More

    ತಂದೆ ಗಿಫ್ಟ್​​ ಮಾಡಿದ್ದ ಡೈಮಂಡ್​ ರಿಂಗ್​ ಕೊಟ್ಟು ತಂದೆಯನ್ನೇ ಕೊಲ್ಲಿಸಿದ ಪುತ್ರಿ: ಉದ್ಯಮಿ ಕೊಲೆ ರಹಸ್ಯ ಬಯಲು

    ಜಮ್ಶೆಡ್​ಪುರ: ಜಾರ್ಖಂಡ್​ನಲ್ಲಿ ನಡೆದ ಉದ್ಯಮಿ ಕನ್ಹಯ್ಯ ಸಿಂಗ್ ಕೊಲೆಗೆ ಸಂಬಂಧಿಸಿದಂತೆ ಮೃತನ ಮಗಳು ಸೇರಿದಂತೆ ನಾಲ್ವರು ಆರೋಪಿಗಳನ್ನು ಜಾರ್ಖಂಡ್​ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳನ್ನು ಮೃತ ಕನ್ಹಯ್ಯ ಸಿಂಗ್​ ಮಗಳು ಅಪರ್ಣಾ ಸಿಂಗ್​ (19), ಆಕೆಯ ಬಾಯ್​ಫ್ರೆಂಡ್​ ರಾಜ್​ವೀರ್​​ (21), ನಿಖಿಲ್​ ಗುಪ್ತ ಮತ್ತು ಸೌರಭ್​ ಕಿಸ್ಕು ಎಂದು ಗುರುತಿಸಲಾಗಿದೆ. ಜೂನ್​ 30ರಂದ ಜಾರ್ಖಂಡ್​ನ ಆದಿತ್ಯಾಪುರದಲ್ಲಿ ಕನ್ಹಯ್ಯಾ ಸಿಂಗ್ ಕೊಲೆ ನಡೆದಿತ್ತು. ರಾಜ್​ವೀರ್​ ಜೊತೆಗಿನ ಮಗಳ ಪ್ರೇಮ ಸಂಬಂಧವನ್ನು ಕನ್ಹಯ್ಯ ತೀವ್ರವಾಗಿ ವಿರೋಧಿಸಿದ್ದೇ ಕೊಲೆಗೆ ಕಾರಣ ಎಂದು ಹೇಳಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಉಳಿದ ಇಬ್ಬರು ಆರೋಪಿಗಳು ಸದ್ಯ ತಲೆಮರೆಸಿಕೊಂಡಿದ್ದು, ಶೋಧ ಕಾರ್ಯಾಚರಣೆ ನಡೆಯುತ್ತಿದೆ.

    ತಂದೆ ಗಿಫ್ಟ್​​ ಮಾಡಿದ್ದ ಡೈಮಂಡ್​ ರಿಂಗ್​ ಕೊಟ್ಟು ತಂದೆಯನ್ನೇ ಕೊಲ್ಲಿಸಿದ ಪುತ್ರಿ: ಉದ್ಯಮಿ ಕೊಲೆ ರಹಸ್ಯ ಬಯಲು
    ಕೊಲೆಯಾದ ಕನ್ಹಯ್ಯ ಸಿಂಗ್​

    ಜೂನ್​ 30 ರಂದು ಹರಿ ಒಮ್​ನಗರದಲ್ಲಿರುವ ತನ್ನ ಅಪಾರ್ಟ್​ಮೆಂಟ್​ ಹೊರಭಾಗದಲ್ಲಿ ಕನ್ಹಯ್ಯ ಸಿಂಗ್​ ರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ವಾಹನವೊಂದರಲ್ಲಿ ಘಟನಾ ಸ್ಥಳಕ್ಕೆ ಬಂದ ಮೂವರು ಸದಸ್ಯರಿರುವ ದುಷ್ಕರ್ಮಿಗಳ ಗ್ಯಾಂಗ್​, ಕನ್ಹಯ್ಯರತ್ತ ಗುಂಡು ಹಾರಿಸಿ ಅಲ್ಲಿಂದ ಪರಾರಿಯಾಗಿತ್ತು.

    ಐದು ದಿನಗಳ ಕಾಲ ಕೊಲೆಗೆ ಸಂಚು ರೂಪಿಸಿದ್ದ ರಾಜ್​ವೀರ್​ ಮತ್ತು ಆತನ ದಾಳಿಕೋರರ ತಂಡ, ಅಪರ್ಣಾ ಒಪ್ಪಿಗೆ ಪಡೆದುಕೊಂಡು ತಮ್ಮ ಯೋಜನೆಯನ್ನು ಕಾರ್ಯಗತಗೊಳಿಸಿದ್ದಾರೆ. ತಂದೆ ಉಡುಗೊರೆಯಾಗಿ ನೀಡಿದ್ದ ಡೈಮಂಡ್​ ರಿಂಗ್​ ಅನ್ನು ತನ್ನ ಬಾಯ್​ಫ್ರೆಂಡ್​ಗೆ ನೀಡಿ, ಕೊಲೆ ಮಾಡಲು ಶೂಟರ್​ಗಳಿಗೆ ಮುಂಗಡ ಹಣದ ರೂಪದಲ್ಲಿ ಅಪರ್ಣಾ ನೀಡಿದ್ದಳು ಎಂದು ತಿಳಿದುಬಂದಿದೆ.

    ತನಿಖಾ ತಂಡವು ಈ ಪ್ರಕರಣವನ್ನು ವೈಜ್ಞಾನಿಕವಾಗಿ ಬಗೆಹರಿಸಿದೆ ಮತ್ತು ಸಹಚರರೊಬ್ಬರ ಬಂದೂಕು, ಖಾಲಿ ಕಾಟ್ರಿಡ್ಜ್‌ಗಳು, ಶೂ ಮತ್ತು ರಕ್ತಸಿಕ್ತ ಶರ್ಟ್ ಮತ್ತು ವಜ್ರದ ಉಂಗುರದಂತಹ ಪುರಾವೆಗಳನ್ನು ಸಹ ಸಂಗ್ರಹಿಸಿದೆ. ಅಪರ್ಣಾ ತನ್ನ ತಂದೆಯ ಸ್ಥಳವನ್ನು ಆರೋಪಿಗೆ ವಾಟ್ಸಾಪ್‌ನಲ್ಲಿ ಒದಗಿಸಿದ್ದಳು ಎಂಬುದನ್ನು ಪೊಲೀಸರು ಕಂಡುಕೊಂಡಿದ್ದಾರೆ.

    ಕೊಲೆ ಮಾಡಿದ ಆರೋಪಿಗಳಲ್ಲಿ ಒಬ್ಬನಾದ ಸೌರಭ್​ ಕಿಸ್ಕು ಸೆರೈಕೆಲಾ-ಖಾರ್ಸ್ವಾನ್​ ಜಿಲ್ಲೆಯ ಕಾಂಗ್ರೆಸ್​ ಅಧ್ಯಕ್ಷ ಛೊತ್ರೈ ಕಿಸ್ಕು ಅವರ ಪುತ್ರ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

    ಹೂತಿದ್ದ ಶವದ ಬಾಯಿಗೆ ಪೈಪ್ ಮೂಲಕ ನೀರುಣಿಸಿದ ಗ್ರಾಮಸ್ಥರು! ಕಾರಣ ಕೇಳಿದ್ರೆ ಅಚ್ಚರಿ ಪಡ್ತೀರಾ

    ಆಫೀಸ್​ ಮೀಟಿಂಗ್ ಎಂದು ಲವರ್ ಜತೆ ಮಾಲ್ಡೀವ್ಸ್​ಗೆ: ಪತ್ನಿಯಿಂದ ತಪ್ಪಿಸಿಕೊಳ್ಳಲು ಹೋಗಿ ಜೈಲಲ್ಲಿ ಇಂಜಿನಿಯರ್​!

    VIDEOS| ಶ್ರೀಲಂಕಾ ಅಧ್ಯಕ್ಷರ ಮನೆಯೊಳಗೆ ಪ್ರತಿಭಟನಾಕಾರರ ಮೋಜು-ಮಸ್ತಿಯ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts