ಮೃಗಾಲಯದ ಕರಡಿ ಆವರಣದ ಒಳಗಡೆ ಮಗುವನ್ನು ಎಸೆದ ತಾಯಿ: ಮುಂದೇನಾಯ್ತು? ಇಲ್ಲಿ ಭಯಾನಕ ವಿಡಿಯೋ

Video Curtesy
Published on

ತಾಷ್ಕೆಂಟ್: ಮೃಗಾಲಯದಲ್ಲಿ ಕರಡಿ ವಾಸವಿದ್ದ ತೆರೆದ ಆವರಣದ ಮುಂದೆ ನಿಂತು ವೀಕ್ಷಣೆ ಮಾಡುತ್ತಿದ್ದ ಮಹಿಳೆಯೊಬ್ಬಳು ಕೈಯಲ್ಲಿ ಹಿಡಿದಿದ್ದ ಮೂರು ವರ್ಷದ ಮಗಳನ್ನು ಕರಡಿ ಆವರಣ ಒಳಗೆ ಎಸೆದಿರುವ ಘಟನೆ ಉಜ್ಬೇಕಿಸ್ತಾನದ ಮೃಗಾಲಯದಲ್ಲಿ ನಡೆದಿದ್ದು, ಭಾರೀ ಅನಾಹುತ ಸ್ವಲ್ಪದರಲ್ಲೆ ತಪ್ಪಿದೆ.

ಮಹಿಳೆಯ ಮೇಲೆ ಕೊಲೆ ಯತ್ನ ಪ್ರಕರಣವೂ ದಾಖಲಾಗಿದೆ. ಮಗುವನ್ನು ಕೈಚಲ್ಲಿದ ಆಘಾತಕಾರಿ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ಘಟನೆ ರಾಜಧಾನಿ ತಾಷ್ಕೆಂಟ್​ನ ಮೃಗಾಲಯದಲ್ಲಿ ನಡೆದಿದೆ. ತಾಯಿ ತನ್ನ ಮಗುವನ್ನು ಕೆಳಗೆ ಬೀಳಿಸುವ ಮೊದಲು ಬೇಲಿಗಳ ಮೇಲೆ ನೇತಾಡಿಸಿರುವ ದೃಶ್ಯ ದಾಖಲಾಗಿದೆ.

ನ್ಯೂಯಾರ್ಕ್ ಪೋಸ್ಟ್‌ನ ಪ್ರಕಾರ, ಮಗು ಸುಮಾರು 16 ಅಡಿ ಕೆಳಗಿರುವ ಕಂದಕದಲ್ಲಿ ಬಿದ್ದಿದೆ. ಮಗು ಬೀಳುವುದನ್ನು ನೋಡಿದ ಕಂದು ಕರಡಿಯು ಕಂದಕಕ್ಕೆ ಇಳಿಯುವಾಗ ಗಾಬರಿಗೊಂಡ ನೋಡುಗರು ಅಸಹಾಯಕತೆಯಿಂದ ವೀಕ್ಷಿಸಿದರು. ಈ ಎಲ್ಲ ದೃಶ್ಯ ವೈರಲ್​ ವಿಡಿಯೋದಲ್ಲಿ ದಾಖಲಾಗಿದೆ.

ಜುಜು ಹೆಸರಿನ ಕರಡಿ ತನ್ನ ಆವರಣವನ್ನು ಸುತ್ತುತ್ತಿತ್ತು. ಈ ವೇಳೆ ಮಗು ಕಂದಕ್ಕೆ ಬೀಳುವುದನ್ನು ನೋಡಿ ಅಲ್ಲಿಗೆ ಇಳಿದ ಕರಡಿ ಮಗುವಿನ ಬಳಿ ಹೋಗಿ ಮೂಸಿ ನೋಡಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅದೃಷ್ಟವಶಾತ್ ಕರಡಿ ಮಗುವಿನ ವಾಸನೆ ಗ್ರಹಿಸಿದ ಬಳಿಕ ನಂತರ ದೂರ ಸರಿಯಿತು. ಇದರಿಂದ ಮಗುವಿಗೆ ಯಾವುದೇ ಹಾನಿಯಾಗಲಿಲ್ಲ.

ಇದಾದ ಬಳಿಕ ಮೃಗಾಲಯದ ಸಿಬ್ಬಂದಿ ಕರಡಿಯನ್ನು ಬೋನ್​ನ ಒಳಗೆ ಕೂಡಿಟ್ಟು ಮಗುವನ್ನು ರಕ್ಷಣೆ ಮಾಡಿದರು. ಸದ್ಯ ಮಗುವಿನ ತಾಯಿಯನ್ನು ವಶಕ್ಕೆ ಪಡೆಯಲಾಗಿದ್ದು, ಆಕೆಯ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ. ಒಂದು ಅಪರಾಧಿ ಎಂದು ಸಾಬೀತಾದರೆ, ಆಕೆ 15 ವರ್ಷ ಜೈಲು ಶಿಕ್ಷೆಗೆ ಗುರಿಯಾಗಬೇಕುತ್ತದೆ.

ಇನ್ನು ಮಗುವಿನ ತಲೆಗೆ ಪೆಟ್ಟು ಬಿದ್ದಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿರವಾಗಿದೆ. ಮಗುವಿನ ತಾಯಿಯ ಉದ್ದೇಶ ಏನು ಎಂಬುದು ಸಂಪೂರ್ಣವಾಗಿ ಅಸ್ಪಷ್ಟವಾಗಿದೆ. ಸಂದರ್ಶಕರು ಮತ್ತು ಮೃಗಾಲಯದ ಸಿಬ್ಬಂದಿ ಇಬ್ಬರೂ ಅವಳನ್ನು ತಡೆಯಲು ಪ್ರಯತ್ನಿಸಿದರು. ಆದರೆ ಅವಳು ಎಸ್ಕೇಪ್​ ಆದಳು ಎಂದು ತಿಳಿಸಿದರು. ತದನಂತರದಲ್ಲಿ ಆಕೆಯನ್ನು ಬಂಧಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net