More

    VIDEO| ವೃದ್ಧರೊಬ್ಬರ ಮೇಲೆ ಮನಬಂದಂತೆ ಥಳಿಸಿದ ಕಾನ್ಸ್​ಟೇಬಲ್​: ವಿಡಿಯೋ ನೋಡಿ ನೆಟ್ಟಿಗರ ಆಕ್ರೋಶ

    ಭೋಪಾಲ್​: ವಯಸ್ಸಾದ ವ್ಯಕ್ತಿಯ ಮೇಲೆ ಪೊಲೀಸ್​ ಕಾನ್ಸ್​ಟೇಬಲ್​ ಓರ್ವ ಮನಬಂದಂತೆ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

    ವಿಡಿಯೋ ವೈರಲ್​ ಆದ ಬೆನ್ನಲ್ಲೇ ರೇವಾ ಜಿಲ್ಲೆಯ ಪೊಲೀಸ್​ ಕಾನ್ಸ್​ಟೇಬಲ್​ನನ್ನು ಅಮಾನತು ಮಾಡಲಾಗಿದೆ. ಮೂಲಗಳ ಪ್ರಕಾರ ಕಾನ್ಸ್​ಟೇಬಲ್​ ತನ್ನ ಸಹ ಪ್ರಯಾಣಿಕರ ಜೊತೆ ರೈಲು ನಿಲ್ದಾಣದಲ್ಲಿ ಇರುವಾಗ ಪಾನಮತ್ತ ವಯಸ್ಸಾದ ವ್ಯಕ್ತಿ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಇದರಿಂದ ರೊಚ್ಚಿಗೆದ್ದಿರುವ ಕಾನ್ಸ್​ಟೇಬಲ್​ ಹಿರಿಯ ವ್ಯಕ್ತಿ ಎಂಬುದನ್ನು ನೋಡದೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

    ಕಾನ್ಸ್​ಟೇಬಲ್​ನನ್ನು ಅನಂತ್​ ಮಿಶ್ರಾ ಎಂದು ಗುರುತಿಸಲಾಗಿದೆ. ಈ ಘಟನೆ ಮಧ್ಯಪ್ರದೇಶದ ಜಬಲ್​ಪುರ ರೈಲು ನಿಲ್ದಾಣದಲ್ಲಿ ನಡೆದಿದೆ. ಹಿರಿಯ ವ್ಯಕ್ತಿಯ ಮುಖಕ್ಕೆ ಪಂಚ್​ ಮಾಡಿದ್ದಲ್ಲದೆ, ಆತನ ಕಾಲಿಡಿದು ಎಳೆದುಕೊಂಡು ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ನಿಂತು ತೆಲೆಕೆಳಗೆ ಮಾಡಿ ಹಳಿಯ ಮೇಲೆ ಬೀಳಸುವುದಾಗಿ ಎದರಿಸಿದ್ದಾನೆ. ಅಲ್ಲದೆ, ಕಾಲಿನಿಂದ ಒದ್ದಿರುವುದು ವಿಡಿಯೋದಲ್ಲಿದೆ.

    ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ಕಾನ್ಸ್​ಟೇಬಲ್​ ವಿರುದ್ಧ ಕೆಂಡಾಮಂಡಲರಾಗಿದ್ದು, ತರಾಟೆಗೆ ತೆಗೆದುಕೊಂಡಿದ್ದಾರೆ. ತೊಂದರೆ ಕೊಟ್ಟಿದ್ದರೆ, ಬುದ್ಧಿ ಹೇಳಬೇಕು, ಅದನ್ನು ಬಿಟ್ಟು ಈ ರೀತಿ ದೌರ್ಜನ್ಯ ಎಸಗುವುದು ಸರಿಯಲ್ಲ ಎಂದಿದ್ದಾರೆ. ತಕ್ಷಣವೇ ಕಾನ್ಸ್​ಟೇಬಲ್​ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ.

    ಜಬಲ್‌ಪುರ ರೈಲು ನಿಲ್ದಾಣದಲ್ಲಿ ವೃದ್ಧರೊಬ್ಬರ ಮೇಲೆ ಕಾನ್‌ಸ್ಟೆಬಲ್ ಅನಂತ್ ಮಿಶ್ರಾ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ತನಿಖೆ ನಡೆಸಿದಾಗ, ಕಾನ್‌ಸ್ಟೆಬಲ್ ಅನಂತ್ ಮಿಶ್ರಾ, ರೇವಾ ಜಿಲ್ಲಾ ಪೊಲೀಸ್ ಠಾಣೆಯ ಕಾನ್ಸ್​ಟೇಬಲ್​ ಎಂದು ತಿಳಿದಿದೆ. ಅವರನ್ನು ತಕ್ಷಣ ಅಮಾನತುಗೊಳಿಸಲಾಗಿದೆ ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಪ್ರತಿಮಾ ಪಟೇಲ್ ತಿಳಿಸಿದ್ದಾರೆ. (ಏಜೆನ್ಸೀಸ್​)

    ಡಬಲ್ ಎಂಜಿನ್ ಸರ್ಕಾರದಿಂದ ಡಬಲ್ ಗೇಮ್: ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ವಾಗ್ದಾಳಿ

    ಟಿವಿ ನೋಡುತ್ತಾ ಮ್ಯಾಗಿ ಮಾಡಿ ತಿಂದ ಮಹಿಳೆ ದುರಂತ ಸಾವು! ಇದರ ಮಧ್ಯೆ ನಡೆದಿದ್ದು ಮಹಾ ಎಡವಟ್ಟು

    ಚಿಕ್ಕ ವಯಸ್ಸಿನಲ್ಲೇ ಪ್ರೀತಿಸಿ 18 ವರ್ಷ ತುಂಬಿದ ಬಳಿಕ ಮದ್ವೆಯಾದ ಯುವತಿಯ ಬದುಕು ದುರಂತ ಅಂತ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts