More

    ಭಾರತದಲ್ಲಿ ಬ್ಯಾನ್​ ಹೊರತಾಗಿಯೂ ವಿಶ್ವದ ಟೆಕ್​ ದೈತ್ಯ ಗೂಗಲ್​ ಹಿಂದಿಕ್ಕಿ ನಂ. 1 ಸ್ಥಾನಕ್ಕೇರಿದ ಟಿಕ್​ಟಾಕ್​!

    ನವದೆಹಲಿ: ಭಾರತದಲ್ಲಿ ಬ್ಯಾನ್​ ಆಗಿದ್ದರೂ ಕೂಡ ವಿಶ್ವ ಟೆಕ್​ ದೈತ್ಯ ಗೂಗಲ್ ಅನ್ನು ಹಿಂದಿಕ್ಕಿರುವ ಸೋಶಿಯಲ್​ ಮೀಡಿಯಾ ಆ್ಯಪ್​ “ಟಿಕ್​ಟಾಕ್​” ಈ ವರ್ಷದ ಅತ್ಯಂತ ಜನಪ್ರಿಯ ವೆಬ್‌ಸೈಟ್ ಎಂಬ ದಾಖಲೆಯನ್ನು ಬರೆದಿದೆ.

    ಐಟಿ ಸೆಕ್ಯುರಿಟಿ ಕಂಪನಿ ಕ್ಲೌಡ್​ಫ್ಲೇರ್​ ಈ ಕುರಿತು ವರದಿಯನ್ನು ನೀಡಿದೆ. ಅಮೆರಿಕ ಮೂಲದ ಸರ್ಚ್​ ಇಂಜಿನ್​ (ಗೂಗಲ್​)ಗಿಂತ ವೈರಲ್​ ವಿಡಿಯೋ ಆ್ಯಪ್​ ಹೆಚ್ಚು ಹಿಟ್ಸ್​ಗಳನ್ನು ಪಡೆದುಕೊಂಡಿದೆ.

    ಫೆಬ್ರವರಿಯಲ್ಲೇ ಗೂಗಲ್​ ಹಿಂದಿಕ್ಕಿರುವ ಟಿಕ್​ಟಾಕ್​, ಮಾರ್ಚ್​ನಿಂದ ಆಗಸ್ಟ್​ವರೆಗೂ ನಂಬರ್​ 1 ಸ್ಥಾನವನ್ನು ಅಲಂಕರಿಸಿತ್ತು. 2020ರಲ್ಲಿ ಗೂಗಲ್​ ನಂಬರ್​ 1 ಸ್ಥಾನದಲ್ಲಿತ್ತು. ಟಿಕ್​ಟಾಕ್​, ಅಮೇಜಾನ್​, ಆ್ಯಪಲ್​, ಫೇಸ್​ಬುಕ್​, ಮೈಕ್ರೋಸಾಫ್ಟ್​ ಮತ್ತು ನೆಟ್​ಫ್ಲಿಕ್ಸ್​ ಟಾಪ್​ 10 ಪಟ್ಟಿಯಲ್ಲಿದ್ದವು.

    ಮಹಾಮಾರಿ ಕರೊನಾ ವೈರಸ್​ ನಿಯಂತ್ರಿಸಲು ಹಲವು ರಾಜ್ಯಗಳಲ್ಲಿ ಹೇರಿದ್ದ ಲಾಕ್​ಡೌನ್​ನಂತಹ ನಿಷೇಧದ ಸಮಯದಲ್ಲಿ ಟಿಕ್​ಟಾಕ್​ ಖ್ಯಾತಿ ಹೆಚ್ಚಿಸಿಕೊಂಡಿದೆ ಎಂದು ಹೇಳಲಾಗಿದೆ. ಲಾಕ್​ಡೌನ್​ನಂತಹ ಬಿಡುವಿನ ಸಮಯದಲ್ಲಿ ಅನೇಕರು ತಮ್ಮ ಸಮಯ ಕಳೆಯಲು ಹೆಚ್ಚಾಗಿ ಟಿಕ್​ಟಾಕ್​ ಮೊರೆ ಹೋಗಿರುವುದು ವರದಿಯಿಂದ ತಿಳಿದುಬಂದಿದೆ.

    ಇನ್ನು ಟಿಕ್​ಟಾಕ್ ಚೀನಾ ಮೂಲದ ಬೈಟ್​ಡಾನ್ಸ್​ ಒಡೆತನದಲ್ಲಿದೆ. ವಿಶ್ವದಾದ್ಯಂತ 1 ಬಿಲಿಯನ್​ಗೂ ಅಧಿಕ ಬಳಕೆದಾರರಿದ್ದು, ಅದರ ಸಂಖ್ಯೆ ಹೆಚ್ಚಾಗುತ್ತಲೇ ಸಾಗಿದೆ. 2020ರ ಜೂನ್​ನಲ್ಲಿ ಭಾರತದ ಸರ್ಕಾರ ಟಿಕ್​ಟಾಕ್​ ಅನ್ನು ಬ್ಯಾನ್​ ಮಾಡಿದೆ. ಚೀನಾ ಮತ್ತು ಭಾರತದ ನಡುವಿನ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ಚೀನಾದ ಸೇರಿದ ಅನೇಕ ಆ್ಯಪ್​ಗಳನ್ನು ಸರ್ಕಾರ ಬ್ಯಾನ್​ ಮಾಡಿದೆ. ಆದರೂ, ಟಿಕ್​ಟಾಕ್​ ತನ್ನ ಖ್ಯಾತಿಯನ್ನು ಹೆಚ್ಚಿಸಿಕೊಂಡಿರುವುದು ನಿಜಕ್ಕೂ ಅಚ್ಚರಿಯ ಸಂಗತಿಯಾಗಿದೆ. (ಏಜೆನ್ಸೀಸ್​)

    ಹೆತ್ತವರು ಆಸ್ಪತ್ರೆಯಲ್ಲಿ, 3 ಮಕ್ಕಳು ನೆರೆಹೊರೆಯವರ ಆಸರೆಯಲ್ಲಿ… ಮನಕಲಕುತ್ತೆ ಇವರ ಕಣ್ಣೀರ ಕಥೆ

    ನಾಸಾದಿಂದ ಜೇಮ್ಸ್ ವೆಬ್ ಯಶಸ್ವಿ ಉಡಾವಣೆ; ವಿಶ್ವದ ಶಕ್ತಿಶಾಲಿ ಬಾಹ್ಯಾಕಾಶ ಟೆಲಿಸ್ಕೋಪ್ 75 ಸಾವಿರ ಕೋಟಿ ರೂ. ವೆಚ್ಚ

    ಸಿಎಂಗೆ ಶುರುವಾಯ್ತು ‘ಉಸ್ತುವಾರಿ’ ವರಿ; ಸ್ವಂತ ಜಿಲ್ಲೆಗೆ ಹೆಚ್ಚು ಬೇಡಿಕೆ, ಬೆಂಗಳೂರು ಜವಾಬ್ದಾರಿಗೆ ಡಿಮಾಂಡ್

     ಜನವರಿ ಮೊದಲ ವಾರ ಯುಎಇಗೆ ಪಿಎಂ ಭೇಟಿ; ಸರಳವಾಗಲಿದೆ ದುಬೈ ಉದ್ಯೋಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts