More

    ನಾನು ಊಟ ಮಾಡ್ಬೇಕು ಹೊರ ಹೋಗಿ: ಪ್ರಯಾಣಿಕರನ್ನು ಬಸ್​ನಿಂದ ಕೆಳಗಿಳಿಸಿದ ಲೇಡಿ ಕಂಡಕ್ಟರ್​

    ತಿರುವನಂತಪುರಂ: ಕೇರಳದ ಸರ್ಕಾರಿ ಸಾರಿಗೆ ಬಸ್​ನಲ್ಲಿ ಪ್ರಯಾಣಿಕರೊಂದಿಗೆ ಮಹಿಳಾ ಕಂಡಕ್ಟರ್​ ಒಬ್ಬರು ಅಸಭ್ಯವಾಗಿ ವರ್ತಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ತಿರುವನಂತಪುರದ ಚಿರೈನ್‌ಕೀಜ್​ ನಿಲ್ದಾಣದಲ್ಲಿ ಬಸ್‌ ಅನ್ನು ನಿಲ್ಲಿಸಿದ್ದಾಗ ಬಸ್‌ ಹತ್ತಿದ ಪ್ರಯಾಣಿಕರನ್ನು (ಹೆಚ್ಚಾಗಿ ಕಾರ್ಮಿಕ ವರ್ಗದ ಮಹಿಳೆಯರಿದ್ದರು) ಮಹಿಳಾ ಕಂಡಕ್ಟರ್‌, ನಿಂದಿಸಿ, ಕೆಳಗಿಳಿಸಿರುವುದು ವಿಡಿಯೋದಲ್ಲಿದೆ. ನಾನಿನ್ನೂ ಊಟ ಮಾಡಿಲ್ಲ. ಮೊದಲು ನೀವೆಲ್ಲ ಬಸ್​ನಿಂದ ಹೊರಗೆ ಹೋಗಿ ಎಂದು ಕಂಡಕ್ಟರ್​ ಕೂಗಾಡಿದ್ದಾರೆ. ಸದ್ಯ ವೈರಲ್​ ಆಗಿರುವ ವಿಡಿಯೋ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಈಗಾಗಲೇ ಕೇರಳದ ಕೆಎಸ್​ಆರ್​ಟಿಸಿ ನಷ್ಟದಲ್ಲಿದ್ದು, ಈ ಸಮಯದಲ್ಲಿ ಸಿಬ್ಬಂದಿಯ ವರ್ತನೆಯು ಸಾರಿಗೆ ಇಲಾಖೆಯ ಅವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.

    ಅ.1ರ ಮಧ್ಯಾಹ್ನ 1 ಗಂಟೆಗೆ ಈ ಘಟನೆ ನಡೆದಿದೆ. ಮಹಿಳಾ ಕಂಡಕ್ಟರ್​ ಅನ್ನು ಶೀಬಾ ಎಂದು ಗುರುತಿಸಲಾಗಿದೆ. ಇವರು ಅತ್ತಿಂಗಲ್​ ಡಿಪೋದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ ಬಸ್ ಚಿರೈನ್‌ಕೀಜ್​ನಿಂದ ತಿರುವನಂತಪುರಂ ವೈದ್ಯಕೀಯ ಕಾಲೇಜಿಗೆ ಹೋಗಬೇಕಿತ್ತು. ಸಮಯ ಮಧ್ಯಾಹ್ನವಾಗಿದ್ದರಿಂದ ಇದು (ಬಸ್​) ನಾನು ತಿನ್ನುವ ಸ್ಥಳವಾಗಿದೆ. ನಾನು ಹೋಟೆಲ್ ಅಥವಾ ಬೇಕರಿಗೆ ಹೋಗಲು ಸಾಧ್ಯವಿಲ್ಲ. ನೀವೆಲ್ಲ ಕೆಳಗೆ ಇಳಿಯಿರಿ ಎಂದು ಕಂಡಕ್ಟರ್​ ಹೇಳುತ್ತಿರುವುದು ವಿಡಿಯೋದಲ್ಲಿದೆ.

    ಯಾವಾಗ ಕೆಲವರು ಬಸ್​ನಿಂದ ಕೆಳಗೆ ಇಳಿಯಲು ನಿರಾಕರಿಸಿದರೂ ಅವರನ್ನು ಅವಾಚ್ಯ ಪದಗಳಿಂದಲೇ ಕಂಡಕ್ಟರ್​ ನಿಂದಿಸಿದ್ದಾರೆ. ಆಕೆಯ ಬೈಗುಳಗಳನ್ನು ಕೇಳಲಾಗದೇ ಹಿರಿಯ ಮಹಿಳೆ ಮತ್ತು ಕೈಯಲ್ಲಿ ಮಗು ಹಿಡಿದಿದ್ದ ಮಹಿಳೆಯೊಬ್ಬರು ತಕ್ಷಣ ಬಸ್​ ಇಳಿದ ದೃಶ್ಯ ವಿಡಿಯೋದಲ್ಲಿದೆ.

    ಮಹಿಳಾ ಕಂಡಕ್ಟರ್‌ನ ದೌರ್ಜನ್ಯದ ವೀಡಿಯೋ ವೈರಲ್ ಆದ ನಂತರ ಅವರ ತಕ್ಷಣ ಕ್ರಮ ಕೈಗೊಳ್ಳುವಂತೆ ಸಚಿವರಿಗೆ ನೆಟ್ಟಿಗರು ಆಗ್ರಹಿಸುತ್ತಿದ್ದಾರೆ. ಪ್ರಯಾಣಿಕರೊಂದಿಗೆ ಯಾವ ರೀತಿ ನಡೆದುಕೊಳ್ಳಬೇಕು ಎಂಬುದನ್ನು ನಿಮ್ಮ ಕಂಡಕ್ಟರ್​ಗಳಿಗೆ ತಿಳಿಹೇಳಿ ಎಂದು ನೆಟ್ಟಿಗರು ಸಾರಿಗೆ ಸಚಿವರಿಗೆ ಸಲಹೆಗಳನ್ನು ನೀಡುತ್ತಿದ್ದಾರೆ. (ಏಜೆನ್ಸೀಸ್​)

    ಪಿಯು ವಿದ್ಯಾರ್ಥಿಯ ಜೀವ ಕಸಿದ ಐಫೋನ್​: ಮಾತಿಗೆ ತಪ್ಪಿದ್ದಕ್ಕೆ ಸ್ನೇಹಿತನಿಂದಲೇ ಗುಂಡೇಟು

    ಸರ್ಜಾ ಕುಟುಂಬಕ್ಕೆ ಹೊಸ ಅತಿಥಿ ಆಗಮನ: ಹೆಣ್ಣು ಮಗುವಿಗೆ ಜನ್ಮ ನೀಡಿದ ಧ್ರುವ ಸರ್ಜಾ ಪತ್ನಿ ಪ್ರೇರಣಾ

    ರಸ್ತೆಯಲ್ಲಿ ಸಿಕ್ಕ 45 ಸಾವಿರ ರೂ. ಹಣವನ್ನು ಹಿಂತಿರುಗಿಸಿ ಮಾನವೀಯತೆ ಮೆರೆದ ತುಮಕೂರು ವ್ಯಕ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts