More

    ರಾಧೆ ಶ್ಯಾಮ್​ ಚಿತ್ರದಲ್ಲಿ ನಟಿ ಪೂಜಾ ಹೆಗ್ಡೆ ಜತೆ ಕಿಸ್ಸಿಂಗ್​ ಸೀನ್​: ಅಚ್ಚರಿಯ ಹೇಳಿಕೆ ನೀಡಿದ ನಟ ಪ್ರಭಾಸ್​!

    ಹೈದರಾಬಾದ್​​: ಟಾಲಿವುಡ್​ ಸೂಪರ್​ ಸ್ಟಾರ್​ ಪ್ರಭಾಸ್ ಬೆಳ್ಳಿಪರದೆಯ ಮೇಲೆ ಸಾಕಷ್ಟು ಸಾಹಸ ಮತ್ತು ಪುರುಷೋಚಚಿತ ಪಾತ್ರಗಳನ್ನು ಮಾಡಿದರೂ ಕೂಡ ಪರದೆಯ ಹಿಂದೆ ಪ್ರಭಾಸ್​ ತುಂಬಾ ನಾಚಿಕೆ ಮತ್ತು ಅಂತರ್ಮುಖಿ ವ್ಯಕ್ತಿಯಾಗಿದ್ದಾರೆ. ಅವರು ತಮ್ಮ ಚಿತ್ರಗಳಲ್ಲಿ ಕಿಸ್ಸಿಂಗ್​ ಮತ್ತು ದೇಹ ಪ್ರದರ್ಶನದಂತಹ ದೃಶ್ಯಗಳಲ್ಲಿ ನಟಿಸುವಾಗ ತುಂಬಾ ಮುಜುಗರ ಅನುಭವಿಸುವುದಾಗಿ ಅವರೇ ಹೇಳಿಕೊಂಡಿದ್ದಾರೆ.

    ಸದ್ಯ ಪ್ರಭಾಸ್ ತಮ್ಮ ಮುಂಬರುವ ಚಿತ್ರ ರಾಧೆ ಶ್ಯಾಮ್‌ನ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇದೊಂದು ರೊಮ್ಯಾಂಟಿಕ್ ಡ್ರಾಮಾ ಆಗಿರುವುದರಿಂದ ಪ್ರಭಾಸ್ ತಮ್ಮ ಸಹನಟಿ ಪೂಜಾ ಹೆಗ್ಡೆ ಅವರೊಂದಿಗೆ ಕೆಲವು ಚುಂಬನದ ದೃಶ್ಯಗಳಲ್ಲಿ ನಟಿಸಬೇಕಾಗಿತ್ತು. ಈ ಬಗ್ಗೆ ಮಾತನಾಡಿರುವ ಪ್ರಭಾಸ್​, ಇದೊಂದು ರೊಮ್ಯಾಂಟಿಕ್ ಚಿತ್ರ ಮತ್ತು ಆ ದೃಶ್ಯಗಳು ಬೇಕಾಗಿರುವುದರಿಂದ ಇಲ್ಲ ಎಂದು ಹೇಳಲೂ ಸಾಧ್ಯವಾಗಲಿಲ್ಲ ಎಂದಿದ್ದಾರೆ.

    ಕಮರ್ಷಿಯಲ್ ಚಿತ್ರಗಳಲ್ಲಿ ಈ ದೃಶ್ಯಗಳನ್ನು ತಪ್ಪಿಸಬಹುದು ಆದರೆ ರಾಧೆ ಶ್ಯಾಮ್‌ನಂತಹ ಚಿತ್ರದಲ್ಲಿ ಆಗುವುದಿಲ್ಲ ಎಂದು ಹೇಳಿದರು. ಅಲ್ಲದೆ, ಸಹನಟಿಗೆ ಕಿಸ್​ ಮಾಡಲು ಅಥವಾ ಎಲ್ಲಾ ಸಿಬ್ಬಂದಿಯ ಮುಂದೆ ಶರ್ಟ್ ತೆಗೆಯಲು ಈಗಲೂ ನಾಚಿಕೆಪಡುತ್ತೇನೆ ಎಂದೂ ಹೇಳಿದ್ದಾರೆ. ಅದಕ್ಕಾಗಿಯೇ ಅವರು ಈ ದೃಶ್ಯಗಳನ್ನು ಪ್ರತ್ಯೇಕ ಸ್ಥಳಗಳಲ್ಲಿ ಚಿತ್ರೀಕರಿಸಲು ತಮ್ಮ ನಿರ್ದೇಶಕರನ್ನು ಕೇಳಿಕೊಳ್ಳುತ್ತಾರಂತೆ.

    ಬಹಳ ದಿನಗಳ ನಂತರ ಪ್ರಭಾಸ್ ಲವ್ ಸ್ಟೋರಿ ಚಿತ್ರದಲ್ಲಿ ನಟಿಸಿದ್ದು, ರಾಧೆ ಶ್ಯಾಮ್ ಚಿತ್ರದ ಮೇಲೆ ಭಾರೀ ಹೈಪ್ ನಿರ್ಮಾಣವಾಗಿದೆ. ರಾಧಾ ಕೃಷ್ಣ ಕುಮಾರ್ ಅವರ ನಿರ್ದೇಶನದ ಈ ಸಿನಿಮಾ ಇದೇ ಮಾರ್ಚ್ 11 ರಂದು ತೆರೆಗೆ ಬರಲು ಸಿದ್ಧವಾಗಿದೆ. (ಏಜೆನ್ಸೀಸ್​)

    ಯುದ್ಧ ಬೇಡ ಎಂದು ಸಾಮೂಹಿಕ ರಾಜೀನಾಮೆ ನೀಡಿದ ರಷ್ಯಾದ ಟಿವಿ ರೇನ್​ ಚಾನೆಲ್​ ಸಿಬ್ಬಂದಿ..!

    ಗಾಲಿ ಪುತ್ರ ಕಿರೀಟಿ ಸಕಲಕಲಾವಲ್ಲಭ: ಮೊದಲ ಸಿನಿಮಾ ಮುಹೂರ್ತಕ್ಕೆ ಆಗಮಿಸಿದ ಗಣ್ಯರು

    ಹೆಂಡತಿಯಷ್ಟು ಚಂದದ ಮಗಳು ಹುಟ್ಟಿದ್ದಾಳೆ: ರಿಷಬ್ ಶೆಟ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts