿನಿ ಟಾಪ್ ರೀತಿಯ ಬ್ಲೌಸ್ ಹಾಗೂ ಉದ್ದವಾದ ಸ್ಕರ್ಟ್ ಜೊತೆಗೆ ಉದ್ದವಾದ ಕೋಟ್ ರೀತಿಯ ಬಟ್ಟೆಯನ್ನು ಧರಿಸಿ, ಗ್ಲಾಮರಸ್ ಆಗಿ ಬಂದಿದ್ದರು. ಇಷ್ಟೇ ಆಗಿದ್ದರೆ ಏನು ಆಗುತ್ತಿರಲಿಲ್ಲ. ಆದರೆ. ಇದೇ ಉಡುಪು ಧರಿಸಿ, ರಶ್ಮಿಕಾ, ಮುಂಬೈನ ಗಣೇಶ ಪೆಂಡಾಲ್ಗೆ ತೆರಳಿದ್ದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ರಶ್ಮಿಕಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರಶ್ಮಿಕಾ ಅವರು ಮುಂಬೈನ ಲಾಲ್ಬಾಗ್ನಲ್ಲಿರುವ ಲಾಲ್ಬಾಗ್ಚ್ ರಾಜಾ ಗಣೇಶ ಪೆಂಡಾಲ್ ತೆರಳಿದ್ದರು. ಗಣೇಶ ಹಬ್ಬ ಹಿನ್ನೆಲೆಯಲ್ಲಿ ಪ್ರತಿ ವರ್ಷ ಈ ಪ್ರದೇಶದಲ್ಲಿ ಗಣೇಶನನ್ನು ಕೂರಿಸಲಾಗುತ್ತದೆ. ಎಲ್ಲ ಸೆಲೆಬ್ರಿಟಿಗಳು ಅಲ್ಲಿಗೆ ಭೇಟಿ ನೀಡಿ ದರ್ಶನ ಪಡೆದುಕೊಳ್ಳುವುದು ವಾಡಿಕೆ. ಅದೇ ರೀತಿ ರಶ್ಮಿಕಾ ಭೇಟಿ ನೀಡಿದರು. ಆದರೆ, ಗ್ಲಾಮರಸ್ ಬಟ್ಟೆ ಧರಿಸಿ ಬಂದಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ರಶ್ಮಿಕಾ ನೀವು ಮಾಡಿದ್ದು ಸರಿನಾ? ದೇವಸ್ಥಾನಗಳಿಗೆ ಬರುವಾಗ ಕೊಂಚ ಶಿಸ್ತು ಕಾಪಾಡಿಕೊಳ್ಳಬೇಕು. ಮೈಮಾಟ ಪ್ರದರ್ಶಿಸದೇ, ಮೈಮುಚ್ಚಿಕೊಳ್ಳುವ ಉಡುಗೆ ಧರಿಸುವ ಮೂಲಕ ಗೌರವದಿಂದ ನಡೆದುಕೊಳ್ಳಬೇಕು ಎಂದು ರಶ್ಮಿಕಾರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. (ಏಜೆನ್ಸಿಸ್)
ಹುಲಿಯೊಂದಿಗೆ ಕಾದಾಡಿದ ಮಹಾತಾಯಿ! ವ್ಯಾಘ್ರನ ದವಡೆಯಿಂದ ಮಗುವನ್ನು ರಕ್ಷಿಸಿದ್ದೇ ರೋಚಕ
ATMನಲ್ಲಿ ಹಣ ಡ್ರಾ ಮಾಡುವಾಗ ಕೇಳಿಬಂತು ವಿಚಿತ್ರ ಶಬ್ದ: ಏನೆಂದು ತಿರುಗಿ ನೋಡಿದ ಮಹಿಳೆಗೆ ಕಾದಿತ್ತು ಶಾಕ್
ಗಂಟೆಗೆ 183 ಕಿ.ಮೀ ವೇಗದಲ್ಲಿ ವಂದೇ ಭಾರತ್ ರೈಲು ಚಾಲನೆ: ಲೋಟದಲ್ಲಿ ತುಂಬಿಟ್ಟಿದ್ದ ನೀರು ಏನಾಯ್ತು ನೋಡಿ…