More

    PHOTOS| ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ ನಟಿ ಮಾಳವಿಕಾರ ಮಾದಕ ಫೋಟೋಗಳು!

    ಚೆನ್ನೈ: 2013ರಲ್ಲಿ ತೆರೆಕಂಡ ಪಟ್ಟಂ ಪೋಲ್​ ಸಿನಿಮಾ ಮೂಲಕ ಸಿನಿಮಾ ವೃತ್ತಿ ಜೀವನವನ್ನು ಆರಂಭಿಸಿದ ಮಲಯಾಳಿ ಬ್ಯೂಟಿ ಮಾಳವಿಕಾ ಮೋಹನನ್​, ಇದೀಗ ದಕ್ಷಿಣ ಭಾರತ ಸಿನಿರಂಗದ ಪ್ರಮುಖ ನಟಿಯರ ಸಾಲಲ್ಲಿ ಒಬ್ಬರಾಗಿದ್ದಾರೆ. ಅನೇಕ ದೊಡ್ಡ ದೊಡ್ಡ ಸಿನಿಮಾಗಳ ಭಾಗವಾಗಿರುವ ಮಾಳವಿಕಾ, ಸೋಶಿಯಲ್​ ಮೀಡಿಯಾ ಸೆನ್ಸೇಷನ್​ ಕೂಡ ಹೌದು.

    ಮಾಳವಿಕಾ ಅವರು ಇತ್ತೀಚೆಗೆ ತಮ್ಮ ಟ್ವಿಟರ್​ ಮತ್ತು ಇನ್​ಸ್ಟಾಗ್ರಾಂನಲ್ಲಿ ಹರಿಬಿಟ್ಟಿರುವ ಫೋಟೋಗಳು ಪಡ್ಡೆ ಹುಡುಗರ ನಿದ್ದೆಗೆಡಿಸಿದೆ. ಎದೆ ಸೀಳು ಕಾಣುವಂತಹ ಸಿಲ್ವರ್​ ಬಣ್ಣದ ಹೊಳೆಯುವ ಉಡುಪುನ್ನು ಧರಿಸಿ, ಮಾದಕ ಭಂಗಿಗಳಲ್ಲಿ ಕ್ಯಾಮೆರಾಗೆ ಪೋಸ್​ ನೀಡಿರುವ ಫೋಟೋಗಳಾಗಿದ್ದು, ಮಾಳವಿಕಾ ಮೈಮಾಟಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

    ಫೋಟೋದಲ್ಲಿ ಮಾಳವಿಕಾ ಎಂಬ್ರಾಯಿಡರಿ ಕಾಕ್ಟೈಲ್ ಡ್ರೆಸ್​ ಅನ್ನು ಧರಿಸಿದ್ದಾರೆ. ಎದೆ ಸೀಳು, ಕ್ರಾಸ್ ಬ್ಯಾಕ್ ಮತ್ತು ತೊಡೆ ಎತ್ತರದ ಸೀಳು ವಿನ್ಯಾಸ ಹೊಂದಿರುವ ಡ್ರೆಸ್​​ ಪಾರ್ಟಿಗಳಿಗೆ ಧರಿಸಲು ಹೇಳಿ ಮಾಡಿಸಿದಂತಿದೆ. ನಿನ್ನೆ ಫೋಟೋಗಳನ್ನು ಪೋಸ್ಟ್​ ಮಾಡಿದ ಕೆಲವೇ ಹೊತ್ತಲ್ಲಿ ಮಾಳವಿಕಾ ಟ್ವಿಟರ್​ನಲ್ಲಿ ಟಾಪ್​ ಟ್ರೆಂಡಿಂಗ್​ನಲ್ಲಿದ್ದರು.

    ಫೋಟೋಗಳಿಗೆ “ಮಳೆಯ ದಿನದಲ್ಲಿ ಸ್ವಲ್ಪ ಹೊಳಪು” ಎಂಬ ಅಡಿಬರಹವನ್ನು ಮಾಳವಿಕಾ ನೀಡಿದ್ದಾರೆ. ಫೋಟೋಗಳು ಸಿಕ್ಕಾಪಟ್ಟೆ ವೈರಲ್​ ಆಗಿವೆ. ಇನ್​ಸ್ಟಾಗ್ರಾಂನಲ್ಲಿ ಎಲ್ಲಾ ಫೋಟೋಗಳು 2 ಲಕ್ಷಕ್ಕೂ ಅಧಿಕ ಲೈಕ್ಸ್​ಗಳನ್ನು ಪಡೆದುಕೊಂಡಿವೆ.

    ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಮಾಳವಿಕ ದಕ್ಷಿಣ ಭಾರತ ಸಿನಿರಂಗದಲ್ಲಿ ದಿನೇ ದಿನೆ ತಮ್ಮ ಖ್ಯಾತಿ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ನಟ ವಿಜಯ್​ ನಟನೆಯ ಮಾಸ್ಟರ್​ ಚಿತ್ರದ ಮೂಲಕ ಮಾಳವಿಕ ಒಳ್ಳೆಯ ಹೆಸರು ಗಳಿಸಿದ್ದಾರೆ. ಇತ್ತೀಚೆಗಷ್ಟೇ ಮಾರನ್​ ಸಿನಿಮಾದಲ್ಲಿ ಧನುಸ್ಸ್​ ಜೊತೆ ನಟಿಸಿದ್ದಾರೆ. ಚಿತ್ರ ಬಿಡುಗಡೆಯಾದರೂ ಬಾಕ್ಸ್​ ಆಫೀಸ್​ನಲ್ಲಿ ಸದ್ದು ಮಾಡಲಿಲ್ಲ. (ಏಜೆನ್ಸೀಸ್​)

    ಕೂಡಲೇ ದೇಶದ ಜನರ ಬಳಿ ಕ್ಷಮೆ ಕೇಳಿ, ಈವರೆಗೂ ಏನಾಗಿದೆ ಅದಕ್ಕೆ ನೀವೇ ಹೊಣೆ: ನೂಪುರ್​ಗೆ ಸುಪ್ರೀಂ ತರಾಟೆ

    ವಿದ್ಯಾಸಾಗರ್​ ಜತೆ ಮದುವೆ ಆಗಲು ಮೊದ ಮೊದಲು ನಿರಾಕರಿಸಿದ್ದ ಮೀನಾ ಮತ್ತೆ ಅವರನ್ನೇ ಮದುವೆ ಆಗಿದ್ದೇಕೆ?

    ಸರ್ಕಾರದ ಪತನದ ಬೆನ್ನಲ್ಲೇ ಇ.ಡಿ.ಗೆ ಹೋಗಲು ತಯಾರಾದ ಶಿವಸೇನಾ ನಾಯಕ ರಾವತ್: ಇಂದು ಹಾಜರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts