VIDEO| ಗಂಧದ ಗುಡಿ ಟ್ರೈಲರ್​ ಬಿಡುಗಡೆ: ಅ. 28ಕ್ಕೆ ತೆರೆಯ ಮೇಲೆ ರಾರಾಜಿಸಲಿದೆ ಅಪ್ಪುವಿನ ಅದ್ಭುತ ಕನಸು

Puneeth
Published on

ಬೆಂಗಳೂರು: ದಿವಂಗತ ನಟ ಪುನೀತ್​ ರಾಜ್​ಕುಮಾರ್​ ಅವರು ಕೊನೆಯದಾಗಿ ಕಾಣಿಸಿಕೊಂಡಿರುವ ಬಹುನಿರೀಕ್ಷಿತ ಗಂಧದ ಗುಡಿ ಟ್ರೈಲರ್​ ಇಂದು (ಅ.9) ಬಿಡುಗಡೆಯಾಗಿದೆ. ಗಂಧದ ಗುಡಿ ಒಂದ ಸಾಕ್ಷ್ಯಾಚಿತ್ರವಾಗಿದ್ದು, ಪುನೀತ್ ಅವರ ಒಂದು ಅದ್ಭುತ ಕನಸಾಗಿದೆ.

ಈ ಸಾಕ್ಷ್ಯಾಚಿತ್ರದಲ್ಲಿ ಕರ್ನಾಟಕದ ಅರಣ್ಯಗಳು ಹಾಗೂ ವನ್ಯಜೀವಿ ಪ್ರಪಂಚದ ಅದ್ಭುತ ದೃಶ್ಯವೈಭವವಿದೆ. ಇದಕ್ಕಾಗಿ ಪುನೀತ್​ ಇಡೀ ಕರುನಾಡನ್ನು ಸುತ್ತಿದ್ದರು. ಅಪ್ಪು ಅಕಾಲಿಕ ಮರಣ ಹಿನ್ನೆಲೆಯಲ್ಲಿ ಗಂಧದ ಗುಡಿ ಸಾಕ್ಷ್ಯಾ ಚಿತ್ರಕ್ಕೆ ಸಿನಿಮಾ ರೂಪ ಕೊಟ್ಟು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಇದೇ ಅ.28ಕ್ಕೆ ಗಂಧದ ಗುಡಿ ಬಿಡುಗಡೆಯಾಗುತ್ತಿದೆ.

ಇದು ಅಪ್ಪು ಕಟ್ಟ ಕಡೆಯದಾಗಿ ಕಾಣಿಕೊಳ್ಳುವ ಸಿನಿಮಾ ಆಗಿರಲಿದೆ. ಗಂಧದ ಗುಡಿ ಟ್ರೈಲರ್ ಅನ್ನು ಅಭಿಮಾನಿಗಳ ನಡುವೆ ಅಶ್ವಿನಿ ಪುನೀತ್ ರಾಜ್​ಕುಮಾರ್​ ಅವರು ನರ್ತಕಿ ಥಿಯೇಟರ್​ನಲ್ಲಿ ಬಿಡುಗಡೆ ಮಾಡಿದರು. ಟ್ರೈಲರ್​ ನೋಡಿ ಅಭಿಮಾನಿಗಳಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ.

ಗಂಧದ ಗುಡಿ ಟ್ರೈಲರ್​ ಮೈ ಝಮ್ ಅನ್ನುವಂತಿದೆ. ಸ್ಕೂಬಾ ಡೈವಿಂಗ್, ವನ್ಯ ಜೀವಿ, ಕಾಡುಗಳಲ್ಲಿ ಅಪ್ಪು ಪಯಣ ಸೇರಿದಂತೆ ಅನೇಕ ಸುಮಧುರ ಕ್ಷಣಗಳು ಟ್ರೈಲರ್​ನಲ್ಲಿದ್ದು, ಕರ್ನಾಟಕದ ನೆಲ-ಜಲವನ್ನು ಸೊಗಸಾಗಿ ಚಿತ್ರೀಕರಿಸಲಾಗಿದೆ.

ಟ್ರೈಲರ್​ ಬಿಡುಗಡೆಯ ಬಳಿಕ ರಾಘವೇಂದ್ರ ರಾಜ್ ಕುಮಾರ್ ಮಾತನಾಡಿ, ಇಷ್ಟು ದಿನ ಅಪ್ಪು ನಿಮಗೋಸ್ಕರ ಸಿನಿಮಾ ಮಾಡಿದ್ದ. ಇದೀಗ ಅವನಿಗೋಸ್ಕರ ಸಿನಿಮಾ ಮಾಡಿದ್ದಾನೆ. ಇದೇ ತಿಂಗಳ ಅಕ್ಟೋಬರ್ 28ಕ್ಕೆ‌ ರಿಲೀಸ್ ಆಗಲಿದೆ. ದಯಮಾಡಿ ಎಲ್ಲಾರು ಸಿನಿಮಾ ನೋಡಿ ಎಂದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net