ಅಕ್ರಮ ಸಂಬಂಧ ಮುಂದುವರಿಸಲು ಪತಿಯ ವಿರುದ್ಧ ಸಂಚು ರೂಪಸಿದ ಪತ್ನಿಗೆ ಮರುಕ್ಷಣದಲ್ಲೇ ಬಿಗ್​ ಶಾಕ್​!

Kerala Woman
Published on

ಇಡುಕ್ಕಿ: ಅನಿವಾಸಿ ಭಾರತೀಯನ ಜತೆ ಅಕ್ರಮ ಸಂಬಂಧ ಮುಂದುವರಿಸಲು ಅಡ್ಡಗಾಲಾಗಿದ್ದ ಗಂಡನನ್ನು ಡ್ರಗ್ಸ್​ ಪ್ರಕರಣದಲ್ಲಿ ಸಿಲುಕಿಸಲು ಹೋಗಿ 34 ವರ್ಷದ ಪಂಚಾಯಿತಿ ಸದಸ್ಯೆ ಮತ್ತು ಆಕೆಯ ಪ್ರಿಯಕರ ಸಿಕ್ಕಿಬಿದ್ದಿರುವ ಘಟನೆ ಕೇರಳದಲ್ಲಿ ನಡೆದಿದೆ.

ಸ್ಥಳೀಯ ಸಂಸ್ಥೆಯ ಸದಸ್ಯೆ ಸೌಮ್ಯ ಅಬ್ರಾಹಂ, ತನ್ನ ಫ್ರೆಂಡ್​​ ಜತೆ ಸೇರಿ 5 ಗ್ರಾಂ ಎಂಡಿಎಂಎ ಗಾಂಜಾವನ್ನು ಪತಿ ಸುನೀಲ್​ ಬೈಕ್​ನಲ್ಲಿ ಇರಿಸಿದ್ದಳು. ಫೆ. 22ರಂದು ಬಂದ ಮಾಹಿತಿ ಮೇರೆಗೆ ಸುನೀಲ್​ ಬೈಕ್​ ಅನ್ನು ಸೀಜ್​ ಮಾಡಿದ ಪೊಲೀಸರು ಅದರಲ್ಲಿದ್ದ ನಿಷಿದ್ಧ ವಸ್ತುಗಳನ್ನು ತಮ್ಮ ವಶಕ್ಕೆ ಪಡೆದುಕೊಂಡರು. ಬೈಕ್​ನಲ್ಲಿ ಗಾಂಜಾ ಇರುವುದು ಸ್ವತಃ ಸುನೀಲ್​ ಶಾಕ್​ ಆಗಿತ್ತು. ಬಳಿಕ ನನಗೇನು ಗೊತ್ತಿಲ್ಲ. ನನ್ನದೇನು ತಪ್ಪಿಲ್ಲ ಎಂದು ಸುನೀಲ್​ ಹೇಳಿಕೊಂಡಿದ್ದ.

ಇದಾದ ಬಳಿಕ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆಗೆ ಇಳಿದಾಗ ಪ್ರಕರಣದ ಅಸಲಿಯತ್ತು ಬಯಲಾಗಿದೆ. ಸುನೀಲ್​ ಬೈಕ್​ನಲ್ಲಿ ಯಾರೋ ಡ್ರಗ್ಸ್​ ಇಟ್ಟಿರುವ ವಿಚಾರವನ್ನು ತಿಳಿದ ಪೊಲೀಸ್​ ಮಾಹಿತಿದಾರ ಅದನ್ನು ತನಿಖಾಧಿಕಾರಿಗಳಿಗೆ ತಿಳಿಸುತ್ತಾರೆ. ನಂತರ ಫೋನ್​ ಸಂಭಾಷಣೆ ಆಧಾರ ಮೇಲೆ ಡ್ರಗ್ಸ್​ ಇಟ್ಟ ವ್ಯಕ್ತಿಯನ್ನು ಬಂಧಿಸಲಾಗುತ್ತದೆ. ಅಲ್ಲದೆ, 43 ವರ್ಷದ ಎನ್​ಆರ್​ಐ ವಿನೋದ್​ ರಾಜೇಂದ್ರನ್​ ಮತ್ತು ಡ್ರಗ್ಸ್​ ಇಟ್ಟ ವ್ಯಕ್ತಿ ನಿರಂತರ ಸಂಪರ್ಕದಲ್ಲಿರುವುದು ತಿಳಿಯುತ್ತದೆ.

ಅಷ್ಟೇ ಅಲ್ಲದೆ ಸೌಮ್ಯಾ ಜತೆ ಎನ್ಆರ್ಐ ಸಂಪರ್ಕದಲ್ಲಿದ್ದ ಎಂಬುದು ಬೆಳಕಿಗೆ ಬಂದಿದೆ. ವಿಚಾರಣೆ ನಡೆಸಿದಾಗ ಇಬ್ಬರು ನಡುವೆ ಅಕ್ರಮ ಸಂಬಂಧ ಇರುವುದು ಮತ್ತು ಕೃತ್ಯ ಎಸಗಲು ನೆರವು ನೀಡಿದ್ದಾಗಿ ಸೌಮ್ಯಾ ತಪ್ಪೊಪ್ಪಿಕೊಂಡಿದ್ದಾಳೆ. ಎಂಡಿಎಂಎ ಸರಬರಾಜು ಮಾಡಿದ ವ್ಯಕ್ತಿಯು ಸೇರಿದಂತೆ ಕೃತ್ಯ ಎಸಗಿದ ಎಲ್ಲರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net