More

    RCB ಟ್ರೋಫಿ ಗೆಲ್ಲೋವರೆಗೂ ಮದ್ವೆಯಾಗಲ್ಲ ಎಂದ ಮಹಿಳಾ ಅಭಿಮಾನಿ: ಕ್ರಿಕೆಟಿಗ ಅಮಿತ್​ ಮಿಶ್ರಾ ಕಾಮೆಂಟ್​ ವೈರಲ್​

    ಬೆಂಗಳೂರು: ಕಳೆದ ಮಂಗಳವಾರ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ವಿರೋಚಿತ ಸೋಲು ಕಂಡರು. ಆರ್​ಸಿಬಿ ಆಟಕ್ಕೆ ಅಭಿಮಾನಿಗಳು ಫಿದಾ ಆದರು. ಇನ್ನು ಈ ಪಂದ್ಯದಲ್ಲಿ ಹೆಚ್ಚಾಗಿ ಗಮನ ಸೆಳೆದಿದ್ದು ಆರ್​ಸಿಬಿ ಮಹಿಳಾ ಅಭಿಮಾನಿ ಹಿಡಿದ ಬ್ಯಾನರ್​.

    ಬ್ಯಾನರ್​​ ಎಷ್ಟರ ಮಟ್ಟಿಗೆ ಸುದ್ದಿಯಾಗಿದೆ ಅಂದರೆ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದೆ. ಹಾಗಾದರೆ ಆ ಬ್ಯಾನರ್​ನಲ್ಲಿ ಏನಿತ್ತು ಎಂದು ನೋಡುವುದಾದರೆ, ಆರ್​ಸಿಬಿ ಐಪಿಎಲ್​ ಟ್ರೋಫಿ ಜಯಿಸುವವರೆಗೂ ನಾನು ಮದುವೆ ಆಗುವುದಿಲ್ಲ ಎಂದು ಬರೆಯಲಾಗಿತ್ತು. ಅಲ್ಲಿಗೆ ತಿಳಿಯುತ್ತೆ ಆರ್​ಸಿಬಿ ಮೇಲೆ ಎಷ್ಟು ಅಭಿಮಾನ ಇದೆ ಅಂತಾ. ಆರ್​ಸಿಬಿಗಾಗಿ ಮದುವೆಯನ್ನು ಪಕ್ಕಕ್ಕಿಟ್ಟ ಪಕ್ಕಾ ಅಭಿಮಾನಿಗೆ ಆರ್​ಸಿಬಿ ಬಳಗವೂ ಕೂಡ ಫಿದಾ ಆಗಿದೆ. ಹೇಳಬೇಕೆಂದರೆ, ಆಟಕ್ಕಿಂತ ಹೆಚ್ಚಾಗಿ ಮಹಿಳಾ ಅಭಿಮಾನಿಯ ಬ್ಯಾನರ್​ ಸದ್ದು ಮಾಡಿದೆ.

    ಇನ್ನು ಮಹಿಳಾ ಅಭಿಮಾನಿ ಬ್ಯಾನರ್​ ಹಿಡಿದು ನಿಂತಿರುವ ಫೋಟೋವನ್ನು ಟೀಮ್​ ಇಂಡಿಯಾದ ಕ್ರಿಕೆಟಿಗ ಅಮಿತ್​ ಶರ್ಮಾ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದು, ನಿಜವಾಗಿಯೂ ಆಕೆಯ ಪಾಲಕರು ಚಿಂತಿಸಬೇಕಾದ ವಿಷಯವಿದು ಎಂದು ಬರೆದುಕೊಂಡಿದ್ದಾರೆ. ಅಮಿತ್​ ಮಿಶ್ರಾ ಅವರ ಕಾಮೆಂಟ್​ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ, ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ, ಆರಂಭಿಕ 10 ಓವರ್‌ಗಳಲ್ಲಿ 2 ವಿಕೆಟ್‌ಗೆ 60 ರನ್ ಪೇರಿಸಿ ಆಘಾತಕ್ಕೊಳಗಾಯಿತು. ಬಳಿಕ ರಾಬಿನ್-ಶಿವಂ ಜೋಡಿ 3ನೇ ವಿಕೆಟ್‌ಗೆ 74 ಎಸೆತಗಳಲ್ಲಿ 165 ರನ್ ಜತೆಯವಾಡಿದ ಪರಿಣಾಮ 4 ವಿಕೆಟ್‌ಗೆ 216 ರನ್ ಕಲೆಹಾಕಿತು. ಈ ಬೃಹತ್ ಸವಾಲು ಬೆನ್ನಟ್ಟಿದ ಆರ್‌ಸಿಬಿಗೆ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಕೈಕೊಟ್ಟರು. ನಂತರ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಹೋರಾಟದ ನಡುವೆ 9 ವಿಕೆಟ್‌ಗೆ 193 ರನ್ ಕಲೆಹಾಕಲಷ್ಟೇ ಶಕ್ತವಾಯಿತು. (ಏಜೆನ್ಸೀಸ್​)

    ಸಪ್ತಪದಿಗೆ ಹೊಸ ಮುಹೂರ್ತ ಫಿಕ್ಸ್; 28, ಮೇ 11, 25ಕ್ಕೆ ಸಾಮೂಹಿಕ ವಿವಾಹ

    ಗುತ್ತಿಗೆದಾರ ಸಂತೋಷ್ ಮೃತದೇಹ ಹುಟ್ಟೂರು ತಲುಪುತ್ತಿದ್ದಂತೆ​ ಪೊಲೀಸರು ಮತ್ತು ಕುಟುಂಬಸ್ಥರ ಮಧ್ಯೆ ವಾಗ್ವಾದ

    ದೇಶಾದ್ಯಂತ ತೆರೆಗೆ ಅಪ್ಪಳಿಸಿದ ತೂಫಾನ್​: ಬೆಳ್ಳಿಪರದೆಯಲ್ಲಿ ರಾಕಿ ಭಾಯ್​ ಅಬ್ಬರ​, ಅಭಿಮಾನಿಗಳ ಹರ್ಷೋದ್ಘಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts