ನ್ಯಾಯಾಧೀಶರಿಗೆ ವೈ ಶ್ರೇಣಿಯ ಭದ್ರತೆ: ಸೋಕಾಲ್ಡ್ ಸೆಕ್ಯುಲರ್​ಗಳು ಎಲ್ಲಿ ಎಂದು ಸಿಎಂ ಬೊಮ್ಮಾಯಿ ಆಕ್ರೋಶ

bommai
Published on

ಬೆಂಗಳೂರು: ಹಿಜಾಬ್​ ವಿವಾದ ಪ್ರಕರಣದಲ್ಲಿ ತೀರ್ಪು ನೀಡಿದ ನ್ಯಾಯಾಧೀಶರಿಗೆ ಬೆದರಿಕೆ ಕರೆ ಹಿನ್ನೆಲೆಯಲ್ಲಿ ವೈ ಕ್ಯಾಟಗರಿ ಭದ್ರತೆ ಕೊಡಲು ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.

ಆರ್.ಟಿ. ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಧೀಶರಿಗೆ ವೈ ಕ್ಯಾಟಗರಿ ಭದ್ರತೆ ಕೊಡಲು ಹೇಳಿದ್ದೇನೆ. ತಮಿಳುನಾಡಿನಲ್ಲಿ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರ ಮೇಲೆ ಬೆದರಿಕೆ ಹಾಕಲಾಗಿದೆ. ದೇಶ ದ್ರೋಹದ ಶಕ್ತಿಗಳು ನ್ಯಾಯಾಧೀಶರಿಗೆ ಬೆದರಿಕೆ ಹಾಕುವಂತಹ ವ್ಯವಸ್ಥಿತ ಕೆಲಸ ಮಾಡುತ್ತಿವೆ ಎಂದು ಆಕ್ರೋಶ ಹೊರಹಾಕಿದರು.

ನ್ಯಾಯಾಲಯದ ತೀರ್ಪನ್ನು ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನೆ ಮಾಡುವ ಅವಕಾಶ ಇದೆ. ಆದರೂ ಇಂತಹ ಕೆಲಸಕ್ಕೆ ಮುಂದಾಗಿರುವುದು ಖಂಡನೀಯ. ನಾನು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇನೆ. ಕಠಿಣವಾದ ಸೆಕ್ಷನ್​​ಗಳನ್ನು ಹಾಕಿ ಕೇಸ್ ನಡೆಸಲು ಸೂಚನೆ ನೀಡಿದ್ದೇನೆ ಎಂದರು.

ಸೋಕಾಲ್ಡ್ ಸೆಕ್ಯುಲರ್ ಎಲ್ಲಿ?:

ಸೋಕಾಲ್ಡ್ ಸೆಕ್ಯುಲರ್​ಗಳು ಯಾಕೆ ಮೌನವಾಗಿದ್ದಾರೆ? ಒಂದು ವರ್ಗದ ಜನಕ್ಕೆ ಇಷ್ಟು ಓಲೈಕೆ ಮಾಡುವುದು ಸರಿಯಲ್ಲ. ಈಗಲಾದರೂ ಹೊರಗೆ ಬಂದು ಈ ಘಟನೆಯನ್ನು ಖಂಡಿಸಲಿ ಎಂದು ಪರೋಕ್ಷವಾಗಿ ಕಾಂಗ್ರೆಸ್ ಇಬ್ಬಗೆಯ ನೀತಿಗೆ ಟಾಂಗ್ ಕೊಟ್ಟರು.

ಖಾಸಗಿ ಬಸ್ ಅಪಘಾತ ಪ್ರಕರಣ:

ನಾವು ಅನೇಕ ನಿಯಮಗಳನ್ನು ತಂದಾಗಲೂ ಸಹ ಪೀಕ್ ಅವರ್ ನಲ್ಲಿ ರೂಲ್ಸ್ ಬ್ರೇಕ್ ಮಾಡುವ ಕೆಲಸ ಆಗುತ್ತಿದೆ. ನಿಯಮಗಳನ್ನು ಇನ್ನಷ್ಟು ಕಠಿಣ ಮಾಡುತ್ತೇವೆ.

ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದರೆ ಲೈಸೆನ್ಸ್ ರದ್ದು ಮಾಡಲಾಗುತ್ತದೆ ಎಂದು ಬೊಮ್ಮಾಯಿ ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net