More

    ಹೆತ್ತವರು ಆಸ್ಪತ್ರೆಯಲ್ಲಿ, 3 ಮಕ್ಕಳು ನೆರೆಹೊರೆಯವರ ಆಸರೆಯಲ್ಲಿ… ಮನಕಲಕುತ್ತೆ ಇವರ ಕಣ್ಣೀರ ಕಥೆ

    | ಕೊರ್ಲುಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ
    ಇದೊಂದು ಕಣ್ಣೀರ ಕಥೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ತಾಡಪಾಲು ಹೊದ್ದ ಮನೆ ದುರಸ್ತಿಗೂ ಹಣವಿಲ್ಲ. ಮಣಿಪಾಲ್​ ಆಸ್ಪತ್ರೆ ಬೆಡ್​ ಮೇಲೆ ಮಲಗಿರುವ ಅಪ್ಪ ಶಸ್ತ್ರಚಿಕಿತ್ಸೆಯ ಚಿಂತೆಯಲ್ಲಿದ್ದಾನೆ. ಅಲ್ಲೇ ಬೀಡುಬಿಟ್ಟ ಪತ್ನಿ, ಚಿಕಿತ್ಸಾ ವೆಚ್ಚ ಜೋಡಿಸಲು ಪರದಾಡುತ್ತಿದ್ದಾಳೆ. ಇತ್ತ ಹೆತ್ತವರ ಆಸರೆ ಕಾಣದ ಮೂವರು ಕಂದಮ್ಮಗಳ ಪಾಲಿಗೆ ನೆರೆಹೊರೆಯವರು ಹಾಗೂ ಗ್ರಾಮದ ಕೆಲ ಹೃದಯವಂತರು ಆಸರೆ ಆಗಿದ್ದಾರೆ!

    ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ಬೊಮ್ಮಸಮುದ್ರದ ಕೆ.ಬಿ.ಜಗದೀಶ್​ ಕುಟುಂಬದ ಸ್ಥಿತಿ ಇದು. ಕೃಷಿ ಕೂಲಿ ಮಾಡಿಕೊಂಡಿದ್ದ ಜಗದೀಶ್​ಗೆ ಕರುಳಿನಲ್ಲಿ ಕಲ್ಲು ಕಾಣಿಸಿಕೊಂಡ ಕಾರಣ ಆಸ್ಪತ್ರೆಗಳಿಗೆ ಅಲೆದಾಡಿ ಈಗಾಗಲೇ 3 ಲಕ್ಷ ರೂ. ಸಾಲ ಮಾಡಿಕೊಂಡಿದ್ದಾರೆ. ಗ್ರಾಮಸ್ಥರ ಬಳಿ ಅಷ್ಟೋ ಇಷ್ಟೋ ಸಾಲ ಪಡೆದು ಮಂಗಳೂರಿನ ಮಣಿಪಾಲ್​ ಆಸ್ಪತ್ರೆಗೆ ದಾಖಲಾಗಿದ್ದು ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವ ಅನಿವಾರ್ಯತೆಗೆ ಒಳಗಾಗಿದ್ದಾರೆ. ಇದಕ್ಕೆ ವೆಚ್ಚ ಹೊಂದಿಸಬೇಕೆಂಬುದೇ ಕುಟುಂಬಕ್ಕೆ ದಿಗಿಲು ಬಡಿದಂತಾಗಿದೆ.

    ಇತ್ತೀಚೆಗೆ ಮಳೆಯಿಂದ ಕುಸಿದು ಬಿದ್ದ 30 ವರ್ಷದ ಹಳೆಯ ಮನೆಗೆ ತಾಡಪಾಲು ಹೊದಿಸಿದ್ದಾರೆ. ಕುಟುಂಬಕ್ಕೆ ಆಸರೆಯಾಗಿದ್ದ ಬಿಪಿಎಲ್​ ಕಾರ್ಡ್​ ಕಳೆದ ತಿಂಗಳು ರದ್ದಾಗಿದೆ. ಕಾರ್ಡ್​ ಉಳಿಸಿ ಎಂದು ಪಂಚಾಯಿತಿಗೆ ಮೊರೆ ಇಟ್ಟಿದ್ದಾರೆ.

    ಆಸ್ಪತ್ರೆಯ ಖರ್ಚಿಗೆ ಕಾಸು ಹೊಂದಿಸಲು ಜಗದೀಶ್​ ಪತ್ನಿ ಲತಾ ಪರದಾಡುತ್ತಿದ್ದಾರೆ. ಗ್ರಾಮಸ್ಥರಿಗೆ ನಿತ್ಯ ಫೋನ್​ ಮಾಡಿ ಸಹಕಾರ ಕೇಳುತ್ತಿದ್ದಾರೆ. ಮಕ್ಕಳಾದ ಶಿಲ್ಪಾಶ್ರೀ(6), ಪ್ರಿಯಾಂಕ(4), ಧನುಷ್ಕ(1) ಅವರ ನೆರವಿಗೆ ಧಾವಿಸಿರುವ ಗ್ರಾಪಂ ಮಾಜಿ ಸದಸ್ಯ ವೆಂಕಟೇಶಪ್ಪ ಎರಡು ಚೀಲ ಕಡ್ಲೆಕಾಯಿ ಮಾರಿದ ಹಣ ನೀಡಿ ಊಟೋಪಚಾರಕ್ಕೆ ವ್ಯವಸ್ಥೆ ಮಾಡಿ ಎಂದು ಮಾನವೀಯತೆ ಮೆರೆದಿದ್ದಾರೆ.

    ದಾನಿಗಳು, ಸಂಘ- ಸಂಸ್ಥೆಗಳು ನೆರವಿಗೆ ಬರುವಂತೆ ಮಕ್ಕಳನ್ನು ನೋಡಿಕೊಳ್ಳುತ್ತಿರುವ ನೆರೆ ಮನೆಯವರು ಮನವಿ ಮಾಡಿದ್ದಾರೆ. ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್​ನಲ್ಲಿನ ಕೆ.ಬಿ.ಜಗದೀಶ್​ ಅವರ ಖಾತೆ ಸಂಖ್ಯೆ 10722101056149, ಐಎಫ್​ಎಸ್​ಸಿ ಪಿಕೆಜಿಬಿ 0010722 ಇಲ್ಲಿಗೆ ದಾನಿಗಳು ನೆರವು ನೀಡಬಹುದು. ಮಾಹಿತಿಗಾಗಿ ಮೊ. ಸಂ.8861066024 ಸಂಪರ್ಕಿಸಬಹುದು.

    ಹೊಲದಲ್ಲಿ ಮಗುವನ್ನ ಎಸೆದು ಹೋದ ಕಟುಕರು: ರಾತ್ರಿಯಿಡೀ ಕಾವಲು ಕಾದು ಮಗುವಿನ ಪ್ರಾಣ ಉಳಿಸಿದ ಬೀದಿನಾಯಿ!

    ಊಟಕ್ಕೆಂದು ಹೋದವರು ವಾಪಸ್​ ಬಂದದ್ದು ಹೆಣವಾಗಿ… ಅಯ್ಯೋ ವಿಧಿಯೇ ನೀನೇಷ್ಟು ಕ್ರೂರಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts