ತಮ್ಮ ಮಗುವಿಗೆ ಪುನೀತ್ ರಾಜಕುಮಾರ್ ಅಂತ ಹೆಸರಿಟ್ಟು ಅಭಿಮಾನ ಮೆರೆದ ದಂಪತಿ

Kalaburagi Couple
Published on

ಕಲಬುರಗಿ: ನಟ ಪುನೀತ್​ ರಾಜ್​ಕುಮಾರ್​ ಶಾರೀರಿಕವಾಗಿ ನಮ್ಮೆಲ್ಲರನ್ನೂ ಬಿಟ್ಟು ಹೋಗಿದ್ದರೂ ಕೂಡ ಅವರ ಆದರ್ಶ ಹಾಗೂ ಮೌಲ್ಯಯುತ ಗುಣಗಳು ಮತ್ತು ಸರಳತೆಯ ಮೂಲಕ ಶಾಶ್ವತವಾಗಿ ಜೀವಂತವಾಗಿದ್ದಾರೆ. ಅಪ್ಪು ಅಗಲಿ ಎರಡು ತಿಂಗಳು ಕಳೆದರೂ ಕೂಡ ಅವರ ನೆನಪು ಇನ್ನೂ ಮಾಸಿಲ್ಲ. ನೆಚ್ಚಿನ ನಟನ ಹೆಸರು ಚಿರಸ್ಥಾಯಿ ಆಗಲಿ ಎಂದು ಅನೇಕರು ತಮ್ಮದೇ ರೀತಿಯಲ್ಲಿ ಪುನೀತ್​ ಹೆಸರನ್ನು ಬಳಸಿಕೊಂಡು ಅಭಿಮಾನ ಮೆರೆಯುತ್ತಿದ್ದಾರೆ.

ಇದೀಗ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಯಾತನೂರು ಗ್ರಾಮದ ಸಿದ್ದು ಮತ್ತು ಕಾವೇರಿ ದಂಪತಿ ತಮ್ಮ ಮಗುವಿಗೆ ಪುನಿತ್ ರಾಜಕುಮಾರ್ ಅಂತ ಹೆಸರಿಟ್ಟು ತಮ್ಮ ಅಭಿಮಾನ ಮರೆದಿದ್ದಾರೆ.

ಡಿಸೆಂಬರ್ 5ರಂದು ದಂಪತಿಗೆ ಗಂಡು ಮಗು ಜನಿಸಿದೆ. ಸಿದ್ದು ಮತ್ತು ಕಾವೇರಿ ದಂಪತಿ ಅಪ್ಪಟ ಪುನೀತ್​ ಅಭಿಮಾನಿಗಳಾಗಿರುವುದರಿಂದ ತಮ್ಮ ಮಗುವಿಗೆ ಪುನೀತ್​ ರಾಜಕುಮಾರ್​ ಎಂದು ಹೆಸರಿಟ್ಟಿದ್ದಾರೆ. ಹೆರಿಗೆಗೂ ಮೊದಲೇ ಗಂಡು ಮಗುವಾದ್ರೆ ಪುನಿತ್ ರಾಜಕುಮಾರ್ ಹೆಸರು ಇಡೋ ಬಗ್ಗೆ ನಿರ್ಧಾರ ಮಾಡಿದ್ದರು. ತಮ್ಮ ಆಸೆಯಂತೆಯೇ ನಡೆದಿದ್ದು, ಇದೀಗ ಹೆಸರಿಡುವ ಮೂಲಕ ತಮ್ಮ ಅಭಿಮಾನವನ್ನು ತೋರಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net