More

    ಪುಷ್ಪ ಯಶಸ್ಸು ಬಾಲಿವುಡ್​ ಸ್ಟಾರ್​ಗಳ ಕಪಾಳಕ್ಕೆ ಬಾರಿಸಿದಂತಿದೆ! ಜಾಲತಾಣದಲ್ಲಿ ಹಲ್​ಚಲ್​ ಸೃಷ್ಟಿಸಿದ ಹೇಳಿಕೆ

    ಮುಂಬೈ: ನಟ ಅಲ್ಲು ಅರ್ಜುನ್​ ಅಭಿನಯದ ಪ್ಯಾನ್​ ಇಂಡಿಯಾ ಸಿನಿಮಾ ಪುಷ್ಪ ಬಾಕ್ಸ್​ ಆಫೀಸ್​ನಲ್ಲಿ ಸದ್ದು ಮಾಡಿದೆ. ಬಾಲಿವುಡ್​ನಲ್ಲಂತೂ ಈ ಚಿತ್ರ ರಣವೀರ್​ ಸಿಂಗ್​ ಅಭಿನಯದ 83 ಸಿನಿಮಾಗೆ ಒಳ್ಳೆಯ ಸ್ಪರ್ಧೆ ನೀಡಿ ಹಿಂದಿಯಲ್ಲೂ ಒಳ್ಳೆಯ ಹಣಗಳಿಕೆ ಮಾಡಿದೆ.

    ಸಿನಿಮಾ ಮೂಲಗಳ ಪ್ರಕಾರ ಹಿಂದಿ ಅವತರವಣಿಕೆಯಲ್ಲಿ ಬಿಡುಗಡೆಯಾದ ಪುಷ್ಪ 100 ಕೋಟಿ ರೂ. ಬಿಸಿನೆಸ್​ ಮಾಡಿದೆ ಎಂದು ಹೇಳಲಾಗಿದೆ. ಅಲ್ಲದೆ, ಈಗಲೂ ಬಾಕ್ಸ್​ ಆಫೀಸ್​ನಲ್ಲಿ ಸದ್ದು ಮಾಡುತ್ತಲೇ. ಹಿಂದಿಯಲ್ಲಿ ಪುಷ್ಪ ಚಿತ್ರದ ಸಾಧನೆಯನ್ನು ಕೊಂಡಾಡಿರುವ ಸ್ವಯಂ ಘೋಷಿತ ಸಿನಿಮಾ ವಿಮರ್ಶಕ ಕಮಾಲ್​ ಆರ್​ ಖಾನ್​, ಈ ಚಿತ್ರದ ಯಶಸ್ಸು ಬಾಲಿವುಡ್​ ಸ್ಟಾರ್​​ಗಳಿಗೆ ಮಾಡಿದ ಕಪಾಳ ಮೋಕ್ಷ ಎಂದಿದ್ದಾರೆ. ನೆಟ್ಟಿಗರು ಕೂಡ ಇದು ನಿಜ ಎಂದು ಧ್ವನಿಗೂಡಿಸಿದ್ದಾರೆ.

    ಬಾಲಿವುಡ್​ನಲ್ಲಿ ಸೃಜನಶೀಲತೆ ಇಲ್ಲ. ಹಳೆಯ ಹಾಡು, ಸಿನಿಮಾಗಳನ್ನೇ ರೀಮಿಕ್ಸ್​ ಮಾಡುತ್ತಿದ್ದಾರೆ. ದಕ್ಷಿಣ ಭಾರತದ ಯಶಸ್ವಿ ಚಿತ್ರ ಅಥವಾ ಬಯೋಪಿಕ್​ಗಳನ್ನು ಮಾಡುತ್ತಿದ್ದಾರೆ ಎಂದು ನೆಟ್ಟಿಗರೊಬ್ಬರು ಧ್ವನಿಯೇರಿಸಿದ್ದಾರೆ.

    ಟಾಲಿವುಡ್, ಬಾಲಿವುಡ್ ಅನ್ನು ವಶಪಡಿಸಿಕೊಳ್ಳಲು ಇದು ಸುಸಮಯವಾಗಿದೆ. ಭ್ರಷ್ಟ ಬಾಲಿವುಡ್ ಇನ್ನು ಮುಂದೆ ಭಾರತ ಅಥವಾ ಅದರ ಸಂಸ್ಕೃತಿಯನ್ನು ಪ್ರತಿನಿಧಿಸುವುದಿಲ್ಲ. ತೆಲುಗು ಚಲನಚಿತ್ರಗಳು ಭಾರತೀಯ ಸಂಸ್ಕೃತಿ/ಕುಟುಂಬದ ಮೌಲ್ಯಗಳನ್ನು ಪ್ರತಿನಿಧಿಸುತ್ತವೆ ಮತ್ತು ಭಾರತದ ಜನರು ಅದನ್ನು ಇಷ್ಟಪಡುತ್ತಿದ್ದಾರೆ. ಹಿಂದಿ ಬೆಲ್ಟ್‌ನಲ್ಲಿ ತೆಲುಗು ಚಲನಚಿತ್ರಗಳನ್ನು ಮಾರುಕಟ್ಟೆಗೆ ತರಬೇಕು ಎಂದು ಮತ್ತೊಬ್ಬ ನೆಟ್ಟಿಗ ಅಭಿಪ್ರಾಯಪಟ್ಟಿದ್ದಾರೆ.

    ಪುಷ್ಪ ಸಿನಿಮಾವನ್ನು ರಂಗಸ್ಥಳಂ ಖ್ಯಾತಿಯ ಸುಕುಮಾರ್​ ನಿರ್ದೇಶನ ಮಾಡಿದ್ದು, ಮೈತ್ರಿ ಮೂವೀ ಮೇಕರ್ಸ್​ ಬಂಡವಾಳ ಹೂಡಿ, ಭರ್ಜರಿ ಕಲೆಕ್ಸನ್​ ಕೂಡ ಮಾಡಿಕೊಂಡಿದೆ. ಸಿನಿಮಾದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್​ಗೆ ನಾಯಕಿಯಾಗಿ ನಟಿಸಿದ್ದಾರೆ. ಇದೀಗ ಚಿತ್ರದ ಎರಡನೇ ಭಾಗದ ಶೂಟಿಂಗ್​ಗೆ ಚಿತ್ರತಂಡ ತಯಾರಿ ನಡೆಸಿದೆ. (ಏಜೆನ್ಸೀಸ್​)

    ದೆಹಲಿಯಲ್ಲಿ 20ರ ಯುವತಿಯ ಮೇಲೆ ಗ್ಯಾಂಗ್​ರೇಪ್​ ಪ್ರಕರಣ: 7 ಮಹಿಳೆಯರು ಸೇರಿ 9 ಮಂದಿಯ ಬಂಧನ

    ದೇವರು ನನ್ನ ಬ್ರಾ ಸೈಜ್​​ ತೆಗೆದುಕೊಳ್ಳುತ್ತಿದ್ದಾರೆ ಎಂದ ನಟಿ ಶ್ವೇತಾ ತಿವಾರಿ! ವಿಡಿಯೋ ವೈರಲ್​, ಜಾಲತಾಣದಲ್ಲೇ ತರಾಟೆ

    ಹಿರಿಯ ನಟನ ಜೊತೆಗೆ ‘ನಮಿತಾ ಡೇಟಿಂಗ್’? ನಟಿಯ 2ನೇ ಪತಿ ಕೊಟ್ಟ ಸ್ಪಷ್ಟನೇ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts