

ಬೆಂಗಳೂರು: ಬಿಗ್ಬಾಸ್ ಸೀಸನ್ 8ರ ಮಹಿಳಾ ಸ್ಪರ್ಧಿ ದಿವ್ಯಾ ಉರುಡುಗ ಬಿಗ್ಬಾಸ್ ಮನೆಯಿಂದ ಹೊರಗಡೆ ತನ್ನ ಖ್ಯಾತಿಯನ್ನು ದಿನದಿಂದ ದಿನಕ್ಕೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಸೀಸನ್ನಿಂದ ಹೊರಬಿದ್ದರು ಅವರು ಪಡೆದಿರುವ ಖ್ಯಾತಿಗೆ ಅವಕಾಶಗಳು ಸಿಗಲಿವೆ ಎಂಬ ಮಾತುಗಳು ಕೇಳಿಬರುತ್ತಿವೆ.
ಬಿಗ್ಬಾಸ್ ಮನೆಯೊಳಗೆ ಸಹ ಸ್ಪರ್ಧಿ ಕೆ.ಪಿ. ಅರವಿಂದ್ ಜತೆ ಜೋಡಿ ಟಾಸ್ಕ್ ನಡೆದಾಗಿನಿಂದ ದಿವ್ಯಾ ಸಾಕಷ್ಟು ಬಾರಿ ಟ್ರೋಲ್ ಆಗಿದ್ದಾರೆ. ಆದರೆ, ಇದೀಗ ದಿವ್ಯಾ, ಬಿಗ್ಬಾಸ್ ಕನ್ನಡ ಇತಿಹಾಸದಲ್ಲೇ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಟ್ವಿಟರ್ ಟ್ರೆಂಡ್ ಆದ ಮೊದಲ ಮಹಿಳಾ ಸ್ಪರ್ಧಿ ಎಂಬ ಹೆಸರು ಪಡೆದುಕೊಂಡಿದ್ದಾರೆ.
21 ಸಾವಿರಕ್ಕೂ ಹೆಚ್ಚು ಟ್ವೀಟ್ಗಳು ದಿವ್ಯಾ ಹೆಸರಿನಲ್ಲಿ ಹರಿದಾಡಿವೆ. ಇದು ಬಿಗ್ಬಾಸ್ ಕನ್ನಡ ಇತಿಹಾಸದಲ್ಲೇ ಇದೇ ಮೊದಲು. ದಿವ್ಯಾ ನೀವು ನಿಜಕ್ಕೂ ಇದಕ್ಕೆ ಅರ್ಹರು. ಬಿಗ್ಬಾಸ್ ಮನೆಯೊಳಗೆ ನೀವು ತುಂಬಾ ಚೆನ್ನಾಗಿ ಕಾಣುವುದರ ಜತೆಯಲ್ಲೇ ಸೊಗಸಾಗಿ ಆಡುತ್ತಿದ್ದೀರಾ ಎಂದು ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.
ದಿವ್ಯಾರಿಗೆ ಹೆಚ್ಚು ಆದ್ಯತೆ ನೀಡುವಂತೆ ಕಲರ್ಸ್ ಕನ್ನಡವನ್ನು ನೆಟ್ಟಿಗರು ಕೇಳುತ್ತಿದ್ದಾರೆ. ಅಂದಹಾಗೆ ದಿವ್ಯಾ ಅವರಿಗೆ ಇಷ್ಟೊಂದು ಖ್ಯಾತಿ ಬರಲು ಅರವಿಂದ್ ಕೆ.ಪಿ. ಪ್ರಮುಖರು ಎಂದು ಹೇಳಲಾಗುತ್ತಿದೆ. ಇಬ್ಬರ ಕೆಮಿಸ್ಟ್ರಿ ಮನೆಯಲ್ಲಿ ಚೆನ್ನಾಗಿ ಕೆಲಸ ಮಾಡಿದೆ ಎಂದು ಹೇಳುತ್ತಿದ್ದಾರೆ. ಹೀಗಾಗಿಯೇ ಟ್ವಿಟರ್ನಲ್ಲಿ #Araviya ಹ್ಯಾಷ್ಟ್ಯಾಗ್ ಕೂಡ ಟ್ರೆಂಡ್ ಆಗಿದೆ. (ಏಜೆನ್ಸೀಸ್)