ವಿವಾಹಿತೆಯನ್ನು ಮರುಮದ್ವೆಯಾದವನ ಕಣ್ಣು ಆಕೆಯ ಮಗಳ ಮೇಲೆ ಬಿತ್ತು: ಮುಂದಾಗಿದ್ದು ಊಹಿಸದ ಘಟನೆ!

Married Man
Published on

ಇಂದೋರ್​: ಆತಂಕಕಾರಿ ಘಟನೆಯೊಂದು ಮಧ್ಯಪ್ರದೇಶದ ಇಂದೋರ್​ನಿಂದ ವರದಿಯಾಗಿದೆ. ವಿವಾಹಿತೆಯನ್ನು ಮರುಮದುವೆಯಾದ ವ್ಯಕ್ತಿಯೊಬ್ಬ ತದನಂತದಲ್ಲಿ ಆಕೆಯ ಮಗಳನ್ನೂ ಮದುವೆ ಮಾಡಿಕೊಡಲು ಒತ್ತಾಯಿಸಿದ ವಿಚಿತ್ರ ಪ್ರಸಂಗ ಜರುಗಿದೆ.

ಅಲ್ಲದೆ, ಮದುವೆಯಾದ ಕೆಲವೇ ದಿನಗಳಲ್ಲಿ ಮರುಮದ್ವೆಯಾದ ಮಹಿಳೆಯ ಮಗಳೊಂದಿಗೆ ಆತ ಓಡಿಹೋಗಿದ್ದು, ಇಂದೋರ್​ನಲ್ಲಿ ಈ ವಿಚಾರ ತೀವ್ರ ಚರ್ಚೆಗೆ ಕಾರಣವಾಗಿದೆ. ಸದ್ಯ ಮರುಮದುವೆಯಾದ ಮಹಿಳೆ ಗಂಡನ ವಿರುದ್ಧವೇ ದೂರು ನೀಡಿದ್ದು, ಮಗಳನ್ನು ಹುಡುಕಿಕೊಡುವಂತೆ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

ಅಂದಹಾಗೆ ಈ ಘಟನೆ ಇಂದೋರ್​ನ ಲಾಸುದಿಯಾ ಏರಿಯಾದಲ್ಲಿ ನಡೆದಿದೆ. ಕಳೆದ ಸೋಮವಾರ ಪೊಲೀಸ್​ ಠಾಣೆಗೆ ತೆರಳಿದ ಮಹಿಳೆ ತನ್ನ ಗಂಡನ ವಿರುದ್ಧವೇ ದೂರು ನೀಡಿದ್ದಾಳೆ. ಖರ್ಜಾನಾ ನಿವಾಸಿ ಸಂತೋಷ್​ ಸಿಂಗ್​ನನ್ನು ಪ್ರೀತಿಸಿ ಮರುಮದುವೆಯಾದೆ. ಆದರೆ, ಮದುವೆಯಾದ 15 ದಿನಗಳ ಬಳಿಕ ಮಗಳನ್ನು ಮದುವೆ ಮಾಡಿಕೊಡುವಂತೆ ಒತ್ತಾಯಿಸಿದ. ಸಂಬಂಧದಲ್ಲಿ ಮಗಳಾಗುತ್ತಾಳೆ ಎಂದು ಸಂತೋಷ್‌ಗೆ ಸಾಕಷ್ಟು ಮನವರಿಕೆ ಮಾಡಿದೆ. ಆದರೆ, ಅದಕ್ಕೆ ಆತ ಒಪ್ಪಲಿಲ್ಲ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಸೋಮವಾರ ರಾತ್ರಿ ಮನೆಗೆ ಬಂದ ಸಂತೋಷ್​ ಬಲವಂತವಾಗಿ ಮಗಳನ್ನು ತನ್ನ ಕಾರಿನಲ್ಲಿ ಕರೆದೊಯ್ದಿದ್ದಾನೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆ ಬಲೆ ಬೀಸಿದ್ದಾರೆ. ಪ್ರತಿಯೊಂದು ಆಯಾಮದಲ್ಲೂ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net