More

    ಡಿಕೆಶಿ ಬಗ್ಗೆ ಹೇಳಿರೋರು ನಿಮ್ಮ ಪಟಾಲಂಗಳೇ ಅಲ್ವಾ? ಸಿದ್ದರಾಮಯ್ಯರತ್ತ ಬೊಟ್ಟು ಮಾಡಿದ ಎಚ್​ಡಿಕೆ

    ರಾಮನಗರ: ಕಾಂಗ್ರೆಸ್‌ ವಕ್ತಾರ ವಿ.ಎಸ್.ಉಗ್ರಪ್ಪರೊಂದಿಗಿನ ಸಂಭಾಷಣೆಯಲ್ಲಿ ಸಲೀಂ ಎಂಬ ಕಾರ್ಯಕರ್ತರು ಡಿ.ಕೆ.ಶಿವಕುಮಾರ್​ ಅವರನ್ನು ‘ಕಲೆಕ್ಷನ್ ಗಿರಾಕಿ’ ಎಂದು ಕರೆದಿರುವುದು ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಕಡೆ ಬೊಟ್ಟು ಮಾಡಿದ್ದಾರೆ.

    ಬಿಡದಿ ಬಳಿಯಿರುವ ಕೇತುಗಾನಹಳ್ಳಿಯ ತಮ್ಮ ಫಾರ್ಮ್​ ಹೌಸ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್​ಡಿಕೆ, ಡಿ.ಕೆ ಶಿವಕುಮಾರ್ ಅವರು ಪಕ್ಷ ಕಟ್ಟೋಕೆ ಹೋಗಿದ್ದಾರೆ. ಅವರ ಕುರಿತು ನಿನ್ನೆ ಒಂದು ವಿಡಿಯೋ ಬಂದಿದೆ. ಆ ವಿಡಿಯೋ ನೀವೆ ಬಿಟ್ರಾ ಅಥವಾ ಅವರೇ ಹೇಳಿದ್ರಾ ಗೊತ್ತಿಲ್ಲ? ಡಿಕೆಶಿ ಅವರನ್ನು ಮುಖ್ಯಂಮಂತ್ರಿ ಮಾಡ್ತೀರಾ ನೀವುಗಳು? ಅವರು ಹಗಲು-ರಾತ್ರಿ ಅಂಥಾ ಓಡಾಡಿಕೊಂಡಿದ್ದಾರೆ. ಇವಾಗ ಅವರ ಬಗ್ಗೆ ಹೇಳಿರೋರು ಯಾರು ನಿಮ್ಮ ಪಟಾಲಂಗಳೇ ಅಲ್ವ? 2013ರಲ್ಲಿ ಹೇಳಿದ್ರಿ ಇದೇ ನನ್ನ ಕೊನೆ ಚುನಾವಣೆ ಅಂತಾ. ನಿಮಗೆ ಇನ್ನೂ ಆಸೆ ಹೋಗಿಲ್ಲ. ಈಗಲೂ ಸಿಎಂ ಆಗಬೇಕು ಅಂತಾ ಇದ್ದೀರಾ. ಜನರಿಗೆ ಒಳ್ಳೇದು ಮಾಡೋ ಆಲೋಚನೆ ನಿಮಗೆ ಇಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

    50 ವರ್ಷದ ರಾಜಕಾರಣದಲ್ಲಿ ತುಂಬಾ ಜನರನ್ನು ನೋಡಿದ್ದೇನೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನು ರಾಜಕಾರಣದಲ್ಲಿ ಎಂದು ಸಹ ಸಿದ್ದರಾಮಯ್ಯ ಅವರ ಹಂಗಿನಲ್ಲಿ ಬಂದಿಲ್ಲ. ದೇವೇಗೌಡರು ಸಾತನೂರಿನಲ್ಲಿ ಚುನಾವಣೆ ನಿಂತಾಗ ನಾನು ನೇತೃತ್ವ ವಹಿಸಿದ್ದೆ. ಜನತಾ ಪಕ್ಷದಲ್ಲಿ ಇದ್ದಾಗ ನಾನು ಅನೇಕರಿಗೆ ಚುನಾವಣೆಯಲ್ಲಿ ಸಹಾಯ ಮಾಡಿದ್ದೇನೆ. ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿದ್ದೇನೆ. ಸಿದ್ದರಾಮಯ್ಯ ಅವರು ಜಾತ್ಯಾತೀತ ಜನತಾದಳ ಅಧ್ಯಕ್ಷರಾಗಿದ್ದರು. 1999 ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋತಾಗ, ನಮ್ಮ ಅನುಗ್ರಹ ಮನೆಗೆ ಬಂದು ಕಣ್ಣೀರು ಇಟ್ಟಿದ್ದರು. ರಾಜಕಾರಣ ಬಿಟ್ಟು ಕರಿ ಕೋಟ್ ಹಾಕಿಕೊಳ್ತೇನೆ ಅಂದಿದ್ರು. ಆಗ ದೇವೇಗೌಡರು ಸಿದ್ದರಾಮಯ್ಯ ಅವರಿಗೆ ಧೈರ್ಯ ತುಂಬಿದರು. ಯಾವ ಜೆಡಿಎಸ್​ ಪಕ್ಷದಿಂದ ಉಪ ಮುಖ್ಯಮಂತ್ರಿ ಆಗಿದ್ರೋ, ಅವತ್ತೆ ನೀವು ಜೆಡಿಎಸ್ ಮುಗಿಸಲು ಮುಂದಾಗಿದ್ರಿ ಎಂದು ಕಿಡಿಕಾರಿದ್ದಾರೆ.

    ಮಂಡ್ಯದಲ್ಲಿ ಜೆಡಿಎಸ್ ವೀಕ್ ಎಂಬ ಹೇಳಿಕೆ ವಿಚಾರವಾಗಿ ಮಂಡ್ಯದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರಿದ್ದಾರೆ. ನಮ್ಮನ್ನು ಕೆಣಕುವುದೇ ನೀವು. ನಾನು ಹೇಳಿದ್ದೀನಿ ನಮ್ಮ ಪಾಡಿಗೆ ನಾನು ಇರ್ತಿನಿ, ನಿಮ್ಮ ಪಾಡಿಗೆ ನೀವು ಪಕ್ಷ ಕಟ್ಟಿ ಎಂದು ಹೇಳಿದ್ದೇನೆ. ಸಮ್ಮಿಶ್ರ ಸರ್ಕಾರದಲ್ಲಿ ರಮೇಶ್ ಜಾರಕಿಹೊಳಿಗೂ ನನಗೂ ವ್ಯತ್ಯಾಸ ಆಗೋಕೆ ಕಾರಣ ನಾನಾ? ಅಂದು ಸಮನ್ವಯ ಸಮತಿ ಅಧ್ಯಕ್ಷರಾಗಿದ್ದು ನೀವೇ ಅಲ್ವಾ? ಯಾಕೆ ಕರೆದು ಮಾತನಾಡಿ ಸಮಸ್ಯೆ ಬಗೆಹರಿಸಲಿಲ್ಲ. ಪಕ್ಷೇತರ ಶಾಸಕರನ್ನು ಮಂತ್ರಿ ಮಾಡಿದ್ದೇ ನೀವು. ನಿಮ್ಮ ರೀತಿ ಡಬಲ್ ಗೇಮ್ ಆಡುವ ಪದ್ಧತಿ ನನಗೆ ಗೊತ್ತಿಲ್ಲ. ಪದೇ ಪದೇ ಕೆಣಕುವ ಅವಶ್ಯಕತೆ ಇಲ್ಲ. ಸಾಲ ಸೋಲ ಮಾಡಿ ಪಕ್ಷ ಕಟ್ಟಿದ್ದು ನಾವು. ನೀವು ಯಾವ ಹಣ ತಂದು ಪಕ್ಷ ಕಟ್ಟಿದ್ದೀರಾ? ಎಂದು ಟೀಕಾಪ್ರಹಾರ ನಡೆಸಿದರು.

    ಕಾಂಗ್ರೆಸ್ ನಾಯಕರಿಗೆ ಹೇಳ್ತಾ ಇದ್ದೀನಿ, ನಿಮ್ಮ ಪಕ್ಷ ಮುಗಿಸೋಕೆ ಸಿದ್ದರಾಮಯ್ಯ ಒಬಿಸಿ ಸಮಾವೇಶ ಮಾಡ್ತಾ ಇದ್ದಾರೆ. ಬಿಎಸ್​ವೈ ಸಿಎಂ ಆಗಿದ್ದಾಗ ನಾನು ಒಂದೇ ಬಾರಿ ಭೇಟಿ ಮಾಡಿದ್ದು ಅಂತಾ ಹೇಳಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸೋಲಿಸಲು ಯಡಿಯೂರಪ್ಪ ಹತ್ತಿರ ಹೋಗಿ ಯಾರ ಕೈಲಿ ದುಡ್ಡು ಇಸ್ಕೊಂಡು ಬಂದ್ರಿ ಅನ್ನೋದು ಗೊತ್ತಿದೆ. ಇದು ನಾನು ಹೇಳ್ತಿಲ್ಲ ನಿಮ್ಮ ಪಕ್ಕದಲ್ಲಿ ಇದ್ದವ್ರೆ ಹೇಳಿರುವ ಮಾತು. ಕಾಂಗ್ರೆಸ್ ನೆರಳಲ್ಲಿ ಇದ್ದೀರಾ ಸರಿಯಾಗಿ ಪಕ್ಷ ಕಟ್ಟಿ ಎಂದು ಸಲಹೆ ನೀಡಿದರು. (ದಿಗ್ವಿಜಯ ನ್ಯೂಸ್​)

    ಡಿಕೆಶಿ ಕಲೆಕ್ಷನ್​ ಗಿರಾಕಿ, ಕುಡುಕನ ಹಾಗೆ ಮಾತಾಡ್ತಾರೆ… ಕೋಲಾಹಲ ಸೃಷ್ಟಿಸಿದೆ ಸಲೀಂ-ಉಗ್ರಪ್ಪ ಸಂಭಾಷಣೆ

    ರಾಜಕಾರಣದಲ್ಲಿ ಚಪ್ಪಲಿ ಎಸೆಯೋರು, ಚಪ್ಪಾಳೆ ಹೊಡೆಯೋರು ಇರ್ತಾರೆ: ಸಲೀಂ-ಉಗ್ರಪ್ಪ ವಿರುದ್ಧ ಡಿಕೆಶಿ ಗರಂ

    ಡಿ.ಕೆ.ಶಿವಕುಮಾರ್ ಕಲೆಕ್ಷನ್​ ಗಿರಾಕಿ, ಕುಡುಕ… ಎಂದ ಸಲೀಂಗೆ ಗೇಟ್​ಪಾಸ್​! ಉಗ್ರಪ್ಪಗೆ ನೋಟಿಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts