More

    ಅಪ್ಪಿತಪ್ಪಿ ಗೂಗಲ್​ನಲ್ಲಿ ಇವುಗಳನ್ನು ಹುಡುಕಬೇಡಿ: ಒಂದು ವೇಳೆ ಹುಡುಕಿದ್ರೆ ಬೆಲೆ ತೆರಬೇಕಾಗುತ್ತೆ ಹುಷಾರ್..!​

    ಹೈದರಾಬಾದ್​: ಇಂದು ಜನರು ಯಾವುದೇ ಪ್ರಶ್ನೆಗೆ ಉತ್ತರ ಕಂಡಕೊಳ್ಳಲು ಮೊದಲು ಮಾಡುವ ಕೆಲಸವೆಂದರೆ ಅದು ಗೂಗಲ್​​ ಸರ್ಚ್​. ಅಂಗೈನಲ್ಲಿ ಜಗತ್ತು ನೋಡುವ ಕಾಲ ಇದಾಗಿದ್ದು, ಜನರು ಪ್ರತಿಯೊಂದಕ್ಕೂ ಅಂತರ್ಜಾಲಕ್ಕೆ ಅಂಟಿಕೊಂಡಿದ್ದಾರೆ. ಆದರೆ, ಈ ಅಂತರ್ಜಾಲ ಎಷ್ಟು ಉಪಕಾರಿಯೋ? ಸ್ವಲ್ಪ ಯಾಮಾರಿದರೆ ಅಷ್ಟೇ ಅಪಾಯಕಾರಿ ಎಂಬುದನ್ನು ನಾವಿಲ್ಲಿ ಕಡೆಗಣಿಸುವಂತಿಲ್ಲ.

    ಯಾವುದೇ ಪ್ರಶ್ನೆಗೆ ಗೂಗಲ್​ ಮೂಲಕ ನಾವು ಉತ್ತರ ಕಂಡುಕೊಳ್ಳಬಹುದು. ಹಾಗಾಂತ ಗೂಗಲ್​ ಹೇಳುವುದೇ ಸತ್ಯ ಎಂದು ನಂಬಬಾರದು. ಇಂದು ಎಲ್ಲಡೆ ವಂಚಕರ ಜಾಲ ಸೋಗು ಹಾಕಿಕೊಂಡು ಕುಳಿತಿದೆ. ಜಾಲತಾಣದಲ್ಲಂತೂ ವಂಚಕರ ಜಾಲಕ್ಕೆ ಸುಲಭವಾಗಿ ತುತ್ತಾಗುತ್ತಿದ್ದಾರೆ. ಹೀಗಾಗಿ ಗೂಗಲ್​ ಸರ್ಚ್​ ಮಾಡುವಾಗ ಅದು ಸರಿಯೋ? ತಪ್ಪೋ? ಎಂದು ಎರೆಡೆರಡು ಬಾರಿ ಯೋಚಿಸುವುದು ಒಳಿತು.

    ಇನ್ನು ಗೂಗಲ್​ನಲ್ಲಿ ಯಾವುದೇ ಕಾರಣಕ್ಕೂ ಕಸ್ಟಮರ್​ ಕೇರ್​ ನಂಬರ್​ ಹುಡುಕಬೇಡಿ. ಏಕೆಂದರೆ ನಂಬರ್​ ಹುಡುಕಲು ಮುಂದಾದರೆ ಸೈಬರ್​ ವಂಚಕರ ಬಲೆಗೆ ಬೀಳುವ ಸಾಧ್ಯತೆ ಹೆಚ್ಚಿದೆ. ಇದೇ ರೀತಿಯ 1395 ಪ್ರಕರಣಗಳು ಹೈದರಾಬಾದ್​ನಲ್ಲಿ ಘಟಿಸಿವೆ. ಇದರಲ್ಲಿ 189 ಪ್ರಕರಣಗಳಲ್ಲಿ ಸಂತ್ರಸ್ತರು 1.01 ಕೋಟಿ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ. ಬ್ಯಾಂಕ್​, ಟೆಲಿಕಾಂ ಕಂಪನಿಗಳು, ಫುಡ್​ ಡೆಲಿವರಿ ಆ್ಯಪ್ಸ್​, ಟ್ರ್ಯಾವೆಲ್ಸ್​, ಕೊರಿಯರ್​, ಗೂಗಲರ್​ ಪೇ, ಫೋನ್​ ಪೇ, ಪೇಟಿಎಂ ಸೇರಿದಂತೆ ಮುಂತಾದ ಕಂಪನಿಗಳು ಕಸ್ಟಮರ್​ ಕೇರ್​ ನಂಬರ್​ ಸರ್ಚ್​ ಮಾಡಲು ಹೋಗಿ ಅನೇಕರು ವಂಚಕರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡಿದ್ದಾರೆ.

    ಸೈಬರ್​ ಕಳ್ಳರು ಗೂಗಲ್​ ಆ್ಯಡ್ಸ್​ ಮೂಲಕವೂ ನಕಲಿ ಮಾಹಿತಿಯನ್ನು ಹಾಕಿ ವಂಚನೆ ಮಾಡಲು ಮುಂದಾಗಿದ್ದಾರೆ. ಯಾವುದೇ ಕಂಪನಿಯ ಕಸ್ಟಮರ್​ ಕೇರ್​ ನಂಬರ್​ ಸರ್ಚ್​ ಮಾಡಿದಾಗ ತಮ್ಮ ನಂಬರ್​ ಮೊದಲು ಬರುವಂತೆ ಸೈಬರ್​ ವಂಚಕರು ಗೂಗಲ್​ ಸರ್ಚ್​ ಇಂಜಿನ್​ನಲ್ಲಿ ಸೆಟ್​ ಮಾಡಿದ್ದಾರೆ. ಹೀಗಾಗಿ ಆನ್​ಲೈನ್​ ಮೂಲಕ ಕಸ್ಟಮರ್​ ಕೇರ್​ ನಂಬರ್​ ಪಡೆಯಲು ಮುಂದಾಗುವ ಗ್ರಾಹಕರು ಅದಕ್ಕೂ ಮುನ್ನ ಸ್ವಲ್ಪ ಎಚ್ಚರ ವಹಿಸುವುದು ಸೂಕ್ತ. ಇಲ್ಲವಾದಲ್ಲಿ ವಂಚಕರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ.

    ಒಂದು ವೇಳೆ ಕಸ್ಟಮರ್​ ಕೇರ್​ನವರು ನಿಮ್ಮ ಬ್ಯಾಂಕ್​ ಮಾಹಿತಿ, ಎಟಿಎಂ ಪಿನ್​ ಸೇರಿದಂತೆ ಗೌಪ್ಯ ಮಾಹಿತಿ ಕೇಳಿದ್ದಲ್ಲಿ ಈ ವಿಚಾರವನ್ನು ಸ್ಥಳೀಯ ಪೊಲೀಸ್​ ಠಾಣೆಯ ಗಮನಕ್ಕೆ ತರಬೇಕು. ಏಕೆಂದರೆ ಯಾವುದೇ ಬ್ಯಾಂಕ್​ಗಳು ಅಥವಾ ಕಂಪನಿಗಳು ನಿಮ್ಮ ಬ್ಯಾಂಕ್​ ಮಾಹಿತಿಯನ್ನಾಗಲಿ ಅಥವಾ ಎಟಿಎಂ ನಂಬರ್​ ಆಗಲಿ ಕೇಳುವುದಿಲ್ಲ. ವಂಚನೆಯಿಂದ ಪಾರಾಗಲು ಎಚ್ಚರದಿಂದ ಇರುವುದೇ ಸೂಕ್ತ ಪರಿಹಾರವಾಗಿದೆ. (ಏಜೆನ್ಸೀಸ್​)

    ಪ್ರಿಯಕರನ ಕೊಲ್ಲಲು ಮತ್ತೊಬ್ಬನೊಂದಿಗೆ ವಿವಾಹಿತೆಯ ಕಾಮದಾಟ: ಬೆಚ್ಚಿಬೀಳಿಸುತ್ತೆ ಇವಳ ಅಸಲಿ ಮುಖ!

    ತುಮಕೂರು ಹೆದ್ದಾರಿಯಲ್ಲಿ ರಾಶಿ ರಾಶಿ ಕಾಂಡೋಮ್​ ಪತ್ತೆ ಕೇಸ್​​: ಪೊಲೀಸ್​ ತನಿಖೆಯಲ್ಲಿ ಅಸಲಿಯತ್ತು ಬಯಲು..!

    ಬಗೆದಷ್ಟೂ‌ ಬಯಲಾಗ್ತಿದೆ ನಂದಿ ಲಾಡ್ಜ್ ರಹಸ್ಯ! ಸುರಂಗದಲ್ಲೇ ವೇಶ್ಯಾವಾಟಿಕೆ, ಗಂಟೆ ಲೆಕ್ಕದಲ್ಲಿ ಯುವತಿಯರ ಸಪ್ಲೈ

    ನನಗೆ ಮೂವರು ಮಂತ್ರಿಗಳ ಮಧ್ಯೆ ಇಕ್ಕಳದಲ್ಲಿ ಸಿಕ್ಕಿಕೊಂಡಂತಾಗಿದೆ: ವಸತಿ ಸಚಿವ ಸೋಮಣ್ಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts