More

    ಟಿ20 ವಿಶ್ವಕಪ್​ಗೆ ಟೀಮ್​ ಇಂಡಿಯಾದ ಹೊಸ ಜರ್ಸಿ ಅನಾವರಣಗೊಳಿಸಿದ ಬಿಸಿಸಿಐ: ಇದರಲ್ಲಿದೆ ಒಂದು ವಿಶೇಷತೆ..!

    ನವದೆಹಲಿ: ಟಿ20 ವಿಶ್ವಕಪ್​ಗೆ ದಿನಗಣನೆ ಆರಂಭವಾಗಿದೆ. ಅಕ್ಟೋಬರ್ 17 ರಿಂದ ನವೆಂಬರ್ 14ರವರೆಗೆ ಯುಎಇನಲ್ಲಿ ಪುರುಷರ ಟಿ20 ವಿಶ್ವಕಪ್ ಟೂರ್ನಿ​ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಬಿಸಿಸಿಐ ಟೀಮ್​ ಇಂಡಿಯಾದ ಹೊಸ ಬ್ರ್ಯಾಂಡ್​ ಜರ್ಸಿಯನ್ನು ಬುಧವಾರ (ಅ.13) ಅನಾವರಣಗೊಳಿಸಿದೆ.

    ಅಭಿಮಾನಿಗಳ ಬಿಲಿಯನ್ ಚಿಯರ್ಸ್​ನಿಂದ ಸ್ಫೂರ್ತಿಗೊಂಡು​ ‘ಬಿಲಿಯನ್​ ಚಿಯರ್ಸ್​ ಜರ್ಸಿ’ ಅನ್ನು ನಾವು ಪ್ರಸ್ತುತ ಪಡಿಸಿದ್ದೇವೆ ಎಂದು ಟ್ವೀಟ್​ ಮಾಡಿರುವ ಬಿಸಿಸಿಐ, ಹೊಸ ಜರ್ಸಿ ತೊಟ್ಟು ಒಟ್ಟಿಗೆ ಪೋಸ್​​ ನೀಡಿರುವ ಕೆ.ಎಲ್​. ರಾಹುಲ್​, ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ, ರವೀಂದ್ರ ಜಡೇಜಾ ಮತ್ತು ಜಸ್ಪ್ರಿತ್​ ಬೂಮ್ರಾ ಅವರ ಫೋಟೋವನ್ನು ಪೋಸ್ಟ್​ ಮಾಡಿದೆ.

    ಹೊಸ ಜರ್ಸಿಯನ್ನು ಟೀಮ್​ ಇಂಡಿಯಾದ ಅಧಿಕೃತ ಪ್ರಾಯೋಜಕರಾಗಿರುವ ಎಂಪಿಎಲ್​ ಸ್ಫೋರ್ಟ್ಸ್​ (MPL Sports) ಉದ್ಘಾಟಿಸಿದೆ. ಇದು ಕೇವಲ ಒಂದು ತಂಡ ಮಾತ್ರವಲ್ಲ, ಭಾರತದ ಹೆಮ್ಮೆ. ಇದು ಕೇವಲ ಜರ್ಸಿ ಮಾತ್ರವಲ್ಲ, ಬಿಲಿಯನ್​​ ಅಭಿಮಾನಿಗಳ ಆಶೀರ್ವಾದ. ಟಿ20 ವಿಶ್ವಕಪ್​ಗೆ ಟೀಮ್​ ಇಂಡಿಯಾವನ್ನು ಹುರಿದುಂಬಿಸಲು ಸಿದ್ಧರಾಗಿ ಎಂದು ಎಂಪಿಎಲ್​ ಟ್ವೀಟ್​ ಮಾಡಿದೆ.

    ಪ್ರಸ್ತುತ ಬಿಡುಗಡೆ ಆಗಿರುವ ಹೊಸ ಜರ್ಸಿ ಗಾಢ ನೀಲಿ ಬಣ್ಣದ್ದಾಗಿದ್ದು, ಕಳೆದ ವರ್ಷ ಡಿಸೆಂಬರ್​ನಲ್ಲಿ ಬಿಡುಗಡೆಯಾಗಿದ್ದ ಕಡು ನೀಲಿ ಕಪ್ಪು ಮಾದರಿ ಜರ್ಸಿಯ ಬದಲಾದ ರೂಪವಾಗಿದೆ. ವಿಶೇಷವೆಂದರೆ, 1992ರ ವಿಶ್ವಕಪ್​ ಸಮಯದಲ್ಲಿ ಟೀಮ್​ ಇಂಡಿಯಾ ಧರಿಸಿದ್ದ ಜರ್ಸಿಗೆ ಪ್ರಸ್ತುತ ಜರ್ಸಿ ಹೋಲಿಕೆಯಾಗಿದೆ.

    ಐಸಿಸಿ ಟಿ20 ವಿಶ್ವಕಪ್​ಗೆ ಟೀಮ್​ ಇಂಡಿಯಾ ಪ್ರಕಟ: ಚಹಾಲ್​ ಔಟ್​, ಅಶ್ವಿನ್ ಅಚ್ಚರಿಯ ಆಯ್ಕೆ

    ಟಿ20 ವಿಶ್ವಕಪ್​ ವೇಳಾಪಟ್ಟಿ ಪ್ರಕಟ: ಅಕ್ಟೋಬರ್​ 24ಕ್ಕೆ ಇಂಡೋ-ಪಾಕ್​ ಕ್ರಿಕೆಟ್​ ಕದನ

    ಟಿ20 ವಿಶ್ವಕಪ್‌ ಬಹುಮಾನ ಮೊತ್ತ ಘೋಷಿಸಿದ ಐಸಿಸಿ- ಯಾರ ತೆಕ್ಕೆಗೆ ಬೀಳಲಿದೆ 12 ಕೋಟಿ ರೂ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts