More

    ನಾಸಾದಿಂದ ಜೇಮ್ಸ್ ವೆಬ್ ಯಶಸ್ವಿ ಉಡಾವಣೆ; ವಿಶ್ವದ ಶಕ್ತಿಶಾಲಿ ಬಾಹ್ಯಾಕಾಶ ಟೆಲಿಸ್ಕೋಪ್ 75 ಸಾವಿರ ಕೋಟಿ ರೂ. ವೆಚ್ಚ

    ಕೌರೌ (ಫ್ರಾನ್ಸ್): ವಿಶ್ವದ ಅತ್ಯಂತ ಶಕ್ತಿಶಾಲಿ ಬಾಹ್ಯಾಕಾಶ ಟೆಲಿಸ್ಕೋಪ್ ಉಪಗ್ರಹವನ್ನು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ, ಫ್ರೆಂಚ್ ಗಯಾನಾ ಉಡಾವಣೆ ನೆಲೆಯಿಂದ ಶನಿವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ. 9.3 ಲಕ್ಷ ಮೈಲಿ ಎತ್ತರ ಕಕ್ಷೆಯಲ್ಲಿ ಇದನ್ನು ಸ್ಥಾಪಿಸಲಾಗುತ್ತದೆ. ಈ ಕಕ್ಷೆಗೆ ತಲುಪಲು ಸುಮಾರು ಒಂದು ತಿಂಗಳು ಸಮಯ ತೆಗೆದುಕೊಳ್ಳಲಿದೆ.

    ಯುರೋಪ್ ಹಾಗೂ ಕೆನಡಾದ ಬಾಹ್ಯಾಕಾಶ ಸಂಸ್ಥೆಗಳ ಜತೆ ಜಂಟಿಯಾಗಿ ನಾಸಾ ಈ ಯೋಜನೆ ಕೈಗೊಂಡಿದೆ. ಸುಮಾರು 75 ಸಾವಿರ ಕೋಟಿ ರೂ. ವೆಚ್ಚದಲ್ಲಿ ಈ ಟೆಲಿಸ್ಕೋಪ್ ನಿರ್ಮಾಣ ಮಾಡಲಾಗಿದೆ. ಭೂಮಿ ಮೇಲೆ ಹಾರಾಡುತ್ತಿರುವ ಪಕ್ಷಿಗಳನ್ನು ಈ ಟೆಲಿಸ್ಕೋಪ್ ಬಾಹ್ಯಾಕಾಶದಿಂದಲೇ ಗುರುತಿಸುವ ಶಕ್ತಿಯನ್ನು ಹೊಂದಿದೆ. ಇದು ವಿಶ್ವದಲ್ಲೇ ಅತ್ಯಂತ ಶಕ್ತಿಶಾಲಿಯಾಗಿದೆ. 1990ರಲ್ಲಿ ಉಡಾವಣೆ ಮಾಡಲಾದ ಹಬಲ್ ಟೆಲಿಸ್ಕೋಪ್​ಗಿಂತ ಇದು 100 ಪಟ್ಟು ಹೆಚ್ಚು ಬಲಿಷ್ಠವಾಗಿದೆ.

    ಅತಿದೊಡ್ಡ ಯೋಜನೆ: ಇದು ಅಮೆರಿಕದ ಇತಿಹಾಸದಲ್ಲೇ ಅತಿದೊಡ್ಡ ಅಂತಾರಾಷ್ಟ್ರೀಯ ಬಾಹ್ಯಾಕಾಶ ಯೋಜನೆಯಾಗಿದೆ. ಇದಕ್ಕೆ ನಾಸಾದ ಎರಡನೇ ಮುಖ್ಯಸ್ಥರಾಗಿದ್ದ ಜೇಮ್್ಸ ವೆಬ್ ಅವರ ಹೆಸರು ಇಡಲಾಗಿದೆ.

    ಉದ್ದೇಶ ಏನು?: ಭೂಮಿಯ ಉಗಮವಾದ ಸಂದರ್ಭದಲ್ಲಿ ಇದ್ದ ಗ್ಯಾಲೆಕ್ಸಿಗಳು, ಉಲ್ಕೆಗಳು, ಗ್ರಹಗಳ ಕುರಿತು ಅಧ್ಯಯನ ನಡೆಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಬ್ರಹ್ಮಾಂಡದ ಸೃಷ್ಟಿಯ ಕುರಿತು ಅನೇಕ ಕುತೂಹಲಕಾರಿ ಅಂಶಗಳನ್ನು ಇದು ಬಹಿರಂಗಪಡಿಸುವ ನಿರೀಕ್ಷೆ ಇದೆ. ಅನ್ಯಗ್ರಹ ಜೀವಿಗಳ ಇರುವಿಕೆ ಕುರಿತು ವೈಜ್ಞಾನಿಕ ಲೋಕದಲ್ಲಿ ಹಲವು ವರ್ಷಗಳಿಂದ ಚರ್ಚೆ ನಡೆಯುತ್ತಿದೆ. ಇವುಗಳ ಅಧ್ಯಯನಕ್ಕೂ ಟೆಲಿಸ್ಕೋಪ್ ನೆರವಾಗಲಿದೆ. ಬಾಹ್ಯಾಕಾಶದಿಂದಲೇ ಇತರ ಗ್ರಹಗಳ ಮೇಲಿನ ಸ್ಥಿತಿ ಕುರಿತು ಇದು ಅಧ್ಯಯನ ನಡೆಸಲಿದೆ. ಅಗತ್ಯ ದತ್ತಾಂಶ, ಫೋಟೊಗಳನ್ನು ಸಂಗ್ರಹಿಸಿ ನಿಯಂತ್ರಣಾ ಕೇಂದ್ರಕ್ಕೆ ಕಳುಹಿಸುತ್ತದೆ.

    ಹಬಲ್ ಜಾಗಕ್ಕೆ ಜೇಮ್ಸ್: 1990ರಲ್ಲಿ ಉಡಾವಣೆ ಮಾಡಲಾಗಿದ್ದ ಹಬಲ್ ಟೆಲಿಸ್ಕೋಪ್ ಜಾಗವನ್ನು ಜೇಮ್ಸ್ ವೆಬ್ ತುಂಬಲಿದೆ. ಹಬಲ್ ಟೆಲಿಸ್ಕೋಪ್ ಸಹಾಯದಿಂದ ಭೂಮಿಯ ಕುರಿತು ಅಧ್ಯಯನ ನಡೆಸಲಾಗಿತ್ತು. ಇದರಿಂದ ಸಾಕಷ್ಟು ಹೊಸ ಅಂಶಗಳು ತಿಳಿದುಬಂದಿದ್ದವು. 6 ತಿಂಗಳ ಹಿಂದೆ ಹಬಲ್ ತಾಂತ್ರಿಕ ಕಾರಣದಿಂದ ಕೆಲಸ ಸ್ಥಗಿತಗೊಳಿತ್ತು.

    ಸಿಎಂ ಬೊಮ್ಮಾಯಿಗೆ ಯಾರಾದರೂ ಗದೆ-ಖಡ್ಗ ಉಡುಗೊರೆಯಾಗಿ ನೀಡಿದರೆ ಅವರೇನು ಮಾಡುತ್ತಾರೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts