More

    ನಟ ರಾಘವ ಲಾರೆನ್ಸ್​ ತಲೈವಾ​​ ರಜಿನಿಕಾಂತ್​ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡಿದ್ದು ಇದೇ ಕಾರಣಕ್ಕೆ…

    ಚೆನ್ನೈ: ಕಾಲಿವುಡ್​ ಸ್ಟಾರ್​ ನಟ ಹಾಗೂ ನಿರ್ದೇಶಕ ರಾಘವ ಲಾರೆನ್ಸ್​ ಅವರು ಸೂಪರ್​ ಸ್ಟಾರ್​ ರಜಿನಿಕಾಂತ್​ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅದರ ಜೊತೆಗೆ ರಾಘವ ಲಾರೆನ್ಸ್​ ಅವರು ರಜಿನಿಕಾಂತ್​ ಅವರನ್ನು ಭೇಟಿ ಮಾಡಿದ್ದೇಕೆ? ಮತ್ತು ಆಶೀರ್ವಾದ ಪಡೆದುಕೊಂಡಿದ್ದೇಕೆ? ಎಂಬ ಪ್ರಶ್ನೆಗಳನ್ನು ನೆಟ್ಟಿಗರು ಕೇಳಿದ್ದು, ಅದಕ್ಕೆ ಉತ್ತರ ಇಲ್ಲಿದೆ.

    ನಿಮಗೆ ಡಾ. ವಿಷ್ಣುವರ್ಧನ್​ ಅಭಿನಯದ ಸೂಪರ್​ ಹಿಟ್​ ಸಿನಿಮಾ ಆಪ್ತಮಿತ್ರ ನೆನೆಪಿದೆಯಾ? ಯಾರಿಗೆ ತಾನೇ ನೆನಪಿಲ್ಲ. ವಿಷ್ಣು ಸಿನಿಮಾ ಕೆರಿಯರ್​ನ ಅದ್ಭುತ ಸಿನಿಮಾಗಳಲ್ಲಿ ಇದು ಒಂದು. ಇದು ಮಲಯಾಳಂ ಸಿನಿಮಾದ ರಿಮೇಕ್​. ಕನ್ನಡದ ಬಳಿಕ ತಮಿಳಿನಲ್ಲೂ ಈ ಸಿನಿಮಾ ರಿಮೇಕ್​ ಆಯಿತು. ಅಲ್ಲಿ ಸೂಪರ್​ಸ್ಟಾರ್​ ರಜಿನಿಕಾಂತ್​ ಅವರು ಮುಖ್ಯಪಾತ್ರದಲ್ಲಿ ನಟಿಸಿದರು. ಚಿತ್ರದ ಹೆಸರು ಚಂದ್ರಮುಖಿ. ಅಲ್ಲೂ ಕೂಡ ಸಿನಿಮಾ ಸೂಪರ್​ ಹಿಟ್​ ಆಯಿತು.

    ಇದೊಂದು ಸೈಕಾಲಾಜಿಕಲ್​ ಹಾರರ್​ ಸಿನಿಮಾ. ಇದೀಗ ಈ ಸಿನಿಮಾದ ಮುಂದುವರಿದ ಭಾಗ ಅಂದರೆ ಚಂದ್ರಮುಖಿ 2 ತೆರೆಗೆ ಬರಲಿದೆ. ಈ ಸಿನಿಮಾವನ್ನು ಪಿ.ವಾಸು ಅವರು ನಿರ್ದೇಶನ ಮಾಡಲಿದ್ದಾರೆ. ಒಂದು ತಿಂಗಳ ಹಿಂದೆಯೇ ಲೈಕಾ ಪ್ರೊಡಕ್ಸನ್​ ಕಂಪನಿ ಈ ಚಿತ್ರದ ಅಧಿಕೃತ ಘೋಷಣೆ ಮಾಡಿದೆ. ಈ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ರಾಘವ ಲಾರೆನ್ಸ್​ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ, ಚಂದ್ರಮುಖಿ ಮೊದಲ ಭಾಗದಲ್ಲಿದ್ದ ಹಾಸ್ಯನಟ ವಡಿವೇಲು, ಈ ಸಿನಿಮಾದಲ್ಲೂ ಕೂಡ ರಾಘವ ಲಾರೆನ್ಸ್​ ಜೊತೆಯಾಗಲಿದ್ದಾರೆ.

    ಜುಲೈ 15 ರಿಂದ ಚಿತ್ರದ ಶೂಟಿಂಗ್​ ಆರಂಭವಾಗಿದೆ. ಮೊದಲ 30 ದಿನಗಳ ಶೂಟಿಂಗ್​ ಮೈಸೂರಿನಲ್ಲಿ ನಡೆಯಲಿದೆ. ಇದೀಗ ಬಂದಿರುವ ಮಾಹಿತಿ ಪ್ರಕಾರ ಲಕ್ಷ್ಮೀ ಮೆನೆನ್​ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದ್ದಾರೆ. ಆದರೆ, ಈ ಬಗ್ಗೆ ಚಿತ್ರತಂದ ಎಲ್ಲೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ.

    ಅಸಲಿ ವಿಚಾರಕ್ಕೆ ಈಗ ಬರೋಣ. ನಿನ್ನೆಯಿಂದ ಶೂಟಿಂಗ್​ ಆರಂಭವಾಗಿದೆ. ಶೂಟಿಂಗ್​ ಆರಂಭಕ್ಕೂ ಮುನ್ನ ರಾಘವ ಲಾರೆನ್ಸ್​ ಅವರು ಚೆನ್ನೈನಲ್ಲಿರುವ ರಜಿನಿಕಾಂತ್​ ಅವರ ನಿವಾಸಕ್ಕೆ ಭೇಟಿ ನೀಡಿ, ಅವರ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ. ಚಂದ್ರಮುಖಿ ಮೊದಲ ಭಾಗದಲ್ಲಿ ರಜಿನಿ ಅವರು ನಿರ್ವಹಿಸಿದ್ದ ಪಾತ್ರವನ್ನು ಎರಡನೇ ಭಾಗದಲ್ಲಿ ರಾಘವ ಲಾರೆನ್ಸ್​ ನಿರ್ವಹಿಸುತ್ತಿರುವ ಕಾರಣ ಅವರ ಆಶೀರ್ವಾದದ ಜೊತೆಗೆ ಒಂದಿಷ್ಟು ಸಲಹೆಗಳನ್ನು ಪಡೆದು ಬಂದಿದ್ದಾರೆ. ಈ ಸಂಗತಿಯನ್ನು ಲಾರೆನ್ಸ್​ ತಮ್ಮ ಟ್ವಿಟರ್​ನಲ್ಲಿ ಫೋಟೋ ಸಮೇತ ಹಂಚಿಕೊಂಡಿದ್ದಾರೆ.

    ಈ ಸಿನಿಮಾಗೆ ಪ್ರಖ್ಯಾತ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಸಂಗೀತ ನೀಡಲಿದ್ದು, ಆರ್​.ಡಿ. ರಾಜಶೇಖರ್​ ಕ್ಯಾಮೆರಾ ನಿರ್ವಹಣೆ ಮಾಡಲಿದ್ದಾರೆ. ಲೈಕಾ ಪ್ರೊಡಕ್ಷನ್​ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. (ಏಜೆನ್ಸೀಸ್​)

    ಬ್ರಿಟನ್ ಕದನ ಕುತೂಹಲ.. ಪ್ರಧಾನಿ ಪಟ್ಟದತ್ತ ರಿಷಿ ಸುನಕ್ ದಾಪುಗಾಲು..

    ಕಾರುಗಳ ಕಳ್ಳಸಂಚಾರ, ಅಪಘಾತ ವಿಮೆ ಕ್ಲೇಮ್​​ಗೂ ಅಡ್ಡದಾರಿ: ವೈಟ್​ಬೋರ್ಡ್ ವಾಹನ ಟ್ಯಾಕ್ಸಿಯಾಗಿ ಬಳಕೆ..

    ಎಲೆಕ್ಷನ್ ದೃಷ್ಟಿ, ವರ್ಚಸ್ಸಿಗೆ ಪುಷ್ಟಿ: ಬಿಜೆಪಿ ಚಿಂತನ ಸಭೆ; ಮಿಷನ್ 150 ಗುರಿ ಸಾಧಿಸುವ ಸಂಕಲ್ಪ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts