VIDEO| ಕಾರಿನ ಒಳಗೆ ಗನ್ ಹಿಡಿದ ಕೇಕೆ ಹಾಕಿದ ಮೂಸೆವಾಲಾ ಹಂತಕರು: ಎರಡು ವಿಡಿಯೋ ವೈರಲ್​​

Sidhu Musewala
Published on

ಚಂಡೀಗಢ: ಪಂಜಾಬ್​ನ ಗಾಯಕ ಸಿಧು ಮೂಸೆವಾಲಾರನ್ನು ಹತ್ಯೆ ಮಾಡಿದ್ದ ದುಷ್ಕರ್ವಿುಗಳು ಗನ್ ಹಿಡಿದು ಸಂಭ್ರಮಿಸಿದ ಎರಡು ವಿಡಿಯೋಗಳು ಈಗ ವೈರಲ್ ಆಗಿದೆ.

ಐದು ಮಂದಿ ಹಂತಕರು ಗನ್ ಹಿಡಿದು ಕೇಕೆ ಹಾಕುತ್ತಿರುವ ವಿಡಿಯೋವನ್ನು ಆರೋಪಿಗಳಲ್ಲಿ ಚಿಕ್ಕ ಪ್ರಾಯದವನಾದ ಅಂಕಿತ್ ಸಿರ್ಸಾ ಸೆರೆಹಿಡಿದು, ಇನ್​ಸ್ಟಾಗ್ರಾಂಗೆ ಹಾಕಿದ್ದ. ಈಗ ಅದನ್ನು ಡಿಲೀಟ್ ಮಾಡಲಾಗಿದೆ.

ಅಂಕಿತ್​ನನ್ನು ದೆಹಲಿ ಬಸ್ ನಿಲ್ದಾಣದಲ್ಲಿ ಬಂಧಿಸಲಾಗಿದ್ದು, ಈತ ಬಂಧಿತ ಗ್ಯಾಂಗಸ್ಟರ್ ಲಾರೆನ್ಸ್ ಬಿಷ್ಣೋಯಿ ಗುಂಪಿನ ಸದಸ್ಯ. ಈತನೇ ಮೂಸೆವಾಲಾನಿಗೆ ಸಮೀಪದಿಂದ ಆರು ಬುಲೆಟ್ ಹೊಡೆದಿದ್ದ ಎಂದು ಪೊಲೀಸರು ಹೇಳಿದ್ದಾರೆ. ಮೇ 29ರಂದು ಮೂಸೆವಾಲಾ ಹತ್ಯೆ ಆಗಿತ್ತು.

ಮೇ 29ರಂದು ಮಾನಸ ಜಿಲ್ಲೆಯ ಜವಹರ್ಕೆಯ ಗ್ರಾಮದಲ್ಲಿ ಪಂಜಾಬ್​ ಖ್ಯಾತ ಗಾಯಕ ಹಾಗೂ ಕಾಂಗ್ರೆಸ್​ ನಾಯಕ ಮೂಸೆವಾಲಾ ಅವರು ಚಲಿಸುತ್ತಿದ್ದ ಕಾರಿನ ಮೇಲೆ ದುಷ್ಕರ್ಮಿಗಳು ಹಲವು ಸುತ್ತಿನ ಗುಂಡು ಹಾರಿಸಿ ಹತ್ಯೆ ಮಾಡಿದರು. ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಲಾರೆನ್ಸ್​ ಬಿಷ್ಣೋಯ್ ಪ್ರಮುಖ ಆರೋಪಿಯಾಗಿದ್ದು, ಆತನನ್ನು ಬಂಧಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net