More

    ಅಲ್ಲು ಅರ್ಜುನ್​ರ ವ್ಯಾನಿಟಿ ವ್ಯಾನ್​ ಒಳಗಡೆ ಏನೇನಿದೆ? ಇಲ್ಲಿದೆ ಎಕ್ಸ್​ಕ್ಲೂಸಿವ್​ ಫೋಟೋಸ್​ ವಿತ್​ ಡಿಟೇಲ್ಸ್​!

    ಹೈದರಾಬಾದ್​: ಸ್ಟಾರ್​ ನಟರು ತಮ್ಮದೇ ಸ್ವಂತ ಕ್ಯಾರವಾನ್​ ಹೊಂದುವ ಸಂಗತಿ ಹೊಸದೇನಲ್ಲ. ಬಾಲಿವುಡ್​, ಟಾಲಿವುಡ್​ ಮತ್ತು ಕಾಲಿವುಡ್​ನ ಅನೇಕ ನಟರು ದುಬಾರಿ ವ್ಯಾನಿಟಿ ವ್ಯಾನ್​ ಹೊಂದಿದ್ದಾರೆ.

    ಈ ವ್ಯಾನಿಟಿ ವ್ಯಾನ್‌ಗಳು ಸೆಲೆಬ್ರಿಟಿಗಳ ಎರಡನೇ ಮನೆಯಾಗಿದೆ. ಸೆಲೆಬ್ರಿಟಿಗಳು ಶೂಟಿಂಗ್​ಗೆ ತಯಾರಾಗಲು, ಮಲಗಲು, ಬಿಡುವಿನ ಸಮಯದ ವಿಶ್ರಾಂತಿ ಪಡೆಯಲು ಕ್ಯಾರವಾನ್​ಗಳು ಸಹಕಾರಿಯಾಗಿವೆ. ಭವ್ಯ ಬಂಗಲೆಗಳಂತೆ ನಟರ ಕ್ಯಾರವಾನ್​ಗಳು ಕೂಡ ಹಲವು ವೈಶಿಷ್ಟ್ಯಗಳೊಂದಿಗೆ ಕಂಗೊಳಿಸುತ್ತಿರುತ್ತವೆ.

    ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್ ಅವರು ಸದ್ಯದ ಪುಷ್ಪ ಚಿತ್ರದ ಸಕ್ಸನ್​ ಅಲೆಯಲ್ಲಿ ತೇಲುತ್ತಿದ್ದಾರೆ. ವ್ಯಾನಿಟಿ ವ್ಯಾನ್​ ಹೊಂದಿರುವವರಲ್ಲಿ ಅಲ್ಲು ಅರ್ಜುನ್​ ಕೂಡ ಒಬ್ಬರು. ಅವರು 2019ರಲ್ಲೇ ಲಕ್ಷುರಿ ವ್ಯಾನಿಟಿ ವ್ಯಾನ್ ಹೊಂದಿದ್ದಾರೆ. ಅವರು ತಮ್ಮ ಅಭಿಮಾನಿಗಳ ಜತೆ ವ್ಯಾನ್​ನ ಕೆಲವು ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ. ರೆಡ್ಡಿ ಕಸ್ಟಮ್ಸ್ ವಿನ್ಯಾಸಗೊಳಿಸಿರುವ ಫಾಲ್ಕನ್​ ಕಂಪನಿಯ ವ್ಯಾನಿಟಿ ವ್ಯಾನ್​ ಬರೋಬ್ಬರಿ 7 ಕೋಟಿ ರೂಪಾಯಿ ಬೆಲೆ ಬಾಳುತ್ತದೆ. ಹಾಗಾದ್ರೆ ಅಲ್ಲು ಅರ್ಜುನ್​ ಲಕ್ಷುರಿ ವ್ಯಾನ್​ನಲ್ಲಿ ಏನಿದೆ ಅಂತಾ ನೋಡುವುದಾದರೆ…

    1. ಮೊದಲ ಅಕ್ಷರಗಳ ಮುದ್ರಣ
    ಅಲ್ಲು ಅರ್ಜುನ್​ ಅವರು ಮೊದಲ ಅಕ್ಷರಗಳಾದ AA ಅನ್ನ ವ್ಯಾನ್​ನ ಹೊರ ಹಾಗೂ ಒಳಭಾಗದಲ್ಲಿ ಮುದ್ರಿಸಲಾಗಿದೆ.

    ಅಲ್ಲು ಅರ್ಜುನ್​ರ ವ್ಯಾನಿಟಿ ವ್ಯಾನ್​ ಒಳಗಡೆ ಏನೇನಿದೆ? ಇಲ್ಲಿದೆ ಎಕ್ಸ್​ಕ್ಲೂಸಿವ್​ ಫೋಟೋಸ್​ ವಿತ್​ ಡಿಟೇಲ್ಸ್​!

    2. ಅತ್ಯಾಧುನಿಕ ಒಳಾಂಗಣ
    ಕಪ್ಪು ಬಣ್ಣದ ಐಷಾರಾಮಿ ವ್ಯಾನ್​ನ ಒಳಗೆ ಕಪ್ಪು, ಬಿಳಿ ಮತ್ತು ಬೆಳ್ಳಿಯ ಬಣ್ಣದಲ್ಲಿ ಅತ್ಯಾಧುನಿಕ ಒಳಾಂಗಣ ವಿನ್ಯಾಸ ಮಾಡಲಾಗಿದೆ. ನೋಡಿದರೆ ತಕ್ಷಣ ಮನಸೂರೆಗೊಳ್ಳುವಂತಹ ಒಳಾಂಗಣ ವಿನ್ಯಾಸವಿದೆ.

    ಅಲ್ಲು ಅರ್ಜುನ್​ರ ವ್ಯಾನಿಟಿ ವ್ಯಾನ್​ ಒಳಗಡೆ ಏನೇನಿದೆ? ಇಲ್ಲಿದೆ ಎಕ್ಸ್​ಕ್ಲೂಸಿವ್​ ಫೋಟೋಸ್​ ವಿತ್​ ಡಿಟೇಲ್ಸ್​!

    3. ವಿಶಾಲವಾದ ವ್ಯಾನ್
    ದೊಡ್ಡ ವ್ಯಾನಿಟಿ ವ್ಯಾನ್​ನಲ್ಲಿ ಒಂದು ಆರಾಮದಾಯಕ ಕುರ್ಚಿ​ ಇದೆ. ಶೂಟಿಂಗ್​ಗೆ ತಯಾರಾಗಲು ಮತ್ತು ಬಿಡುವಿನ ವೇಳೆಯಲ್ಲಿ ವಿಶ್ರಾಂತಿ ಪಡೆಯಲು ಅದು ನೆರವಾಗಲಿದೆ. ಅಲ್ಲದೆ, ಪಕ್ಕದಲ್ಲೇ ವ್ಯಾನ್​ಗೆ ಅಂಟಿಕೊಂಡಂತೆ ನಿರ್ಮಿಸಿರುವ ಸೋಫಾ ಮಾದರಿಯ ಕುರ್ಚಿಯನ್ನು ಕಾಣಬಹುದಾಗಿದೆ. ಯಾರಾದರೂ ಅತಿಥಿಗಳು ಬಂದರೆ ಮಾತುಕತೆ ನಡೆಸಲು ಅದು ಸಹಕಾರಿಯಾಗಿದೆ.

    ಅಲ್ಲು ಅರ್ಜುನ್​ರ ವ್ಯಾನಿಟಿ ವ್ಯಾನ್​ ಒಳಗಡೆ ಏನೇನಿದೆ? ಇಲ್ಲಿದೆ ಎಕ್ಸ್​ಕ್ಲೂಸಿವ್​ ಫೋಟೋಸ್​ ವಿತ್​ ಡಿಟೇಲ್ಸ್​!

    4. ದುಬಾರಿ ಖರೀದಿ
    ಆರಂಭದಲ್ಲಿ ಅಲ್ಲು ಅರ್ಜುನ್​ ವ್ಯಾನಿಟಿ ವ್ಯಾನ್​ಗಾಗಿ 3.5 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದರು, ಬಳಿಕ ಅದನ್ನು ಅರಮನೆಯಂತೆ ಪರಿವರ್ತಿಸಲು ಇನ್ನಷ್ಟು ಹಣ ಖರ್ಚು ಮಾಡಿದ್ದು, ಒಟ್ಟು 7 ಕೋಟಿ ರೂಪಾಯಿ ಬೆಲೆ ಬಾಳುತ್ತದೆ.

    ಅಲ್ಲು ಅರ್ಜುನ್​ರ ವ್ಯಾನಿಟಿ ವ್ಯಾನ್​ ಒಳಗಡೆ ಏನೇನಿದೆ? ಇಲ್ಲಿದೆ ಎಕ್ಸ್​ಕ್ಲೂಸಿವ್​ ಫೋಟೋಸ್​ ವಿತ್​ ಡಿಟೇಲ್ಸ್​!

    ವ್ಯಾನ್​ ಒಳಗೆ ಕನ್ನಡಿಯೊಂದಿಗೆ ಸಂಪೂರ್ಣ ಸುಸಜ್ಜಿತ ವಾಶ್ ರೂಂ ಇದೆ. ಬೇಸಿನ್​, ಶವರ್​ ಮತ್ತು ವ್ಯಾನ್​ ಸುತ್ತಲೂ ಪ್ರಕಾಶಮಾನವಾದ ದೀಪಗಳನ್ನು ಅಳವಡಿಸಲಾಗಿದೆ.

    ಅಲ್ಲು ಅರ್ಜುನ್​ರ ವ್ಯಾನಿಟಿ ವ್ಯಾನ್​ ಒಳಗಡೆ ಏನೇನಿದೆ? ಇಲ್ಲಿದೆ ಎಕ್ಸ್​ಕ್ಲೂಸಿವ್​ ಫೋಟೋಸ್​ ವಿತ್​ ಡಿಟೇಲ್ಸ್​!

    ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ನಟ ಅಲ್ಲು ಅರ್ಜುನ್​ ಅವರ ಪುಷ್ಪ ದಿ ರೈಸ್​ ಚಿತ್ರ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಬಾಕ್ಸ್​ಆಫೀಸ್​ನಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದು, ಸದ್ಯ ಪುಷ್ಪ ದಿ ರೂಲ್​ ಚಿತ್ರದ ಶೂಟಿಂಗ್​ನಲ್ಲಿ ಅಲ್ಲು ಅರ್ಜುನ್​ ತೊಡಗಿಕೊಂಡಿದ್ದಾರೆ. (ಏಜೆನ್ಸೀಸ್​)

    ಲಕ್ಷುರಿ ಕ್ಯಾರವಾನ್​ ಖರೀದಿಸಿದ ಮಹೇಶ್​ ಬಾಬು: ಟಾಲಿವುಡ್​ನಲ್ಲೇ ದುಬಾರಿ ವ್ಯಾನಿಟಿ ವ್ಯಾನ್​ ಇದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts