ಭಿಕ್ಷುಕನ ಜತೆ ಜಿಮ್​ ಟ್ರೈನರ್​ ಪತ್ನಿಯ ಸರಸ: ಆಕೆ ಹೇಳಿದ್ದನ್ನು ಕೇಳಿ ಗಂಡನೇ ಶಾಕ್, ಸಿಸಿಟಿವಿಯಲ್ಲಿ ಕಳ್ಳಾಟ ಸೆರೆ!​

Brazil Wife
Published on

ಬ್ರಾಸಿಲಿಯಾ: ನಿರಾಶ್ರಿತ ಅಥವಾ ಭಿಕ್ಷುಕನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡು, ಕಾರಿನಲ್ಲಿ ಸರಸ ಸಲ್ಲಾಪದಲ್ಲಿ ತೊಡಗಿದ್ದ ಪತ್ನಿಯನ್ನು ನೋಡಿ ಪರ್ಸನಲ್​ ಜಿಮ್​ ಟ್ರೈನರ್​ ಒಬ್ಬ ಆಘಾತಕ್ಕೆ ಒಳಗಾದ ಘಟನೆ ಬ್ರೆಜಿಲ್​ನಲ್ಲಿ ನಡೆದಿದೆ.

ಜಿಮ್​ ಟ್ರೈನರ್​ ಎಡ್ವರ್ಡೊ ಅಲ್ವೆಸ್ ಎಂಬಾತ ಪಾರ್ಕ್​ ಮಾಡಿದ್ದ ಕಾರಿನ ಕಡೆಗೆ ಹೋಗಿ ಅದರ ವಿಂಡ್​​ಶೀಲ್ಡ್​​ ಇಣುಕಿ ನೋಡಿದಾಗ ತನ್ನ ಪತ್ನಿ, ಬೇರೊಬ್ಬ ವ್ಯಕ್ತಿಯ ಜತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದನ್ನು ಕಂಡು ದಂಗಾಗಿದ್ದಾನೆ. ನಂತರ ಕೋಪಗೊಂಡ ವಿಂಡ್​ಶೀಲ್ಡ್​ ಒಡೆದು ಹಾಕಲು ಯತ್ನಿಸಿದ್ದಾನೆ. ಬಳಿಕ ಅಲ್ವೆಸ್​, ಕಾರಿನ ಬಾಗಿಲು ತೆರೆದು ಒಳಗೆ ನುಗ್ಗುವ ಮೊದಲು ಹೊರಗಡೆಯಿಂದಲೇ ಪತ್ನಿ ಜತೆ ಇದ್ದ ವ್ಯಕ್ತಿಯ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಬಳಿಕ ನಿರ್ಗತಿಕ ಕೈಯಲ್ಲಿ ಬಟ್ಟೆಗಳನ್ನು ಹಿಡಿದುಕೊಂಡು ಬೆತ್ತಲೆಯಾಗೇ ಕಾರಿನಿಂದ ಇಳಿದು ಪರಾರಿಯಾಗಲು ಯತ್ನಿಸಿದಾಗ ಆತನನ್ನು ಹಿಡಿದು ಅಲ್ವೆಸ್​ ಥಳಿಸುತ್ತಾನೆ. ಬಳಿಕ ಕಾರಿನಿಂದ ಇಳಿಯುವ ಆಕೆಯ ಪತ್ನಿಯನ್ನು ಅಲ್ವೆಸ್​ ತರಾಟೆಗೆ ತೆಗೆದುಕೊಳ್ಳುತ್ತಾನೆ. ಇದಿಷ್ಟು ದೃಶ್ಯ ಸಮೀಪದ ಸಿಸಿಟಿವಿಯಲ್ಲಿ ದಾಖಲಾಗಿದೆ.

ಈ ಘಟನೆ ಮಾರ್ಚ್​ 10ರಂದು ಮುಂಜಾನೆ ಬ್ರೆಜಿಲ್​ನ ಫೆಡರಲ್​ ಜಿಲ್ಲೆಯ ಜರ್ದಿಮ್​ ರೊರಿಝ್​ನಲ್ಲಿ ನಡೆದಿದೆ. ಅಲ್ವೇಸ್​ ಪತ್ನಿ ಸದಾ ಚರ್ಚಿಗೆ ಹೋಗುವವಳಾಗಿದ್ದು, ದೇವರ ಮೇಲೆ ತುಂಬಾ ಭಕ್ತಿ ಇದೆ ಎಂದು ಹೇಳಲಾಗಿದೆ. ತಾನು ಮಾಡಿದನ್ನು ಸಮರ್ಥಿಸಿಕೊಂಡಿರುವ ಆಕೆ, ನಿರಾಶ್ರಿತರಿಗೆ ಸಹಾಯ ಮಾಡುವಂತೆ ದೇವರಿಂದ ಸಂದೇಶ ಸ್ವೀಕರಿಸಿದೆ. ಹೀಗಾಗಿ ಈ ಕೆಲಸ ಮಾಡಿದೆ ಎಂದು ಫ್ರೆಂಡ್​ ಜತೆ ಹೇಳಿಕೊಂಡಿದ್ದಾಳೆ. ಇದನ್ನು ತಿಳಿದ ಗಂಡನಿಗೆ ತೀವ್ರ ಆಘಾತವಾಗಿದೆ.

ಸುದ್ದಿ ಮಾಧ್ಯಮ ಮೆಟ್ರೋಪೋಲ್ಸ್ ವರದಿಯ ಪ್ರಕಾರ, ಅಲ್ವೆಸ್​ ಪತ್ನಿ ಮತ್ತು ಆಕೆಯ ಅತ್ತೆ ನಿರಾಶ್ರಿತ ವ್ಯಕ್ತಿಗೆ ಸಹಾಯ ಮಾಡಲು ಮನೆಯಿಂದ ಹೊರಬಂದರಂತೆ. ಇದಾದ ಬಳಿಕ ಅತ್ತೆ-ಸೊಸೆ ಇಬ್ಬರೂ ಬೇರ್ಪಟ್ಟಿದ್ದಾರೆ. ಆದರೆ ಅಲ್ವೆಸ್​ಗೆ ತನ್ನ ಹೆಂಡತಿಯನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ, ಆಕೆಯು ಸಹ ಫೋನ್​ಗೆ ಉತ್ತರಿಸಲಿಲ್ಲ. ನಂತರ ಆಕೆಯನ್ನು ಹುಡುಕಿ ಹೊರಟಾಗ ಅಲ್ವೆಸ್​ ತನ್ನ ಪತ್ನಿ ಪ್ರಾಥಮಿಕ ಶಾಲೆಯೊಂದರ ಬಳಿ ನಿಂತಿದ್ದ ಪತ್ನಿಯ ಕಾರನ್ನು ನೋಡಿದ್ದಾನೆ. ನಂತರ ಒಳಗೆ ಇಣುಕಿ ನೋಡಿದಾಗ ಒಂದು ಕ್ಷಣ ಶಾಕ್​ ಆಗಿದ್ದಾನೆ.

ಕಾರಿನಲ್ಲೇ ನಿರಾಶ್ರಿತನೊಂದಿಗೆ ಅಲ್ವೆಸ್​ ಪತ್ನಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಳು. ಆ ಸಮಯದಲ್ಲಿ ಅವಳು ಪುರುಷನೊಂದಿಗೆ ಹೊಂದಿದ್ದ ಸಂಬಂಧಗಳು ವಾಸ್ತವವಾಗಿ ಒಮ್ಮತದಿಂದ ಕೂಡಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಾನು ಪ್ರತಿ ನಿತ್ಯ ಹಾಜರಾಗುತ್ತಿದ್ದ ಚರ್ಚ್ ಮೂಲಕ ದುರ್ಬಲ ಜನರಿಗೆ ಸಹಾಯ ಮಾಡುವುದನ್ನು ಆನಂದಿಸುತ್ತಿದ್ದೆ ಎಂದು ಆಕೆಯೇ ಪೊಲೀಸರಿಗೆ ಹೇಳಿದ್ದಾಳೆ. ನಾನು ದೇವರಿಂದ ಸಂದೇಶ ಪಡೆದ ಬಳಿಕ ಈ ರೀತಿ ಮಾಡಿದೆ ಎಂದು ಹೇಳಿಕೊಂಡಿದ್ದಾಳೆ.

ನಿರಾಶ್ರಿತ ವ್ಯಕ್ತಿಗೆ ಅಲ್ವೆಸ್​ ಹಿಗ್ಗಾಮುಗ್ಗ ಥಳಿಸಿದ್ದು, ಗಾಯಗೊಂಡಿರುವ ನಿರಾಶ್ರಿತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಫೆಡರಲ್​ ಜಿಲ್ಲೆಯ ಸಿವಿಲ್​ ಪೊಲೀಸ್​ ತನಿಖೆಯನ್ನು ಮುಂದುವರಿಸಿದ್ದಾರೆ. (ಏಜೆನ್ಸೀಸ್​) (ವಿಡಿಯೋ ಕೃಪೆ: ಡೈಲಿ ಮೇಲ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net