More

    ಸಿಎಂಗೆ ಶುರುವಾಯ್ತು ‘ಉಸ್ತುವಾರಿ’ ವರಿ; ಸ್ವಂತ ಜಿಲ್ಲೆಗೆ ಹೆಚ್ಚು ಬೇಡಿಕೆ, ಬೆಂಗಳೂರು ಜವಾಬ್ದಾರಿಗೆ ಡಿಮಾಂಡ್

    |ಶಿವಾನಂದ ತಗಡೂರು ಬೆಂಗಳೂರು

    ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಐದು ತಿಂಗಳು ತುಂಬುತ್ತಿದ್ದರೂ, ಇನ್ನೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾತ್ರ ಆಗಿಲ್ಲ. ಉಸ್ತುವಾರಿ ಸಚಿವರಿಲ್ಲದೆ, ಜಿಲ್ಲೆಗಳಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯಬೇಕಿದ್ದ ಕೆಡಿಪಿ ಸಭೆಗಳನ್ನು ನಡೆಸಲು ಸಾಧ್ಯವಾಗಿಲ್ಲ.

    ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿದ್ದ ಉಸ್ತುವಾರಿಗಳನ್ನೇ ಈಗಿನ ಸರ್ಕಾರದಲ್ಲಿಯೂ ಮುಂದುವರಿ ಸಿದ್ದರೂ, ಅಧಿಕೃತ ಆದೇಶ ಮಾತ್ರ ಹೊರಬಿದ್ದಿಲ್ಲ. ಕೋವಿಡ್ ನಿಭಾಯಿಸಲು ನೇಮಿಸಿದ್ದ ಉಸ್ತುವಾರಿ ಸಚಿವರಿಗೇ ಅತಿವೃಷ್ಟಿ ನಿರ್ವಹಣೆ ಜವಬ್ದಾರಿಯನ್ನೂ ನೀಡಲಾಗಿದೆ. ಕನ್ನಡ ರಾಜ್ಯೋತ್ಸವದಂದು ಧ್ವಜಾರೋಹಣ ಮಾಡಲು ಇವರಿಗೇ ಹೊಣೆ ನೀಡಲಾಗಿತ್ತು.

    ಸಮಸ್ಯೆ ಏನು?: ಜಿಲ್ಲಾ ಉಸ್ತುವಾರಿ ಹಂಚಿಕೆ ಜೇನುಗೂಡಿಗೆ ಕೈ ಹಾಕಿದಂತೆ ಎನ್ನುವ ಅನುಭವವಿರುವ ಬಸವರಾಜ ಬೊಮ್ಮಾಯಿ, ಅಳೆದು ತೂಗಿ ಪಟ್ಟಿ ಬಿಡುಗಡೆಗೆ ಮುಂದಾಗಿದ್ದಾರಾದರೂ ಸಂದರ್ಭ ಸರಿಯಾಗಿ ಕೂಡಿ ಬರುತ್ತಿಲ್ಲ.

    ಬೆಂಗಳೂರಿಗೆ ಡಿಮಾಂಡ್: ಬೆಂಗಳೂರು ಉಸ್ತುವಾರಿ ಮೇಲೆ ಹಲವರು ಕಣ್ಣಿಟ್ಟಿದ್ದಾರೆ. ಡಾ. ಸಿ.ಎನ್. ಅಶ್ವತ್ಥನಾರಾಯಣ, ವಿ.ಸೋಮಣ್ಣ, ಆರ್.ಅಶೋಕ್, ಎಸ್.ಟಿ.ಸೋಮಶೇಖರ್, ಗೋಪಾಲಯ್ಯ ರಾಜಧಾನಿ ಉಸ್ತುವಾರಿಯನ್ನೇ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಸದ್ಯ ಆರ್.ಅಶೋಕ್ ಉಸ್ತುವಾರಿ ನಿಭಾಯಿಸುತ್ತಿದ್ದರೂ ಅದು ಅಧಿಕೃತಗೊಂಡಿಲ್ಲ.

    ಬೆಳಗಾವಿಗೂ ಬೇಡಿಕೆ: ಬೆಳಗಾವಿ ಉಸ್ತುವಾರಿ ನೀಡಬೇಕು ಎಂದು ಉಮೇಶ್ ಕತ್ತಿ ಒತ್ತಡ ಹಾಕುತ್ತಲೇ ಬಂದಿದ್ದಾರೆ. ಸದ್ಯ ಗೋವಿಂದ ಕಾರಜೋಳ ಜವಾಬ್ದಾರಿ ನಿಭಾಯಿಸುತ್ತದ್ದಾರೆ.

    ಅಧಿಕಾರಿಗಳ ನೇಮಕ: ಪ್ರತಿ ಜಿಲ್ಲೆಗೆ ಉಸ್ತುವಾರಿ ಸಚಿವರನ್ನು ನೇಮಕ ಮಾಡುವ ಮಾದರಿಯಲ್ಲೇ ಉಸ್ತುವಾರಿ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ. ಆದರೆ, ಬೊಮ್ಮಾಯಿ ಸರ್ಕಾರದಲ್ಲಿ ಉಸ್ತುವಾರಿ ಅಧಿಕಾರಿಗಳೂ ನಾಲ್ಕು ತಿಂಗಳ ಬಳಿಕ ನೇಮಕಗೊಂಡಿದ್ದಾರೆ.

    ಪೂರ್ಣಪ್ರಮಾಣದಲ್ಲಿ ಉಸ್ತುವಾರಿ ಸಚಿವರನ್ನು ನೇಮಕ ಮಾಡದಿದ್ದರೆ, ಕೆಡಿಪಿ ಸಭೆ ಸೇರಿ ಜಿಲ್ಲಾಡಳಿತದ ವಿವಿಧ ಸಭೆಗಳನ್ನು ನಡೆಸಲು ಇರಿಸುಮುರಿಸು ಅನುಭವಿಸಬೇಕಾಗುತ್ತದೆ. ಈ ಬಗ್ಗೆ ಖುದ್ದು ನಾವೇ ಸಿಎಂ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ.

    | ಪ್ರಭಾವಿ ಸಚಿವ

    ಸ್ವಂತ ಜಿಲ್ಲೆಗೆ ತಾಕೀತು: ಬಹುತೇಕ ಸಚಿವರು ಸ್ವಂತ ಜಿಲ್ಲೆಯ ಉಸ್ತುವಾರಿಯನ್ನೇ ನೀಡಬೇಕು ಎಂದು ಪಟ್ಟು ಹಿಡಿದಿರುವುದು ಸಿಎಂಗೆ ನುಂಗಲಾರದ ತುತ್ತಾಗಿದೆ. ತುಮಕೂರು ಜಿಲ್ಲೆಯಲ್ಲಿ ಜೆ.ಸಿ.ಮಾಧುಸ್ವಾಮಿ, ಚಿಕ್ಕಬಳ್ಳಾಪುರಕ್ಕೆ ಡಾ.ಸುಧಾಕರ್, ಮಂಡ್ಯಕ್ಕೆ ನಾರಾಯಣಗೌಡ ಸೇರಿ ಹಲವು ಜಿಲ್ಲೆಯಲ್ಲಿ ಅದೇ ಜಿಲ್ಲೆಯವರೇ ಉಸ್ತುವಾರಿಗಳಾಗಿದ್ದಾರೆ. ಸ್ವಂತ ಜಿಲ್ಲೆ ಜವಾಬ್ದಾರಿಯನ್ನು ಬಿಟ್ಟುಕೊಡಲು ಬಿಲ್​ಕುಲ್ ಅವರು ಒಪು್ಪತ್ತಿಲ್ಲ.

    ಸಿಎಂ ಬೊಮ್ಮಾಯಿಗೆ ಯಾರಾದರೂ ಗದೆ-ಖಡ್ಗ ಉಡುಗೊರೆಯಾಗಿ ನೀಡಿದರೆ ಅವರೇನು ಮಾಡುತ್ತಾರೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts