67ರ ವೃದ್ಧೆ ಜತೆ ಲಿವಿಂಗ್​ ಟುಗೆದರ್​ಗೆ ಅಫಿಡೆವಿಟ್​ ಮಾಡಿಸಿದ 28ರ ಯುವಕ! ಕಾರಣ ಕೇಳಿದ್ರೆ ಬೆರಗಾಗ್ತೀರಾ

Notary
Published on

ಗ್ವಾಲಿಯರ್​: ಯುವಕನೊಬ್ಬ ಹಿರಿಯ ಮಹಿಳೆಯೊಬ್ಬಳ ಜತೆಗಿನ ಲಿವಿಂಗ್​ ಲಿವಿಂಗ್​ ರಿಲೇಶನ್​​ಶಿಪ್​ ಸಂಬಂಧವನ್ನು ನೋಟರಿ ಮಾಡಿಸಿರುವ ವಿಚಿತ್ರ ಪ್ರಕರಣ ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ನಡೆದಿದೆ.

28 ವರ್ಷದ ಭೋಲುಮ್​ ಎಂಬಾತ ಮೊರೆನಾ ಜಿಲ್ಲೆಯ ನಿವಾಸಿ 67 ವರ್ಷದ ರಾಮಕಾಲಿ ಜತೆ ಲಿವಿಂಗ್​ ರಿಲೇಶನ್​​ಶಿಪ್​ ಹೊಂದಿದ್ದು, ತಮ್ಮ ಸಂಬಂಧವನ್ನು ಗ್ವಾಲಿಯರ್ ಜಿಲ್ಲಾ​ ನ್ಯಾಯಾಲಯದಲ್ಲಿ ಮಂಗಳವಾರ ನೋಟರಿ ಮಾಡಿಸಿಕೊಳ್ಳುವ ಮೂಲಕ ಎಲ್ಲರನ್ನು ಚಕಿತಗೊಳಿಸಿದ್ದಾರೆ.

ರಾಮಕಾಲಿ ಮತ್ತು ಭೋಲುಮ್​ ಇಬ್ಬರು ಸಹ ಕೈಲಾರಸ್​ ನಿವಾಸಿಗಳು. ಇಬ್ಬರು ಮದುವೆ ಮಾಡಿಕೊಳ್ಳಲು ಬಯಸಿಲ್ಲ. ಆದರೆ, ತಮ್ಮ ಲಿವಿಂಗ್​ ರಿಲೇಶನ್​ಶಿಪ್​ ಅನ್ನು ಗಮನದಲ್ಲಿಟ್ಟುಕೊಂಡು ಅದನ್ನು ನೋಟರಿ ಮಾಡಿಸಿಕೊಳ್ಳುವ ಮೂಲಕ ತಮ್ಮ ಸಂಬಂಧಕ್ಕೆ ಅಧಿಕೃತ ಮುದ್ರೆಯನ್ನು ಒತ್ತಿದ್ದಾರೆ. ಭವಿಷ್ಯದಲ್ಲಿ ತಮ್ಮ ಸಂಬಂಧದ ಬಗ್ಗೆ ಯಾವುದೇ ಜಗಳಗಳು ಉಂಟಾಗಬಾರದು ಎಂದು ಮುಂಚಿತವಾಗಿ ನೋಟರಿ ಮಾಡಲು ಬಂದಿದ್ದೇವೆ ಎಂದು ದಂಪತಿಗಳು ಹೇಳಿಕೊಂಡಿದ್ದಾರೆ.

ಇಬ್ಬರು ನೋಟರಿ ಮಾಡಿಸಿರುವ ಬಗ್ಗೆ ಮಾತನಾಡಿರುವ ವಕೀಲ ಪ್ರದೀಪ್ ಅವಸ್ಥಿ, " ನೋಟರಿಯಂತಹ ದಾಖಲೆಗಳು ಬದ್ಧವಾಗಿಲ್ಲದಿದ್ದರೂ ವಿವಾದಗಳನ್ನು ತಪ್ಪಿಸಲು" ದಂಪತಿಗಳು ಲಿವಿಂಗ್​ ರಿಲೇಶನ್​ಶಿಪ್​ ಅನ್ನು ನೋಟರಿ ಮಾಡಿಸಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net