

ಮುಂಬೈ: ಬಿಲಿಯನೇರ್ ಉದ್ಯಮಿ, ಷೇರು ವ್ಯಾಪಾರಿ ಮತ್ತು ಹೂಡಿಕೆದಾರ ರಾಕೇಶ್ ಜುಂಜುನ್ವಾಲಾ (62) ಅವರು ಹೃದಯಾಘಾತದಿಂದ ಭಾನುವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಬೆಳಗ್ಗೆ 6.45ರ ಸುಮಾರಿಗೆ ವಿಧಿವಶರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. 1985ರಲ್ಲಿ ಕೇವಲ 5000 ರೂಪಾಯಿಗಳೊಂದಿಗೆ ರಾಕೇಶ್ ಅವರು ಷೇರು ಮಾರುಕಟ್ಟೆಗೆ ಪ್ರವೇಶ ನೀಡಿದರು. ಸತತ ಪರಿಶ್ರಮದಿಂದ ಯಶಸ್ವಿ ಉದ್ಯಮಿ ಎನಿಸಿಕೊಂಡರು. ಇಂದು ಅವರ ಆಸ್ತಿ ಮೌಲ್ಯ ಸುಮಾರು 5.5 ಬಿಲಿಯನ್ ಡಾಲರ್ ಆಗಿದೆ. ಫೋರ್ಬ್ಸ್ ಪಟ್ಟಿಯಲ್ಲೂ ರಾಕೇಶ್ ಸ್ಥಾನ ಪಡೆದಿದ್ದರು.
ರಾಕೇಶ್ ಜುಂಜುನ್ವಾಲಾ ಅವರು ಇತ್ತೀಚೆಗೆ ಆಗಸ್ಟ್ 7 ರಂದು ಹಾರಾಟ ನಡೆಸಿದ ಆಕಾಶ ಏರ್‌ನೊಂದಿಗೆ ವಾಯುಯಾನ ಉದ್ಯಮಕ್ಕೆ ಕಾಲಿಟ್ಟಿದ್ದರು. (ಏಜೆನ್ಸೀಸ್)