ಸರ್ವೋದಯ ದಿನ: ಜ.30ರಂದು ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಾಣಿ ವಧೆ, ಮಾಂಸ ಮಾರಾಟ ಮಾಡುವಂತಿಲ್ಲ

Chicken
Published on

ಬೆಂಗಳೂರು: ನಾಳೆ (ಜ.30) ಸರ್ವೋದಯ ದಿನಾಚರಣೆ ಹಿನ್ನೆಲೆಯಲ್ಲಿ ನಗರದಲ್ಲಿ ಪ್ರಾಣಿ ವಧೆ ಮತ್ತು ಮಾಂಸ ಮಾರಾಟವನ್ನು ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿಷೇಧಿಸಿದೆ.

ನಾಳೆ ಭಾನುವಾರ ಆಗಿರುವುದರಿಂದ ನಗರದಲ್ಲಿ ಬಹುತೇಕ ಮಾಂಸದಂಗಡಿಗಳು ತುಂಬಿ ತುಳುಕುತ್ತಿರುತ್ತವೆ. ಬಿಬಿಎಂಪಿ ಆದೇಶ ಮಾಂಸಪ್ರಿಯರಿಗೆ ಶಾಕ್​ ಆದರೂ, ಹಿಂದಿನಿಂದಲೂ ಸರ್ವೋದಯ ದಿನದಂದು ಇದು ನಡೆದುಕೊಂಡು ಬರುತ್ತಿರುವುದರಿಂದ ಎಲ್ಲರೂ ಬಿಬಿಎಂಪಿ ಆದೇಶವನ್ನು ಪಾಲಿಸಲೇಬೇಕಿದೆ. ಆದೇಶವನ್ನು ಮೀರಿ ಮಾಂಸ ಮಾರಾಟ ಮಾಡಿದರೆ ಸೂಕ್ತ ಕ್ರಮವನ್ನು ಬಿಬಿಎಂಪಿ ತೆಗೆದುಕೊಳ್ಳಲಿದೆ.

ಜನವರಿ 30 ಗಾಂಧೀಜಿ ಅವರ ಪುಣ್ಯ ಸ್ಮರಣೆಯ ದಿನ. ಇದನ್ನು ಹುತಾತ್ಮರ ದಿನವಾಗಿಯೂ ಆಚರಿಸಲಾಗುತ್ತದೆ. ಗಾಂಧಿ ಅವರು ಅಹಿಂಸೆಯ ಪ್ರತಿರೂಪ ಆಗಿರುವುದರಿಂದ ಅವರ ಪುಣ್ಯ ಸ್ಮರಣೆಯಂದು ಪ್ರಾಣಿ ವಧೆ ಮತ್ತು ಮಾಂಸ ಮಾರಾಟಕ್ಕೆ ಕಡಿವಾಣ ಹಾಕಲಾಗುತ್ತದೆ. ಈ ದಿನದಂದು ದೇಶಕ್ಕಾಗಿ ತ್ಯಾಗ ಮಾಡಿದ ಹುತಾತ್ಮರನ್ನು ಸ್ಮರಿಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net