ಸ್ಪೈ ಕ್ಯಾಮೆರಾ ಬಳಸಿ ಮಹಿಳೆಯರ ನಗ್ನ ವಿಡಿಯೋ ಚಿತ್ರೀಕರಣ: ಈತನ ದುಷ್ಕೃತ್ಯದ ಹಿಂದಿದ್ದ ದುರುದ್ದೇಶವಿದು

Spy Camera
Published on

ಬೆಂಗಳೂರು: ಸ್ಪೈ ಕ್ಯಾಮೆರಾ ಬಳಸಿ ಮಹಿಳೆಯ ನಗ್ನ ವಿಡಿಯೋಗಳನ್ನು ಚಿತ್ರೀಕರಿಸಿ ನಂತರ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಮಾನ ಹರಾಜಾ ಮಾಡುವುದಾಗಿ ಬೆದರಿಸಿ ಅವರಿಂದ ಲೈಂಗಿಕ ಸುಖ ಪಡೆಯಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯನ್ನು ಪತ್ತೆ ಮಾಡಿ ಬಂಧಿಸುವಲ್ಲಿ ನಗರದ ಈಶಾನ್ಯ ವಿಭಾಗದ ಸಿ.ಇ.ಎನ್. ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಹೇಶ್ (30) ಬಂಧಿತ ಆರೋಪಿ. ಪರಿಚಯಸ್ಥ ಮಹಿಳೆಯರು ಮನೆಗೆ ಬಂದಾಗ ಅಥವಾ ಪರಿಚಯಸ್ಥರ ಮನೆಗೆ ಹೋದಾಗ ಸ್ಪೈ ಕ್ಯಾಮೆರಾವನ್ನು ಇಟ್ಟು ಆರೋಪಿ ರಹಸ್ಯವಾಗಿ ವಿಡಿಯೋ ಮಾಡಿಕೊಳ್ಳುತ್ತಿದ್ದ. ಮೊಬೈಲ್ ಚಾರ್ಜರ್​ನಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ಮಹಿಳೆಯರ ನಗ್ನ ವಿಡಿಯೋ ಮಾಡಿಕೊಳ್ಳುತ್ತಿದ್ದ.

ಇದಾದ ಬಳಿಕ ಮಹಿಳೆಗೆ ಇನ್ಸ್ಟಾ ಗ್ರಾಂನಲ್ಲಿ‌ ಮಸೇಜ್​ ಮಾಡುತ್ತಿದ್ದ. ನಕಲಿ ಖಾತೆಯಿಂದ ಮಹಿಳೆಗೆ ಅಶ್ಲೀಲವಾಗಿ ಮೆಸೇಜ್ ಮಾಡುತ್ತಿದ್ದ. ಅಲ್ಲದೆ, ತನ್ನೊಂದಿಗೂ ಅಶ್ಲೀಲವಾಗಿ ಮಾತಾಡುವಂತೆ ಒತ್ತಾಯಿಸುತ್ತಿದ್ದ. ಇಲ್ಲವಾದರೆ ತನ್ನ ಬಳಿ ಇರುವ ವಿಡಿಯೋ ಪೋಸ್ಟ್ ಮಾಡೋದಾಗಿ ಬೆದರಿಕೆ ಹಾಕುತ್ತಿದ್ದ.

ಕೆಲ ವಿಡಿಯೋ ತುಣುಕನ್ನು ಕಳಿಸಿ, ತನ್ನ ಲೈಂಗಿಕ ಬಯಕೆಯನ್ನು ಈಡೇರಿಸುವಂತೆ ಆರೋಪಿ ಬೆದರಿಕೆ ಹಾಕುತ್ತಿದ್ದ. ಈ ಸಂಬಂಧ ಈಶಾನ್ಯ ವಿಭಾಗದ ಸೈಬರ್ ಠಾಣೆಗೆ ಮಹಿಳೆಯೊಬ್ಬರು ದೂರು ನೀಡಿದ್ದರು. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆತನಿಂದ ಎರಡು ಸ್ಪೈ ಕ್ಯಾಮೆರಾ, ಲ್ಯಾಪ್​ಟಾಪ್, ಎರಡು ಪೆನ್​ಡ್ರೈವ್​, ಎರಡು ಮೆಮೊರಿ ಕಾರ್ಡ್​ ಮತ್ತು ಎರಡು ಮೊಬೈಲ್ ಜಪ್ತಿ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net