ದೂರು ನೀಡಲು ಬಂದ ಮಹಿಳೆಯ ಬಳಿ ಮಸಾಜ್​ ಮಾಡಿಸಿಕೊಂಡು ದರ್ಪ ಮೆರೆದ ಠಾಣಾಧಿಕಾರಿ: ವಿಡಿಯೋ ವೈರಲ್​

Police Suspend
Published on

ಪಟನಾ: ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ಪೊಲೀಸ್​ ಠಾಣೆಯಲ್ಲೇ ಮಹಿಳೆಯೊಬ್ಬರ ಬಳಿ ಮಸಾಜ್​ ಮಾಡಿಸಿಕೊಂಡಿರುವ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಅಧಿಕಾರಿಯನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.

ಈ ಘಟನೆ ಬಿಹಾರದ ಸಹರ್ಸಾ ಜಿಲ್ಲೆಯಲ್ಲಿ ನಡೆದಿದೆ. ದೂರು ಕೊಡಲು ಠಾಣೆಗೆ ಬಂದ ಮಹಿಳೆಯ ಬಳಿ ಠಾಣೆಯ ಒಳಗಡೆ ಮಸಾಜ್​ ಮಾಡಿಸಿಕೊಂಡು ಹಿರಿಯ ಅಧಿಕಾರಿ ದರ್ಪ ಮೆರೆದಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಡಿಯೋದಲ್ಲಿ ಏನಿದೆ?

ನೌಹಟ್ಟಾ ಪೊಲೀಸ್ ಠಾಣೆಯ ದರ್ಹಾರ್ ಹೊರಠಾಣೆಯ ಹಿರಿಯ ಅಧಿಕಾರಿ ಶಶಿಭೂಷಣ ಸಿನ್ಹಾ ಎಂಬುವರು ತಮ್ಮ ಮೇಲಿನ ಅಂಗಿಯನ್ನು ಬಿಚ್ಚಿ ಮಹಿಳೆಯ ಬಳಿ ಮಸಾಜ್​ ಮಾಡಿಸಿಕೊಳ್ಳುತ್ತಾ ಫೋನ್​ನಲ್ಲಿ ಮಾತನಾಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಇದರ ಜತೆಗೆ ಅಧಿಕಾರಿ ಕೇಸ್​ಗೆ ಸಂಬಂಧ ಫೋನ್​ನಲ್ಲಿ ಮಾತನಾಡುತ್ತಿದ್ದರು ಎಂದು ತಿಳಿದುಬಂದಿದೆ.

ಈ ವಿಡಿಯೋ ಸಹರ್ಸಾ ಜಿಲ್ಲೆಯ ಪೊಲೀಸ್​ ವರಿಷ್ಠಾಧಿಕಾರಿ ಲಿಪಿ ಸಿಂಗ್​ ಅವರ ಗಮನಕ್ಕೆ ಬರುತ್ತಿದ್ದಂತೆ ಅಧಿಕಾರಿ ಶಶಿಭೂಷಣ ಸಿನ್ಹಾ ಅವರನ್ನು ಕೆಲಸದಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋಗೆ ಸಾರ್ವಜನಿಕ ವಲಯದಲ್ಲೂ ಆಕ್ರೋಶ ವ್ಯಕ್ತವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net