ಹಿಗ್ಗಾಮುಗ್ಗಾ ಬೈಯ್ತಿದ್ರೂ ನಗುತ್ತಾ, ಶಿಳ್ಳೆ ಹಾಕುತ್ತಾ, ಡ್ಯಾನ್ಸ್​ ಮಾಡ್ತಿದ್ದ ನರೇಶ್​ ಬಗ್ಗೆ ಪತ್ನಿ ರಮ್ಯಾ ಹೇಳಿದ್ದು ಹೀಗೆ...

Naresh
Published on

ಮೈಸೂರು: ಇಂದು ಬೆಳಗ್ಗೆ ತೆಲುಗು ನಟ ನರೇಶ್​ ಮತ್ತು ನಟಿ ಪವಿತ್ರಾ ಲೋಕೇಶ್​ ಮೈಸೂರಿನ ಖಾಸಗಿ ಹೋಟೆಲ್​ ಒಂದರ ರೂಮ್​ನಿಂದ ಹೊರಗಡೆ ಬರುವಾಗ ನರೇಶ್​ ಮೂರನೇ ಪತ್ನಿ ರಮ್ಯಾ ರಘುಪತಿ ಅಲ್ಲಯೇ ಕಾದು ನಿಂತಿದ್ದರು. ಈ ವೇಳೆ ಸ್ಥಳದಲ್ಲೇ ಭಾರೀ ಹೈಡ್ರಾಮ ನಡೆಯಿತು.

ರೂಮ್​ನಿಂದ ಹೊರಗಡೆ ಬರುತ್ತಿದ್ದಂತೆ ನರೇಶ್​ಗೆ ಚಪ್ಪಲಿಯಲ್ಲಿ ಬಾರಿಸಲು ರಮ್ಯಾ ಯತ್ನಿಸಿದರು. ಆದರೆ, ಪೊಲೀಸರು ಅದನ್ನು ತಡೆದರು. ಇತ್ತ ನರೇಶ್​, ರಮ್ಯಾರನ್ನು ನೋಡುತ್ತಿದ್ದಂತೆ ವಿಕ್ಟರಿ ಸಿಂಬಲ್​ ತೋರಿಸಿದರು. ಈ ವೇಳೆ ರಮ್ಯಾ ಕಡೆಯವರು ಪವಿತ್ರಾ ಲೋಕೇಶ್​ ಮತ್ತು ನರೇಶ್​ಗೆ ಧಿಕ್ಕಾರ ಕೂಗಿದರು. ಇದೇನಾ ನಿನ್ನ ಗಂಡಸ್ತನ ಎಂದು ಆಕ್ರೋಶ ಹೊರ ಹಾಕಿದರು.

ಧಿಕ್ಕಾರ ಕೂಗಿದರೂ ನಗು ನಗುತ್ತಲೇ ಪವಿತ್ರಾ ಲೋಕೇಶ್​ ಜೊತೆ ಹೋಟೆಲ್​ನ ಲಿಫ್ಟ್​ ಒಳಗಡೆ ಹೋದ ನರೇಶ್​, ಕೂಗಾಡುತ್ತಾ, ಲವ್​ ಯು ಆಲ್​ ಅನ್ನುತ್ತಾ ರಮ್ಯಾ ಕಡೆ ಬೆರಳು ಮಾಡಿ ಅವಳೊಬ್ಬಳು ಹುಚ್ಚಿ, ವಂಚಕಿ ಎಂದು ಕಿರುಚಾಡಿದರು. ಇದಾದ ಬಳಿಕ ಹೋಟೆಲ್​ನಿಂದ ಹೊರಬಂದ ನರೇಶ್​ ಮತ್ತು ಪವಿತ್ರಾ ಒಂದೇ ಕಾರಿನಲ್ಲಿ ಅಲ್ಲಿಂದ ಹೊರಟರು.

ಹೋಟೆಲ್​ನಲ್ಲಿ ತನಗೆ ಮುಜುಗರ ಆಯಿತು ಎಂಬುದನ್ನು ಮರೆಮಾಚಿಕೊಳ್ಳಲು ನರೇಶ್​ ಕೂಗಾಡಿದ್ದಾರೆ ಎನ್ನಲಾಗುತ್ತಿದೆ. ಒಂದು ಕಡೆ ಪತ್ನಿ ಹಿಗ್ಗಾಮುಗ್ಗಾ ನಿಂದಿಸುತ್ತಿದ್ದರೂ, ವಿಕ್ಟರಿ ಸಿಂಬಲ್​ ತೋರಿಸುವುದು, ನಗಾಡುವುದು, ಶಿಳ್ಳೆ ಹಾಕುವುದು ಮತ್ತು ಡ್ಯಾನ್ಸ್​ ಮಾಡುತ್ತಾ ಹೋಗುವುದನ್ನು ನೋಡಿದರೆ ಪತ್ನಿಯನ್ನು ಇನ್ನಷ್ಟು ಕೆಣಕುವ ಕೆಲಸ ಮಾಡಿದರು ಎಂದು ಹೇಳಲಾಗುತ್ತಿದೆ. ಇದೇ ಸಂದರ್ಭದಲ್ಲಿ ರಮ್ಯಾ ಮತ್ತು ಪವಿತ್ರಾ ಲೋಕೇಶ್​ ನಡುವೆಯು ಮಾತಿನ ಚಕಮಕಿ ಆಯಿತು.

ಇನ್ನು ನರೇಶ್​ ವರ್ತನೆ ಬಗ್ಗೆ ಮಾತನಾಡಿದ ರಮ್ಯಾ, ನನ್ನನ್ನು ಎದುರಿಸಲಾಗದೇ ಕೂಗಾಡಿ, ನಗಾಡಿಕೊಂಡ ಹೊರಟು ಹೋದರು. ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ನಗು ನಗುತ್ತಲೇ ಹೋದರು. ಇವತ್ತಿಗೆ ಅದೇ ನನ್ನ ಗೆಲುವು ಎಂದು ರಮ್ಯಾ ಹೇಳಿದರು. ಇನ್ನು ಮುಂದೆ ಕಾನೂನಿನ ಮುಖಾಂತರ ಎದುರಿಸಲಾಗುವುದು ಎಂದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net