ಕೋವಿಡ್​ ಕಾಲರ್ ಟ್ಯೂನ್​ ಕೇಳಿ ಕೇಳಿ ಸುಸ್ತಾಗಿರುವವರಿಗೆ ಇಲ್ಲಿದೆ ಒಂದು ಗುಡ್​ ನ್ಯೂಸ್​..!

Covid Caller Tune
Published on

ನವದೆಹಲಿ: ಇಷ್ಟು ದಿನ ಕೋವಿಡ್​ ಕಾಲರ್​ ಟ್ಯೂನ್​ ಕೇಳಿ ಕೇಳಿ ಸುಸ್ತಾಗಿದ್ದ ಜನರಿಗೆ ಇದೀಗ ಗುಡ್​ ನ್ಯೂಸ್​ ಒಂದು ಸಿಕ್ಕಿದೆ. ಅದೇನೆಂದರೆ, ಕೋವಿಡ್ ಕಾಲರ್ ಟ್ಯೂನ್‌ಗಳು ಇನ್ನು ಮುಂದೆ ಕೇಳಿಸುವುದಿಲ್ಲ. ಶೀಘ್ರದಲ್ಲೇ ಕಾಲರ್ ಟ್ಯೂನ್​ಗೆ ಅಂತ್ಯ ಹಾಡಲಾಗುತ್ತದೆ. ಕೇಂದ್ರ ಆರೋಗ್ಯ ಸಚಿವಾಲಯವು ಕೋವಿಡ್ ಕಾಲರ್​ ಟ್ಯೂನ್​ಗಳನ್ನು ಸ್ಥಗಿತಗೊಳಿಸುವುದನ್ನು ಪರಿಶೀಲಿಸುತ್ತಿದೆ.

ಕೋವಿಡ್-19 ಕುರಿತು ಜಾಗೃತಿಗಾಗಿ ಟೆಲಿಕಾಂ ಆಪರೇಟರ್‌ಗಳು ಪರಿಚಯಿಸಿದ ಪ್ರೀ-ಕಾಲ್-ಆಡಿಯೋ ಜಾಹೀರಾತುಗಳು ಮತ್ತು ಕಾಲರ್-ಟ್ಯೂನ್‌ಗಳನ್ನು ಶೀಘ್ರದಲ್ಲೇ ಸ್ಥಗಿತಗೊಳಿಸಲಾಗುವುದು. ದೇಶದಲ್ಲಿ ಕರೊನಾ ಪ್ರಕರಣಗಳು ಇಳಿಮುಖವಾಗುತ್ತಿದ್ದು, ಕೋವಿಡ್ ಪೂರ್ವ ಕರೆ ಸಂದೇಶಗಳನ್ನು ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಕೋವಿಡ್ ಕಾಲರ್ ಟ್ಯೂನ್‌ಗಳಿಂದಾಗಿ ತುರ್ತು ಸಮಯದಲ್ಲಿ ಬೇರೆಯವರಿಗೆ ಫೋನ್ ಕರೆಗಳನ್ನು ಮಾಡಲು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಕಾಲರ್ ಟ್ಯೂನ್‌ಗಳನ್ನು ಅಮಾನತುಗೊಳಿಸಲು ಕೇಂದ್ರವು ಪರಿಗಣಿಸುತ್ತಿದೆ. ದೂರಸಂಪರ್ಕ ಇಲಾಖೆ ಈಗಾಗಲೇ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆದಿದೆ.

ಭಾರತದ ಸೆಲ್ಯುಲರ್ ಆಪರೇಟರ್‌ಗಳ ಕೇಂದ್ರವು ಕಾಲರ್ ಟ್ಯೂನ್ ಅನ್ನು ಸ್ಥಗಿತಗೊಳಿಸಲು ಮೊಬೈಲ್ ಬಳಕೆದಾರರಿಂದ ಸ್ವೀಕರಿಸಿದ ವಿನಂತಿಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿವೆ. ಹೀಗಾಗಿ ಕಾಲರ್​ ಟ್ಯೂಬ್​ ರದ್ದು ಮಾಡುವ ನಿರ್ಧಾರಕ್ಕೆ ಬಂದಿದೆ ಎಂದು ತಿಳಿದುಬಂದಿದೆ.

ಲಸಿಕೆ ಮತ್ತು ಕೋವಿಡ್ ಹಿನ್ನೆಲೆಯಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಕುರಿತು ಜಾಗೃತಿ ಮೂಡಿಸಲು ಕೇಂದ್ರವು 2020 ರಲ್ಲಿ ಕಾಲರ್ ಟ್ಯೂನ್‌ಗಳನ್ನು ಪರಿಚಯಿಸಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net