ಬಿಲಿಯನೇರ್​ ಉದ್ಯಮಿ ಬಿಲ್​ ಗೇಟ್ಸ್​ ಕುರಿತು ಶಾಕಿಂಗ್​ ವಿಚಾರ ಬಿಚ್ಚಿಟ್ಟ ಮಾಜಿ ಉದ್ಯೋಗಿ!

Gates
Published on

ವಾಷಿಂಗ್ಟನ್​: ಇತ್ತೀಚೆಗಷ್ಟೇ ವಿಚ್ಛೇದನಾ ವಿಚಾರದಲ್ಲಿ ಭಾರೀ ಸುದ್ದಿಯಾದ ಬಿಲಿಯನೇರ್​ ಉದ್ಯಮಿ ಮತ್ತು ಮೈಕ್ರೋಸಾಫ್ಟ್​ ಸಹ-ಸಂಸ್ಥಾಪಕ ಬಿಲ್ ​ಗೇಟ್ಸ್​​ ಕುರಿತು ಮತ್ತೊಂದು ಆತಂಕಕಾರಿ ವರದಿಯೊಂದು ಹೊರಬಿದ್ದಿದೆ. ವರದಿಯ ಪ್ರಕಾರ ಬಿಲ್​ ಗೇಟ್ಸ್​ ಓರ್ವ ಆಫೀಸ್​ ಬುಲ್ಲಿ (ಕಚೇರಿಯಲ್ಲಿ ಪೀಡಿಸುವವ) ಆಗಿದ್ದು, ವೈವಿಧ್ಯತೆಯ ಕಾರ್ಯಕ್ರಮಗಳನ್ನು ವಿರೋಧಿಸುವ ಮೂಲಕ ಮೈಕ್ರೋಸಾಫ್ಟ್​ ನಾಶಪಡಿಸುವ ಪ್ರಯತ್ನಗಳಿಗೆ ಕೈಹಾಕಿದ್ದರು ಎಂದು ಆರೋಪಿಸಲಾಗಿದೆ.

ಬಿಲ್​ ಗೇಟ್ಸ್​ ಬಗ್ಗೆ ಮಾತನಾಡಿರುವ ಮೈಕ್ರೋಸಾಫ್ಟ್​ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ, 1988ರಲ್ಲಿ ಮೈಕ್ರೋಸಾಫ್ಟ್​ ರೀಟ್ರೀಟ್​ ಈವೆಂಟ್​ ವೇಳೆ ಬೆಳಗ್ಗೆ 5ರ ಸಮಯದಲ್ಲಿ ಮಹಿಳೆಯೊಬ್ಬಳ ಮೇಲೆ ಬಿಲ್​ಗೇಟ್ಸ್​ ಮಲಗಿದ್ದನ್ನು ನೋಡಿದ್ದಾಗಿ ಹೇಳಿಕೊಂಡಿದ್ದಾರೆ. ಅವರೊಬ್ಬ ಹೆಣ್ಣುಬಾಕ ಎಂದು ಆರೋಪಿಸಿದ್ದು, ಇಬ್ಬರು ಬೆಚ್ಚಗಿನ ಮತ್ತು ಆರಾಮದಾಯಕ ಸ್ಥಾನಕ್ಕೆ ತೆರಳಲು ಅವಣಿಸುತ್ತಿದ್ದರು. ಬಿಲ್​ಗೇಟ್ಸ್​ ಮೆಲಿಂದಾ ಗೇಟ್ಸ್​ ಜತೆ ಸಂಬಂಧ ಹೊಂದಿದ್ದಾಗಲೇ ಈ ಘಟನೆ ನಡೆದಿತ್ತು ಎಂದು ಹೇಳಿದ್ದಾರೆ.

ಮೈಕ್ರೋಸಾಫ್ಟ್ ಮಂಡಳಿಯ ಮಾಜಿ ಸದಸ್ಯೆ ಮಾರಿಯಾ ಕ್ಲಾವೆ ಅವರು ಸಹ ಮಾತನಾಡಿದ್ದು, 2010ರ ದಶಕದಲ್ಲಿ ಅಶ್ಲೀಲತೆ ತುಂಬಿದ ಮಂಡಳಿಯ ಸಭೆಗಳಲ್ಲಿ ವೈವಿಧ್ಯತೆಯ ಪ್ರಯತ್ನಗಳನ್ನು ಗೇಟ್ಸ್ ವಿರೋಧಿಸುತ್ತಿದ್ದರು ಎಂದು ಆರೋಪಿಸಿದ್ದಾರೆ.

ಕಂಪನಿಗೆ ಭವಿಷ್ಯದ ಕಾರ್ಯನಿರ್ವಾಹಕ ಪಾತ್ರಗಳಿಗಾಗಿ ಹೆಚ್ಚು ವೈವಿಧ್ಯಮಯ ಅಭ್ಯರ್ಥಿಗಳನ್ನು ಪರಿಗಣಿಸಲು ಮಂಡಳಿಯ ಸದಸ್ಯರು ಗೇಟ್ಸ್‌ಗೆ ಸೂಚಿಸಿದಾಗ, "ನೀವು ಕಂಪನಿಯನ್ನು ನಾಶಮಾಡಲು ಪ್ರಯತ್ನಿಸುತ್ತಿದ್ದೀರಾ?" ಎಂದು ಸಭೆಯಲ್ಲಿ ಜೋರು ಮಾಡುತ್ತಿದ್ದರು ಎಂದು ಕ್ಲಾವೆ ತಿಳಿಸಿದ್ದಾರೆ.

ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿ 27 ವರ್ಷಗಳ ವೈವಾಹಿಕ ಜೀವನಕ್ಕೆ ಪೂರ್ಣ ವಿರಾಮ ಹಾಕಿರುವ ಸಂದರ್ಭದಲ್ಲೇ ಗೇಟ್ಸ್ ನಡವಳಿಕೆಯ ಕುರಿತ ಈ ಆಘಾತಕಾರಿ ವರದಿ ಬಂದಿದೆ. ಮೇ 4 ರಂದು ಬಿಲ್ ಗೇಟ್ಸ್ ಮತ್ತು ಮೆಲಿಂಡಾ ದಂಪತಿ ಡಿವೋರ್ಸ್​ ಘೋಷಿಸುವ ಮೂಲಕ ಎಲ್ಲರನ್ನು ಚಕಿತಗೊಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net