More

     ಜನವರಿ ಮೊದಲ ವಾರ ಯುಎಇಗೆ ಪಿಎಂ ಭೇಟಿ; ಸರಳವಾಗಲಿದೆ ದುಬೈ ಉದ್ಯೋಗ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜನವರಿ ಮೊದಲ ವಾರ ಯುಎಇಗೆ ಭೇಟಿ ನೀಡಲಿದ್ದು, ಈ ವೇಳೆ ಮಹತ್ವದ ಒಪ್ಪಂದ ಏರ್ಪಡಲಿದೆ. ಈ ಕುರಿತು ಎರಡೂ ದೇಶಗಳ ವಿದೇಶಾಂಗ ಸಚಿವಾಲಯಗಳ ನಡುವೆ ಮಾತುಕತೆ ನಡೆದಿದ್ದು, ಒಪ್ಪಂದ ಬಹುತೇಕ ಅಂತಿಮಗೊಂಡಿದೆ. ಪ್ರಧಾನಿ ಭೇಟಿ ವೇಳೆ ಇದಕ್ಕೆ ಅಧಿಕೃತ ಮುದ್ರೆ ಬೀಳಲಿದೆ.

    ಭಾರತದಿಂದ ಉದ್ಯೋಗ ಕ್ಕಾಗಿ ಯುಎಇಗೆ ತೆರಳುವ ವ್ಯಕ್ತಿಗಳಿಗೆ ಅನುಕೂಲವಾಗುವ ಹಲವು ಅಂಶಗಳು ಒಪ್ಪಂದದಲ್ಲಿ ಇವೆ. ಭಾರತದ ವೃತ್ತಿಪರರು ಹಾಗೂ ಕಾರ್ವಿುಕರು ಯುಎಇಗೆ ತೆರಳಲು, ಅಲ್ಲಿ ಕೆಲಸ ಮಾಡಲು ಈಗಿರುವ ನಿಯಮಗಳನ್ನು ಸರಳಗೊಳಿಸಲು ನಿರ್ಧಾರ ಮಾಡಲಾಗಿದೆ. ಈಗಾಗಲೇ ದೊಡ್ಡ ಸಂಖ್ಯೆಯಲ್ಲಿ ಭಾರತೀಯರು ಯುಎಇನಲ್ಲಿ ಕೆಲಸ ಮಾಡುತ್ತಿದ್ದಾರೆ. ಒಪ್ಪಂದದಿಂದ ಅವರಿಗೂ ಅನುಕೂಲ ಆಗಲಿದೆ. ಉಭಯ ದೇಶಗಳ ನಡುವಿನ ಪ್ರಯಾಣ ಇನ್ನಷ್ಟು ಸುಗಮಗೊಳ್ಳಲಿದೆ. ಗಲ್ಪನಲ್ಲಿರುವ ಭಾರತೀಯ ಅಥವಾ ವಿದೇಶಿ ಕಂಪನಿಗಳು ಭಾರತದ ವೃತ್ತಿಪರರು, ಕಾರ್ವಿುಕರನ್ನು ನಿಯೋಜನೆ ಮಾಡಿಕೊಳ್ಳಲು ಅನುಕೂಲವಾಗಲಿದೆ. ಈಗಿರುವ ಅರ್ಹತಾ ಪರೀಕ್ಷೆಯನ್ನೂ ಕೈಬಿಡುವ ಸಾಧ್ಯತೆ ಇದೆ.

    ಹೂಡಿಕೆ ಸರಾಗ: ಭಾರತದ ಹಲವಾರು ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಲು ಯುಎಇ ಉತ್ಸುಕವಾಗಿದೆ. ಹೊಸ ಒಪ್ಪಂದದಿಂದ ಮೂಲಸೌಕರ್ಯ ಸಹಿತ ಹಲವೆಡೆ ಹೂಡಿಕೆ ಸಾಧ್ಯವಾಗಲಿದೆ. ಈಗಿರುವ ಹಲವಾರು ನಿಯಮಗಳನ್ನೂ ಸರಳಗೊಳಿಸುವ ಸಾಧ್ಯತೆ ಇದೆ. ಇದರ ಜತೆಗೆ ಯುಎಇನಿಂದ ಆಮದಾಗುವ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಇಳಿಕೆ ಮಾಡಲು ಭಾರತ ಒಪ್ಪಿದೆ.

    ವ್ಯಾಪಾರ ಒಪ್ಪಂದಕ್ಕೆ ಗಲ್ಪ್ ಪ್ರಯತ್ನ: ಭಾರತದ ಜತೆಗೆ ಉಚಿತ ವ್ಯಾಪಾರ ಒಪ್ಪಂದಕ್ಕೆ ಗಲ್ಪ ಸಹಕಾರ ಒಕ್ಕೂಟ ಹಲವಾರು ವರ್ಷಗಳಿಂದ ಯತ್ನ ನಡೆಸುತ್ತಿದೆ. ಆದರೆ ಸ್ಥಳೀಯ ಮಾರುಕಟ್ಟೆ ಹಾಗೂ ದೇಶದ ಆರ್ಥಿಕತೆ ಹಿತದೃಷ್ಟಿಯಿಂದ ಭಾರತ ಈ ಒಪ್ಪಂದವನ್ನು ಮುಂದೂಡುತ್ತ ಬಂದಿದೆ. ಈಗ ಯುಎಇ ಜತೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತಿರುವುದು ಗಲ್ಪ ರಾಷ್ಟ್ರಗಳಿಗೂ ಅನುಕೂಲವಾಗಲಿದೆ.

    ಭಾರತೀಯರ ಸಂಖ್ಯೆ ಹೆಚ್ಚು: ಯುಎಇ ಒಟ್ಟು ಜನಸಂಖ್ಯೆಯಲ್ಲಿ ಶೇ. 38 ಭಾರತೀಯ ಮೂಲದವರು ಇದ್ದಾರೆ ಎನ್ನಲಾಗಿದೆ. ಸುಮಾರು 34 ಲಕ್ಷ ಭಾರತೀಯರು ಪ್ರಸ್ತುತ ಅಲ್ಲಿ ವಾಸವಾಗಿದ್ದಾರೆ. ಇದರಲ್ಲಿ 10 ಲಕ್ಷ ಜನರು ಕೇರಳಿಗರಾಗಿದ್ದರೆ, 4.5 ಲಕ್ಷ ಜನರು ತಮಿಳುನಾಡಿನವರು. ಯುಎಇ ಕಾರ್ವಿುಕರಲ್ಲಿ ಶೇ. 99 ವಿದೇಶಿಗರಾಗಿದ್ದಾರೆ. ಇದರಲ್ಲಿ ಭಾರರತೀಯರ ಸಂಖ್ಯೆಯೇ ಅತ್ಯಧಿಕವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts