

ನವದೆಹಲಿ: ಮೊಸಳೆ ಎಂಬ ಪದ ಕೇಳಿದರೆ ಸಾಕು ಎಲ್ಲರ ಕೈ-ಕಾಲು ನಡುಗುತ್ತದೆ. ಬಹುಶಃ ಆಸ್ಟ್ರೇಲಿಯನ್ ಝೂಕೀಪರ್ ದಿವಂಗತ ಸ್ಟೀವ್ ಇರ್ವಿನ್ ಮಾತ್ರ ಮೊಸಳೆ ಪದ ಕೇಳಿದರೆ ಎಲ್ಲಿಲ್ಲದ ಉತ್ಸಾಹ ಬರುತ್ತಿತ್ತು. ಮೊಸಳೆಯ ಹರಿತವಾದ ಹಲ್ಲು, ದೊಡ್ಡ ದವಡೆ ಮತ್ತು ತೀವ್ರ ನೋಟ ಸಾಕು ಯಾವುದೇ ವ್ಯಕ್ತಿ ಭಯ ಬೀಳಲು, ಅಂತಹುದರಲ್ಲಿ ಮೊಸಲೇ ಏನಾದರೂ ತುಂಬಾ ಹತ್ತಿರಕ್ಕೆ ಬಂದಲ್ಲಿ ಆ ವ್ಯಕ್ತಿ ಭಯದಲೇ ಹೆಪ್ಪುಗಟ್ಟಿಬಿಡುತ್ತಾನೆ
ಇನ್ನು ಮೊಸಳೆ ನೀರನಲ್ಲಿ ವೇಗವಾಗಿ ಈಜುವಷ್ಟು ನೆಲದ ಮೇಲೆ ಓಡುವುದಿಲ್ಲ. ತುಂಬಾ ಮಂದಗತಿಯ ಉಭಯವಾಸಿ ಎಂಬುದು ಎಲ್ಲರಿಗೂ ತಿಳಿದೇ ಇದೆ. ಆದರೆ, ಮೊಸಳೆಗಳು ವೇಗವಾಗಿ ಓಡಬಲ್ಲದು ಎಂಬುದನ್ನು ಈ ವಿಡಿಯೋ ನಿರೂಪಿಸಿದೆ. ಮೊಸಳೆಯ ಅಪರೂಪದ ವಿಡಿಯೋವನ್ನು ಭಾರತೀಯ ಅರಣ್ಯಾಧಿಕಾರಿ (ಐಎಫ್ಎಸ್) ಸುಶಾಂತ್ ನಂದ ಅವರು ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆ ವಿಡಿಯೋ ನೋಡುಗರ ಎದೆ ನಡುಗಿಸುವಂತಿದೆ.
ವಿಡಿಯೋದಲ್ಲಿ ಏನಿದೆ?
ವ್ಯಕ್ತಿಯೊಬ್ಬ ಮೊಸಳೆ ಇರುವ ಬೇಲಿಯ ಒಳಗಡೆ ಪ್ರವೇಶಿಸುತ್ತಾನೆ. ಇದರಿಂದ ಕೆಂಡಾಮಂಡಲವಾಗುವ ಮೊಸಳೆ ಆ ವ್ಯಕ್ತಿಯನ್ನು ಅಟ್ಟಿಸಿಕೊಂಡು ಬರುವುದು ವಿಡಿಯೋದಲ್ಲಿದೆ. ಗಮನಾರ್ಹವೆಂದರೆ, ಮೊಸಳೆಯು ಜಿಗಿಯುತ್ತಾ, ವೇಗವಾಗಿ ವ್ಯಕ್ತಿಯ ಕಡೆ ಬರುತ್ತಿರುವುದನ್ನು ನೋಡಿದರೆ, ಮೊಸಳೆ ಹೀಗೂ ಓಡುತ್ತಾ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡುವುದು ಖಂಡಿತ.
ಸುಶಾಂತ್ ನಂದ ಅವರು ಶೇರ್ ಮಾಡಿಕೊಂಡಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಈಗಾಗಲೇ 50 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ವಿಡಿಯೋ ನೋಡಿ ನಿಮಗೆ ಏನನಿಸಿತು ಎಂಬುದನ್ನು ಕಾಮೆಂಟ್ ಮಾಡಿ ನಮಗೆ ತಿಳಿಸಿ...(ಏಜೆನ್ಸೀಸ್)