ಬಿಕಿನಿ ಫೋಟೋಗಳನ್ನು ಹರಿಬಿಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸಿದ ಮಸ್ತ್​ ಮೊಹಬ್ಬತ್​ ಬೆಡಗಿ!

Poonam
Published on

ಹೈದರಾಬಾದ್​: “ತಂಗಿಗಾಗಿ” ಚಿತ್ರದಲ್ಲಿ ನಟ ದರ್ಶನ್​ಗೆ ನಾಯಕಿಯಾಗಿದ್ದ ಬಹುಭಾಷಾ ನಟಿ ಪೂನಂ ಬಜ್ವಾ ಅವರು ಕೆಲವೇ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಬೋಲ್ಡ್​ ಫೋಟೋಗಳನ್ನು ಹರಿಬಿಡುವ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುತ್ತಾರೆ.

ಪೂನಂ ಮಾಡೆಲ್​ ಆಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಬಳಿಕ ತೆಲಗಿನ ಮೋಡತಿ ಸಿನಿಮಾ ಹೆಸರಿನ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟ ಪೂನಂ ತಮಿಳಿನಲ್ಲಿ ಸಾಕಷ್ಟು ಯಶಸ್ಸು ಗಳಿಸಿದರು. ಕನ್ನಡ ಮತ್ತು ಮಲಯಾಳಂ ಸಿನಿಮಾದಲ್ಲೂ ನಟಿಸಿದ್ದಾರೆ.

ಪೂನಂ ಬಾಜ್ವಾ 2008 ರಲ್ಲಿ ಹರಿ ನಿರ್ದೇಶನದ ಮಸಾಲಾ ಚಿತ್ರ 'ಸೇವಲ್' ಮೂಲಕ ಕಾಲಿವುಡ್​ಗೆ ಪದಾರ್ಪಣೆ ಮಾಡಿದರು. ಇದಾದ ನಂತರ 'ತೆನವಟ್ಟು' ಮತ್ತು 'ಕಚೇರಿ ಆರಂಭಂ' ನಲ್ಲಿ ನಟ ಜೀವ ಜೊತೆ ನಟಿಸಿದರು. ಇದಲ್ಲದೆ, 'ದ್ರೋಹಿ', 'ತಂಬಿಕೊಟ್ಟೈ', 'ಮುತ್ತಿನ ಕತಿರಿಕೈ', 'ಅರಣ್ಮನೈ 2' ಮತ್ತು 'ರೋಮಿಯೋ ಜೂಲಿಯೆಟ್' ನಂತಹ ಪ್ರಸಿದ್ಧ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

ತಂಗಿಗಾಗಿ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡಿದ ಪೂನಂ, ಶಿಕಾರಿ ಹಾಗೂ ಮಸ್ತ್​ ಮೊಹಬ್ಬತ್​ ಸಿನಿಮಾಗಳಲ್ಲಿ ನಟಿಸಿದ್ದಾರೆ. ನೋಡಲು ಸುಂದರವಾಗಿರುವ ಪೂನಂ ತುಂಬಾ ಬೋಲ್ಡ್​ ಪಾತ್ರಗಳಲ್ಲಿ ಅಭಿನಯಿಸಿದ್ದೇ ಹೆಚ್ಚು. ಆದರೂ, ಇತ್ತೀಚೆಗೆ ಅವರಿಗೆ ಅವಕಾಶಗಳು ಕಡಿಮೆಯಾಗಿವೆ.

ಸಿನಿಮಾ ಹೊರತಾಗಿ ಪೂನಂ ಬಜ್ವಾ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಜಾಲತಾಣದಲ್ಲಿ ಸಾಕಷ್ಟು ಅನುಯಾಯಿಗಳನ್ನು ಹೊಂದಿದ್ದು, ಆಗಾಗ ಹಾಟ್​ ಫೋಟೋಗಳನ್ನು ಹರಿಬಿಡುವ ಮೂಲಕ ಪಡ್ಡೆ ಹುಡುಗರ ಮೈ ಬಿಸಿಯೇರಿಸುತ್ತಿರುತ್ತಾರೆ. ಇದೀಗ ಬೇಸಿಗೆಯ ತಾಪವನ್ನು ನೀಗಿಸಲು ಬಿಕಿನಿ ಧರಿಸಿ ಸ್ವಿಮ್ಮಿಂಗ್​ ಫೂಲ್​ಗೆ ಇಳಿದು ಕ್ಯಾಮೆರಾ ಪೋಸ್​​ ನೀಡಿರುವ ಪೂನಂ ಫೋಟೋಗಳು ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿವೆ.

ಹಾಟ್ ಫೋಟೋಗಳನ್ನು ಹಂಚಿಕೊಂಡಿರುವ ಪೂನಂ ಬಜ್ವಾ, ಇದನ್ನು ನಾನು ಹೆಚ್ಚು ಇಷ್ಟ ಪಡುತ್ತೇನೆ ಎಂದು ಶೀರ್ಷಿಕೆ ನೀಡಿದ್ದಾರೆ. ಕಪ್ಪು ಬಣ್ಣದ ಬಿಕಿನಿ ಫೋಟೋಗೆ 2 ಲಕ್ಷಕ್ಕೂ ಅಧಿಕ ಲೈಕ್ಸ್​ಗಳು ಹರಿದುಬಂದಿವೆ. ಪೂನಂ ಮೈಮಾಟಕ್ಕೆ ಮನಸೋತಿರುವ ನೆಟ್ಟಿಗರು ಕಾಮೆಂಟ್​ಗಳ ಮೂಲಕ ಪೂನಂ ಸೌಂದರ್ಯವನ್ನು ತಮ್ಮದೇ ರೀತಿಯಲ್ಲಿ ಬಣ್ಣಿಸುತ್ತಿದ್ದಾರೆ.

ಸಿನಿಮಾ ವಿಚಾರಕ್ಕೆ ಬಂದರೆ ಪ್ರಸ್ತುತ ಎರಡು ಮಲಯಾಳಂ ಚಿತ್ರಗಳಲ್ಲಿ ಮತ್ತು ಕೆಲವು ತಮಿಳು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ವಿಚಾರಕ್ಕೆ ಬಂದರೆ ಪ್ರಸ್ತುತ ಎರಡು ಮಲಯಾಳಂ ಚಿತ್ರಗಳಲ್ಲಿ ಮತ್ತು ಕೆಲವು ತಮಿಳು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net