ಅನುಮತಿ ಇಲ್ಲದೆ ಫೋಟೋ ಯಾಕೆ ತೆಗೆದೆ? ಪಬ್​ನಲ್ಲಿ ಕಿರಿಕ್​ ಕೀರ್ತಿಯ ಮೇಲೆ ಬಿಯರ್​ ಬಾಟಲಿನಿಂದ ಹಲ್ಲೆ

Kirik Keerthy
Published on

ಬೆಂಗಳೂರು: ಬಿಗ್​ಬಾಸ್​ ನಾಲ್ಕನೇ ಆವೃತ್ತಿಯ ರನ್ನರ್​ ಅಪ್​ ಕಿರಿಕ್​ ಕೀರ್ತಿಯ ಮೇಲೆ ಬಿಯರ್​ ಬಾಟಲಿನಿಂದ ಹಲ್ಲೆ ನಡೆದಿರುವ ಘಟನೆ ಗುರುವಾರ ರಾತ್ರಿ ಬೆಂಗಳೂರಿನ ಸದಾಶಿವನಗರದ ಪಬ್​ನಲ್ಲಿ ನಡೆದಿದೆ.

ಸ್ನೇಹಿತರು ಹಾಗೂ ಕುಟುಂಬಸ್ಥರ ಜತೆ ಕಿರಿಕ್​ ಕೀರ್ತಿ ಅವರು ನಿನ್ನೆ ರಾತ್ರಿ ಸದಾಶಿವನಗರದ ಹ್ಯಾಮರ್ಡ್ ಪಬ್​ಗೆ ಹೋಗಿದ್ದರು. ಈ ವೇಳೆ ಪಬ್​ನಲ್ಲಿ ಸಾಕಷ್ಟು ಜನ ಸೇರಿದ್ದರು. ಅಲ್ಲಿದ್ದ ಒಬ್ಬ ಅಪರಿಚಿತ ವ್ಯಕ್ತಿಯೊಬ್ಬ ಕಿರಿಕ್​ ಕೀರ್ತಿಯ ಫೋಟೋವನ್ನು ತೆಗೆದಿದ್ದಾರೆ. ಅನುಮತಿ ಇಲ್ಲದೆ ಫೋಟೋ ಯಾಕೆ ತೆಗೆದೆ ಎಂದು ಕೀರ್ತಿ ಪ್ರಶ್ನಿಸಿದ್ದಾರೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.

ಮಾತಿಗೆ ಮಾತು ಬೆಳೆದು ಒಬ್ಬರಿಗೊಬ್ಬರು ಪರಸ್ಪರ ನಿಂದಿಸಿಕೊ0ಡಿದ್ದಾರೆ. ಇಷ್ಟಕ್ಕೆ ಕೋಪಗೊಂಡ ಅಪರಿಚಿತ ವ್ಯಕ್ತಿ ಪಕ್ಕದಲ್ಲೇ ಇದ್ದ ಬಿಯರ್​ ಬಾಟಲಿಯನ್ನು ತೆಗೆದುಕೊಂಡು ಕಿರಿಕ್​ ಕೀರ್ತಿಯ ತಲೆಗೆ ಹೊಡೆದಿದ್ದಾನೆ. ಇದರಿಂದ ಗಾಯಗೊಂಡ ಕಿರಿಕ್​ ಕೀರ್ತಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಸಂಬಂಧ ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net