ನವದೆಹಲಿ: ಬೇಸಿಗೆಯನ್ನು ಎಂಜಾಯ್ ಮಾಡಲು ಇರುವ ಉತ್ತಮವಾದ ದಾರಿ ಅಂದರೆ ಅದು ಸ್ವಿಮ್ಮಿಂಗ್. ಅದು ಸ್ವಿಮ್ಮಿಂಗ್ ಪೂಲ್ ಆಗಿರಲಿ, ಬೀಚ್ ಆಗಿರಲಿ ಅಥವಾ ತಾಜಾ ನದಿ ನೀರಾಗಿರಲಿ ಬೇಸಿಗೆ ಕಾಲದಲ್ಲಿನ ನೀರಾಟ ಮಜಬೂತಾಗಿರುತ್ತದೆ. ಸ್ವಿಮ್ಮಿಂಗ್ ಮಾನವನ ಒತ್ತಡವನ್ನು ನೀಗಿಸುತ್ತದೆ. ಆದರೆ, ನೀರಿನಲ್ಲಿ ಇರುವಾಗ ತುಂಬಾ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಒಂದು ವೇಳೆ ಸ್ವಿಮ್ಮಿಂಗ್ ಮಾಡುವಾಗ ದಿಢೀರನೇ ಭಾರೀ ಗಾತ್ರದ ಹಾವೊಂದು ಪ್ರತ್ಯಕ್ಷವಾದರೆ ಏನಾಗಬಹುದು? ಶಾಕ್ ಅಂತೂ ಆಗೇ ಆಗುತ್ತದೆ. ಅದಕ್ಕೆ ಉದಾಹರಣೆಯೇ ಈ ವಿಡಿಯೋ.
ಕೆಲ ವಿದೇಶಿಗರು ನದಿಯಲ್ಲಿ ಸ್ವಿಮ್ಮಿಂಗ್ ಎಂಜಾಯ್ ಮಾಡುವಾಗ ಇದ್ದಕ್ಕಿದ್ದಂತೆ ಭಾರೀ ಗಾತ್ರದ ಹಾವೊಂದು ಕಾಣಿಸಿಕೊಂಡಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವಕನೊಬ್ಬನ ಪಕ್ಕದಲ್ಲೇ ಹಾವು ಹೋಗುತ್ತಿದ್ದರು ಆತ ಹೆದರಲಿಲ್ಲ. ಆದರೆ, ಓರ್ವ ಯುವಕ ಹಾವನ್ನು ನೋಡಿ ಓಡುವಾಗ ಹಾವು ಆತನನ್ನೇ ಹಿಂಬಾಲಿಸಿತು. ಆದರೆ, ಆತ ಹಾವಿಗೆ ಹೆದರದೆ ಸ್ವಲ್ಪ ದೂರ ನಿಂತು ಮೊಬೈಲ್ನಲ್ಲಿ ಆ ದೃಶ್ಯವನ್ನು ಸೆರೆ ಹಿಡಿದನು.
ಈ ವಿಡಿಯೋವನ್ನು ವೈಲ್ಡ್ಸ್ಟಿಕ್ ಹೆಸರಿನ ಇನ್ಸ್ಟಾಗ್ರಾಂ ಪೇಜ್ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಈವರೆಗೆ 4.2 ಮಿಲಿಯನ್ಗೂ ಹೆಚ್ಚು ಮಂದಿ ವಿಡಿಯೋ ವೀಕ್ಷಣೆ ಮಾಡಿದ್ದಾರೆ. ವಿಡಿಯೋ ನೋಡಿ ಅನೇಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಹಾವು ನೋಡಿ ಯಾರೊಬ್ಬರು ಹೆದರದಿರುವುದನ್ನು ನೋಡಿ ಬಹುಶಃ ಹಾವು ಸಾಕು ಪ್ರಾಣಿಯಾಗಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)