ಬಾತ್​ರೂಮ್​ ಕಿಟಕಿಯಲ್ಲಿ ವ್ಯಕ್ತಿಯ ನೆರಳು ಕಂಡು ಮಹಿಳೆ ಶಾಕ್​: ರಾಜಕೀಯ ನಾಯಕನ ಮುಖವಾಡ ಬಯಲು

CMP Leader
Published on

ಪಲಕ್ಕಾಡ್​: ನೆರೆಮನೆಯ ಬಾತ್​ರೂಮ್​ಗಳಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸುವ ಮೂಲಕ ಗೃಹಿಣಿಯರ ಅಶ್ಲೀಲ ವಿಡಿಯೋಗಳನ್ನು ಸೆರೆಹಿಡಿಯುತ್ತಿದ್ದ ಆರೋಪದ ಮೇಲೆ ಮಾಜಿ ಸಿಪಿಎಂ ನಾಯಕನನ್ನು ಕೇರಳ ಪೊಲೀಸರು ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ಆರೋಪಿಯನ್ನು ಶಹಜಹಾನ್​ ಎಂದು ಗುರುತಿಸಲಾಗಿದೆ. ಈತ ಕೊಡುಂಬಾ ನಿವಾಸಿ. ಸಿಪಿಎಂ ಪಕ್ಷದ ಮಾಜಿ ನಾಯಕನಾಗಿರುವ ಈತನನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿದೆ. ವಿಶೇಷ ತನಿಖಾ ತಂಡವನ್ನು ನಿಯೋಜಿಸಿದ ಕೂಡಲೇ ಆರೋಪಿ ಶಹಜಹಾನ್​ ತನ್ನ ರಾಜ್ಯವನ್ನೇ ತೊರೆದು ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಎಂದು ತಿಳಿದುಬಂದಿದೆ. ಜಾಮೀನು ರಹಿತ ಕಾಯ್ದೆಯಡಿ ಶಹಜಹಾನ್​ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಬಾತ್​ರೂಮ್​ ಕಿಟಕಿಯ ಬಳಿ ವ್ಯಕ್ತಿಯೊಬ್ಬನ ನೆರಳು ನೋಡಿ ಮಹಿಳೆ ಕಿರುಚಿಕೊಂಡಾಗ ಶಹಜಹಾನ್​ ಅಲ್ಲಿಂದ ಕಾಲ್ಕಿತ್ತಿದ್ದ. ಓಡುವಾಗ ಆತನ ಮೊಬೈಲ್​ ಮಾತ್ರ ಹತ್ತಿರದ ಮೈದಾನದಲ್ಲಿ ಬಿದ್ದಿತ್ತು. ರಹಸ್ಯ ಕ್ಯಾಮೆರಾವನ್ನು ಅಳವಡಿಸಿದ್ದೇ ಶಹಜಹಾನ್​ ಎಂದರಿಯದ ಮಹಿಳೆ ಸಹಾಯಕ್ಕಾಗಿ ಶಹಜಹಾನ್​ ನೆರವು ಕೋರಿದ್ದಳು.

ಇತ್ತ ಹತ್ತಿರದ ಮೈದಾನದಲ್ಲಿ ಆತನ ಮೊಬೈಲ್​ ರಿಂಗ್​ ಆಗುವುದನ್ನು ಕೇಳಿದಾಗ ಮಹಿಳೆಗೆ ಶಹಜಹಾನ್​ ಮೇಲೆಯೇ ಅನುಮಾನ ಶುರುವಾಯಿತು. ಸಿಕ್ಕ ಮೊಬೈಲ್ ನೋಡಿದಾಗ ಅದರಲ್ಲಿ ಕೆಲವೊಂದು ಅಶ್ಲೀಲ ವಿಡಿಯೋಗಳನ್ನು ನೋಡಿ ಆತನದ್ದೇ ಈ ಕೆಲಸ ಎಂಬುದು ಮಹಿಳೆಗೆ ದೃಢವಾದ ಕೂಡ ಮೊಬೈಲ್​ ಸಮೇತ ಠಾಣೆಗೆ ತೆರಳಿ ದೂರು ದಾಖಲಿಸಿದ್ದಳು.

ಜಾಮೀನು ರಹಿತ ಕಾಯ್ದೆಯಡಿ ಶಹಜಹಾನ್​ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಇತ್ತ ದೂರು ದಾಖಲಾಗುತ್ತಿದ್ದಂತೆ ಆತನ ಬಂಧನಕ್ಕೆ ವಿಶೇಷ ತನಿಖಾ ತಂಡದ ರಚನೆ ಮಾಡಲಾಯಿತು. ಈ ವಿಚಾರ ಗೊತ್ತಾಗುತ್ತಿದ್ದಂತೆ ಆರೋಪಿ​ ರಾಜ್ಯವನ್ನೇ ತೊರೆದು ತಮಿಳುನಾಡಿಗೆ ಪರಾರಿಯಾಗಿದ್ದ. ಇದೀಗ ಬಂಧಿಲಾಗಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net